ವಂದೇ ಮಾತರಂ ಏನೀ ವಿವಾದಂ?

ನಮ್ಮ ದೇಶ ಯಾವುದೇ ಒಂದು ಧರ್ಮ ಸಮುದಾಯಕ್ಕೆ ಸೇರಿದ್ದಲ್ಲ. ಈ ಭೂಮಿ ಇಲ್ಲಿ ವಾಸಿಸುವ ಎಲ್ಲಾ ಕುಲ ಮತ ಜಾತಿ ಧರ್ಮೀಯರಿಗೂ ಸಂಬಂಧಿಸಿದ್ದಾಗಿದೆ. ಇದು ಜ್ಯಾತ್ಯತೀತ ಧರ್ಮನಿರಪೇಕ್ಷ ಸಮಾಜವಾದಿ ದೇಶ ಎಂಬುದು ನಮ್ಮ ಸಂವಿಧಾನ ಪೀಠಿಕೆಯ ಪ್ರಮುಖ ಅಂಶವಾಗಿದೆ. ಹೀಗಿರುವಾಗ ಒಂದು ಧರ್ಮಕ್ಕೆ ಸೇರಿದ ದೇವತೆಗಳ ರೂಪಕಗಳಿರುವ ಗೀತೆಯನ್ನು ಎಲ್ಲಾ ಧರ್ಮೀಯರ ಮೇಲೆ ಹೇರಿಕೆ ಮಾಡುವುದು ಎಷ್ಟು ಸರಿ ಎಂಬುದನ್ನು ಆಲೋಚಿಸಬೇಕಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಈ ಸೋ ಕಾಲ್ಡ್ ದೇಶಭಕ್ತ ಸಂಘಿಗಳು ಇರೋದೇ ಹೀಗೆ. ಆಗಿ ಹೋದ ಭೂತಕಾಲದ ಚರಿತ್ರೆಯಿಂದ ತಮಗೆ ಬೇಕಾದ ಭಾವನಾತ್ಮಕ ವಿಷಯಗಳನ್ನು ಹೆಕ್ಕಿ ತಂದು ವರ್ತಮಾನವನ್ನು ತಲ್ಲಣಗೊಳಿಸುತ್ತಾರೆ. ದೇಶವನ್ನು ವೈಚಾರಿಕವಾಗಿ ಮುನ್ನಡೆಸುವ ಬದಲು ಸನಾತನತೆ ಪರಂಪರೆ ದೇವರು ಧರ್ಮದ ಹೆಸರಲ್ಲಿ ಹಿಮ್ಮುಖವಾಗಿ ಚಲಿಸುವಂತೆ ಮಾಡುತ್ತಿದ್ದಾರೆ.

ಈಗ ಎಲ್ಲಾ ಬಿಟ್ಟು ವಂದೇ ಮಾತರಂ ಗೀತೆಯನ್ನು ಮುನ್ನೆಲೆಗೆ ತಂದಿದ್ದಾರೆ. ಯಥಾವತ್ತಾಗಿ ಈ ಗೀತೆಯ ಆರೂ ಚರಣಗಳನ್ನು ರಾಷ್ಟ್ರಗೀತೆಯಾದ ಜನಮನ ಹಾಡುವುದಕ್ಕಿಂತಲೂ ಮುಂಚೆ ಎಲ್ಲಾ ಸರಕಾರಿ ಕಾರ್ಯಕ್ರಮಗಳು ಹಾಗೂ ಶಾಲೆಗಳಲ್ಲಿ ಎದ್ದು ನಿಂತು ಹಾಡುವುದನ್ನು ಈ ಬಿಜೆಪಿ ಸರಕಾರ ಕಡ್ಡಾಯಗೊಳಿಸಿದೆ. ಇದನ್ನು ಪಾಲಿಸದೇ ಇದ್ದವರಿಗೆ ಮೂರು ವರ್ಷ ಜೈಲು ಹಾಗೂ ದಂಡವನ್ನು ವಿಧಿಸಲಾಗುತ್ತದಂತೆ.

ಈಗ ಹೀಗೆ ಇದ್ದಕ್ಕಿದ್ದಂತೆ ವಂದೇ ಮಾತರಂ ಮೇಲೆ ಬಿಜೆಪಿ ಪ್ರಭುತ್ವಕ್ಕೆ ಪ್ರೀತಿ ಮೋಹ ಬಂದಿದ್ದಾದರೂ ಯಾಕೆ? ಅದಕ್ಕೆ ಎರಡು ಕಾರಣಗಳಿವೆ.

ಮೊದಲನೆಯದಾಗಿ, ಯಾವುದಾದರೂ ಸಮಸ್ಯೆಗಳಲ್ಲಿ ಸರಕಾರ ಸಿಕ್ಕಿ ವಿವಾದಗಳ ಕೇಂದ್ರವಾದಾಗ ಜನರ ಹಾಗೂ ಮಾಧ್ಯಮಗಳ ಗಮನವನ್ನು ಬೇರೆ ಕಡೆ ಸೆಳೆಯುವ ಮೂಲಕ ಸಮಸ್ಯೆಯ ತೀವ್ರತೆಯನ್ನು ಕಡಿಮೆಗೊಳಿಸುವುದು. ಎರಡನೆಯದಾಗಿ, ಬಹುಸಂಖ್ಯಾತ ಜನರನ್ನು ಭಾವನಾತ್ಮಕ ನೆಲೆಯಲ್ಲಿ ಭ್ರಮಾಧೀನಗೊಳಿಸಿ ತಮ್ಮ ಗುರಿಯನ್ನು ಸಾಧಿಸುವುದು.

ಈಗ ಪ್ರಧಾನಿ ಮೋದಿಯವರ ಮೇಲೆ ಗುರುತರ ಆರೋಪಗಳಿವೆ.

* ಕುಖ್ಯಾತ ಎಫ್‌ಸ್ಟೀನ್ ಫೈಲ್ ಪ್ರಕರಣದಲ್ಲಿ ಮೋದಿಯವರ ಹೆಸರು ಓಡಾಡುತ್ತಿದೆ

* ಅಮೇರಿಕದ ಟ್ರಂಪ್ ಗೆ ಸಂಪೂರ್ಣವಾಗಿ ಶರಣಾದ ಮೋದಿಯವರು ಭಾರತದ ಮಾರುಕಟ್ಟೆಯನ್ನು ಅಮೇರಿಕಕ್ಕೆ ತೆರಿಗೆ ಮುಕ್ತ ಮಾಡಿ ಈ ದೇಶದ ಹಿತಾಸಕ್ತಿಯನ್ನು ಮಾರಾಟ ಮಾಡಿದ್ದಾರೆ.

* ಸಂಸತ್ತಿನ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಹೇಡಿಯಂತೆ ಓಡಿದ್ದಾರೆ.

* ಸಂಸತ್ತಿನ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಮಾತಾಡುವ ಹಕ್ಕನ್ನೇ ಮೊಟಕುಗೊಳಿಸಿದ್ದಾರೆ.

* ಕೇಂದ್ರ ಬಜೆಟ್ ಚರ್ಚೆಗೆ ಮುನ್ನ ಜನರಲ್ ನರವಣೆಯವರ ಪುಸ್ತಕ ಸೇರಿದಂತೆ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪ ಮಾಡುವ ಸಾಂವಿಧಾನಿಕ ಅವಕಾಶಗಳನ್ನೇ ವಿಪಕ್ಷಗಳಿಂದ ಕಿತ್ತುಕೊಳ್ಳಲಾಗಿದೆ.

* ಪ್ರಧಾನ ಮಂತ್ರಿ ಕೌಶಲಾಭಿವೃದ್ದಿ ಯೋಜನೆಯಲ್ಲಿ ಖರ್ಚುಮಾಡಲಾದ ಹತ್ತು ಸಾವಿರ ಕೋಟಿಗೆ ಲೆಕ್ಕವೇ ಇಲ್ಲ ಎಂದು ಸಿಎಜಿ ವರದಿ ಹೇಳಿದೆ.

ಹೀಗೆ ಹಲವಾರು ವಾದ ವಿವಾದಗಳಲ್ಲಿ ಮೋದಿಯವರು ಸಿಲುಕಿ ಕೊಂಡಿದ್ದಾರೆ. ಅದರ ನಕಾರಾತ್ಮಕ ಪರಿಣಾಮ ಮುಂದಿರುವ ಕೆಲವು ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಆಗಬಹುದಾಗಿದೆ. ಹೀಗಾಗಿ ದೇಶದ ಜನರ ಗಮನವನ್ನು ಬೇರೆ ಯಾವುದಾದರೂ ಭಾವನಾತ್ಮಕ ವಿಷಯದತ್ತ ತಿರುಗಿಸಬೇಕಾದ ಅನಿವಾರ್ಯತೆ ಬಿಜೆಪಿ ಪಕ್ಷಕ್ಕಿರುವುದರಿಂದ ‘ವಂದೇ ಮಾತರಂ’ ಶಿಷ್ಟಾಚಾರವನ್ನು ಮುನ್ನೆಲೆಗೆ ತರಲಾಗಿದೆ.

ಏನಿದು ವಂದೇ ಮಾತರಂ? ಮೊದಲಿನಿಂದಲೂ ಈ ಗೀತೆ ಇತ್ತಲ್ವಾ? ಮತ್ತೆ ಯಾಕೆ ಅದನ್ನೀಗ ಹೊಸದಾಗಿ ಹೇರಲಾಗುತ್ತಿದೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ವಂದೇ ಮಾತರಂ ಎನ್ನುವ ಘೋಷಣೆ ಭಾರತೀಯರ ಸ್ವಾಭಿಮಾನದ ಸಂಕೇತವಾಗಿತ್ತು. ಬ್ರಿಟೀಷರ ದಮನದ ವಿರುದ್ಧ ಹೋರಾಡುವ ಅಸ್ತ್ರವೂ ಆಗಿತ್ತು. ಈಗ ವಂದೇ ಮಾತರಂ ಗೀತೆಗೆ 150 ವರ್ಷಗಳಾಗಿವೆ. 1875 ರಲ್ಲಿ ಬಂಗಾಳಿಯ ಸಾಹಿತಿ ಬಂಕಿಮ್ ಚಂದ್ರ ಚಟರ್ಜಿಯವರು ತಮ್ಮ ‘ಆನಂದಮಠ’ ಎನ್ನುವ ಕಾದಂಬರಿಯಲ್ಲಿ ವಂದೇ ಮಾತರಂ ಗೀತೆಯನ್ನು ಬರೆದಿದ್ದರು. ಅದು ಸಂಸ್ಕೃತ ಹಾಗೂ ಬಂಗಾಳಿ ಭಾಷೆಯಲ್ಲಿದೆ. ಸಂಪದ್ಭರಿತ ಭಾರತದ ಭೂಮಿಯನ್ನು ತಾಯಿಗೆ ದೇವಿಗೆ ಹೋಲಿಸಿ ವಂದೇ ಮಾತರಂ ರಚಿಸಲಾಗಿದೆ. ಭಾರತ ಮಾತೆಯನ್ನು ದೇವಿಯ ರೂಪದಲ್ಲಿ ಕೊಂಡಾಡುವ ಗೀತೆ ಇದು. ಒಟ್ಟು ಆರು ಚರಣಗಳಲ್ಲಿದೆ. ಕೊನೆಯ ಚರಣಗಳಲ್ಲಿ ಹಿಂದೂ ದೇವತೆಗಳ ಉಲ್ಲೇಖ ಇರುವುದರಿಂದ ಮುಸ್ಲಿಂ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ 1937 ರಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಬಳಸಲು ಆಗಿನ ಕಾಂಗ್ರೆಸ್ ನಿರ್ಧರಿಸಿತ್ತು. 1950 ರಲ್ಲಿ ಭಾರತ ಸರಕಾರ ವಂದೇ ಮಾತರಂ ಗೀತೆಯನ್ನು ರಾಷ್ಟ್ರೀಯ ಗಾನ ಅಂದರೆ ನ್ಯಾಶನಲ್ ಸಾಂಗ್ ಎಂದು ಅಧಿಕೃತವಾಗಿ ಮಾನ್ಯತೆ ನೀಡಿತು. ಇದು ಜನಗಣಮನದಂತೆ ರಾಷ್ಟ್ರಗೀತೆ ಅಲ್ಲವಾದರೂ ಅದಕ್ಕೆ ಸಮಾನವಾದ ಗೌರವವನ್ನು ಹೊಂದಿದ ರಾಷ್ಟ್ರಗಾನವೆಂದು ಪರಿಗಣಿಸಲ್ಪಟ್ಟಿತ್ತು.

ಈಗ ಈ ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ ಮಾತನಾಡಿ ಮುಸ್ಲಿಂ ಲೀಗ್ ಗೆ ಮಣಿದು ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ತುಂಡರಿಸಿದೆ ಎಂದು ಆರೋಪಿಸಿದರು. ಈಗ 2026 ರಲ್ಲಿ ಬಿಜೆಪಿ ಸರಕಾರವು ಹೊಸ ಮಾರ್ಗಸೂಚಿಯನ್ನು ತಂದು ಸರಕಾರಿ ಕಾರ್ಯಕ್ರಮಗಳಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಎದ್ದು ನಿಂತು ಹಾಡುವುದನ್ನು ಕಡ್ಡಾಯಗೊಳಿಸಿತು ಹಾಗೂ ಹಾಡದೇ ಇದ್ದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿತು. ಇದು ಈಗ ವಿವಾದದ ವಿಷಯವಾಗಿದೆ. ರಾಜಕೀಯ ಕಾರಣಕ್ಕಾಗಿ ಬಿಜೆಪಿ ಸರಕಾರ ಈಗ ಇಂತಹುದೊಂದು ಮಾರ್ಗಸೂಚನೆಯನ್ನು ತಂದಿದೆ ಎಂಬುದು ವಿರೋಧ ಪಕ್ಷಗಳ ಗುರುತರ ಆರೋಪವಾಗಿದೆ.

ಇಷ್ಟಕ್ಕೂ ದೇಶಭಕ್ತಿಯ ಪ್ರತೀಕವಾಗಿರುವ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿದ್ದರಲ್ಲಿ ತಪ್ಪೇನು? ಈ ಹಾಡಿನ ಮೂಲಕ ಎದ್ದು ನಿಂತು ಮಾತೃಭೂಮಿಗೆ ವಂದನೆ ಸಲ್ಲಿಸುವುದರಲ್ಲಿ ಸಮಸ್ಯೆ ಏನು? ಸಮಸ್ಯೆ ಇದೆ. ಯಾಕೆಂದರೆ ನಮ್ಮ ದೇಶ ಯಾವುದೇ ಒಂದು ಧರ್ಮ ಸಮುದಾಯಕ್ಕೆ ಸೇರಿದ್ದಲ್ಲ. ಈ ಭೂಮಿ ಇಲ್ಲಿ ವಾಸಿಸುವ ಎಲ್ಲಾ ಕುಲ ಮತ ಜಾತಿ ಧರ್ಮೀಯರಿಗೂ ಸಂಬಂಧಿಸಿದ್ದಾಗಿದೆ. ಇದು ಜ್ಯಾತ್ಯತೀತ ಧರ್ಮನಿರಪೇಕ್ಷ ಸಮಾಜವಾದಿ ದೇಶ ಎಂಬುದು ನಮ್ಮ ಸಂವಿಧಾನ ಪೀಠಿಕೆಯ ಪ್ರಮುಖ ಅಂಶವಾಗಿದೆ. ಹೀಗಿರುವಾಗ ಒಂದು ಧರ್ಮಕ್ಕೆ ಸೇರಿದ ದೇವತೆಗಳ ರೂಪಕಗಳಿರುವ ಗೀತೆಯನ್ನು ಎಲ್ಲಾ ಧರ್ಮೀಯರ ಮೇಲೆ ಹೇರಿಕೆ ಮಾಡುವುದು ಎಷ್ಟು ಸರಿ ಎಂಬುದನ್ನು ಆಲೋಚಿಸಬೇಕಿದೆ.

ಬಿಜೆಪಿ ಆರೆಸ್ಸೆಸ್ ನವರು ಈಗಾಗಲೇ ಈ ದೇಶ ಹಿಂದೂಗಳದ್ದು ಎನ್ನುವ ಭ್ರಮೆಯಲ್ಲಿದ್ದಾರೆ. ಯಾರು ಏನೇ ಹೇಳಲಿ ಇದು ಹಿಂದೂರಾಷ್ಟ್ರ ಎಂದು ಆರೆಸ್ಸೆಸ್ ಅಧಿನಾಯಕರಾದ ಮೋಹನ್ ಭಾಗವತರು ಹೇಳಿದ್ದಾರೆ. ಹಿಂದೂರಾಷ್ಟ್ರ ಸ್ಥಾಪನೆ ಮಾಡುವುದೇ ನಮ್ಮ ಗುರಿ ಮತ್ತು ಧ್ಯೇಯವೆಂದು ಸಂಘ ಪರಿವಾರ ಘೋಷಿಸುತ್ತದೆ. ಹೀಗೆ ಒಂದು ಧರ್ಮಕ್ಕೆ ಈ ದೇಶದ ಅಧಿಪತ್ಯವನ್ನು ಒಪ್ಪಿಸುವುದಾಗಲೀ, ಈ ದೇಶ ಒಂದು ಧರ್ಮಕ್ಕೆ ಸೀಮಿತ ಎಂದು ಹೇಳುವುದಾಗಲೀ ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ. ಸಂವಿಧಾನ ವಿರೋಧಿ ಕೃತ್ಯಗಳೆಲ್ಲವೂ ದೇಶದ್ರೋಹವೇ ಆಗಿದೆ. ಹೀಗಾಗಿ ಭಾರತ ಹಿಂದೂ ರಾಷ್ಟ್ರ ಅಲ್ಲ, ಹಿಂದೂ ಎನ್ನುವುದು ಅಸಲಿಗೆ ಒಂದು ಧರ್ಮವೂ ಅಲ್ಲ, ಅದೊಂದು ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಹೇಳಿಯಾಗಿದೆ. ಹೀಗಾಗಿ ವೈದಿಕ ಧರ್ಮದ ಪುರೋಹಿತಶಾಹಿ ಮನಸ್ಥಿತಿಯವರು ಹಿಂದೂಧರ್ಮ, ಹಿಂದೂ ರಾಷ್ಟ್ರ ಎನ್ನುವುದನ್ನು ಪ್ರಚಾರಗೊಳಿಸಿ ಮತ್ತೆ ಸನಾತನ ಮನುಸ್ಮೃತಿ ಪ್ರಣೀತ ವರ್ಣಾಶ್ರಮ ಧರ್ಮವನ್ನು ಈ ದೇಶದಲ್ಲಿ ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಇಸ್ಲಾಂ ಕ್ರಿಶ್ಚಿಯನ್ ಧರ್ಮೀಯರ ಮೇಲೆ ಹಿಂದೂಗಳನ್ನು ಎತ್ತಿಕಟ್ಟಿ ಈ ಧರ್ಮನಿರಪೇಕ್ಷ ದೇಶವನ್ನು ಹಿಂದೂರಾಷ್ಟ್ರ ಮಾಡುವ ಗುರಿಯನ್ನು ಹೊಂದಿದ್ದಾರೆ. ಅದಕ್ಕೆ ಹಿಂದೂಗಳನ್ನು ಭಾವನಾತ್ಮಕವಾಗಿ ಬೆಸೆಯುವ ವಿಷಯಗಳನ್ನು ಮುನ್ನೆಲೆಗೆ ತರುತ್ತಲೇ ಇರುತ್ತಾರೆ. ಅದರ ಭಾಗವಾಗಿಯೇ ಈಗ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿದ್ದಾರೆ.

ಈ ದೇಶವನ್ನು ತಾಯಿಗೆ ಹೋಲಿಸಿ ಬರೆದ ವಂದೇ ಮಾತರಂ ಗೀತೆಗೆ ಗೌರವ ಕೊಡುವುದು ಆಗಿನಿಂದ ಈಗಲೂ ಜಾರಿಯಲ್ಲಿದೆ. ಎರಡು ಚರಣಗಳನ್ನು ದೇಶಭಕ್ತಿಯ ಭಾಗವಾಗಿ ಹಾಡುತ್ತಲೇ ಬರಲಾಗಿದೆ. ಆದರೆ ಕೇಂದ್ರ ಸರಕಾರದ ಗೃಹ ಸಚಿವಾಲಯವು ಈ ಗೀತೆಯ ಆರೂ ಚರಣಗಳನ್ನು ಕಡ್ಡಾಯವಾಗಿ ಹಾಡಲೇಬೇಕು ಎಂದು ಆದೇಶಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಯಾಕೆಂದರೆ ವಂದೇ ಮಾತರಂ ಗೀತೆಯಲ್ಲಿ ಮಾತೃಸ್ವರೂಪಿಯಾದ ಭೂಮಿಯನ್ನು ಹಿಂದೂ ದೇವತೆಗಳಿಗೆ ಹೋಲಿಸಲಾಗಿದೆ, ಇದರಲ್ಲಿ ತಪ್ಪೇನು ಎಂಬುದು ಬಿಜೆಪಿಗರ ಪ್ರಶ್ನೆಯಾಗಿದೆ. ಸಮಸ್ಯೆ  ಇರುವುದೇ ಇಲ್ಲಿ.

ವಂದೇ ಮಾತರಂ ಗೀತೆಯ ನಾಲ್ಕನೇ ಚರಣ ಹೀಗಿದೆ –

“ನೀನೇ ದುರ್ಗೆ, ಹತ್ತು ಆಯುಧಗಳ ಧರಿಸಿದವಳೇ

ಕಮಲದ ಮೇಲೆ ವಿಹರಿಸುವ ಕಮಲೆ

ವಾಣಿ ವಿದ್ಯೆಯನು ನೀಡುವವಳೇ ನಿನಗೆ ನಮಸ್ಕಾರ

ಅಮಲೆ ಅತುಲೆ ಸುಜಲೆ ಸಫಲೆ ತಾಯೇ ವಂದನೆ”.

ಈ ಚರಣದಲ್ಲಿ ಈ ದೇಶದ ಭೂಮಿಯನ್ನು ಹತ್ತು ಆಯುಧಧಾರಿ ದುರ್ಗಾ ದೇವಿಗೆ  ಕಮಲದ ಮೇಲೆ ಆಸೀನರಾಗಿರುವ ಲಕ್ಷ್ಮಿ ದೇವಿಗೆ ಹಾಗೂ ವಿದ್ಯಾದೇವತೆ ಸರಸ್ವತಿಗೆ ಹೋಲಿಸಲಾಗಿದೆ. ಆದರೆ “ದೇಶವೆಂದರೆ ಕಲ್ಲು ಮಣ್ಣು ಅಲ್ಲವೋ ದೇಶವೆಂದರೆ ಅಲ್ಲಿ ವಾಸಿಸುವ ಜನ” ಎಂಬುದು ಕವಿನುಡಿಯಾಗಿದೆ. ಈ ನಮ್ಮ ದೇಶವಾಸಿಗಳಲ್ಲಿ ಅನೇಕ ಜಾತಿ ಮತ ಕುಲ ಧರ್ಮದವರಿದ್ದಾರೆ. ಎಲ್ಲರೂ ತಮ್ಮ ಜನನಿ ಜನ್ಮಭೂಮಿಯನ್ನು ಪ್ರೀತಿಸುತ್ತಾರೆ. ಅವರವರ ಭಕ್ತಿ ಭಾವಕ್ಕೆ ತಕ್ಕಂತೆ ದೇಶವನ್ನು ಆರಾಧಿಸುತ್ತಾರೆ. ಆದರೆ  ಒಂದು ಧರ್ಮದ ದೇವತೆಗಳ ರೂಪಕವಿರುವ ಗೀತೆಯೊಂದನ್ನು ಎಲ್ಲಾ ಧರ್ಮೀಯರ ಮೇಲೆ ಕಡ್ಡಾಯವಾಗಿ ಹೇರಿಕೆ ಮಾಡುವುದು ತಪ್ಪಾಗುತ್ತದೆ. ಮುಸ್ಲಿಂ ಕ್ರೈಸ್ತರಂತೆಯೆ ಈ ದೇಶವಾಸಿಗಳಾದ ಸಿಕ್ಕರು ಬೌದ್ದರು ಬಸವ ಪಥದ ಏಕದೇವೋಪಾಸಕರಾದ ಲಿಂಗಾಯತರು ತಮ್ಮದಲ್ಲದ ಬೇರೆ ದೇವರುಗಳನ್ನು ಆರಾಧಿಸುವುದಿಲ್ಲ, ಸ್ತುತಿಸುವುದಿಲ್ಲ. ಆದರೆ ಎಲ್ಲಾ ಧರ್ಮೀಯರೂ ಈ ದೇಶವನ್ನು, ಭೂಮಿಯನ್ನು ತಮ್ಮ ತಮ್ಮ ನಂಬಿಕೆಯ ದೇವರ ರೂಪದಲ್ಲಿಯೇ ಪರಿಗಣಿಸುತ್ತಾರೆ. ಹೀಗಿರುವಾಗ ಸಾರ್ವತ್ರಿಕವಲ್ಲದ, ಎಲ್ಲರನ್ನು ಒಳಗೊಳ್ಳದೇ ಇರುವ, ಒಂದು ನಿರ್ಧಿಷ್ಟ ದೇವತೆಗಳ ಹೋಲಿಕೆ ಹೊಗಳಿಕೆ ಇರುವ ಗೀತೆಯ ಸಾಲುಗಳನ್ನು ಎಲ್ಲರ ಮೇಲೆ ಸಾಮೂಹಿಕವಾಗಿ ಹೇರುವುದು ಖಂಡಿತಾ ಸಮರ್ಥನೀಯವಲ್ಲ.

ಆದರೆ ಈ ದೇಶದ ಸಂವಿಧಾನವನ್ನು ಒಪ್ಪದ, ಈ ದೇಶದ ಬಾವುಟಕ್ಕೆ ಗೌರವ ಕೊಡದ, ಈ ದೇಶದ ರಾಷ್ಟ್ರಗೀತೆಗೂ ಅಪಸ್ವರ ಎತ್ತುವ ಹಿಂದುತ್ವವಾದಿ ಸಿದ್ಧಾಂತಿಗಳು ಅನ್ಯ ಧರ್ಮೀಯರ ಮೇಲೆ ಹೇರಿಕೆ ಮಾಡುವುದನ್ನೇ ಸಿದ್ಧಾಂತವಾಗಿಸಿಕೊಂಡಿದ್ದಾರೆ. ಹಿಂದೂರಾಷ್ಟ್ರದ ಭ್ರಮೆಯಲ್ಲಿದ್ದಾರೆ. ಈ ದೇಶದ ಅಧಿಕಾರವನ್ನೂ ಗಳಿಸಿಕೊಂಡಿದ್ದಾರೆ. ಹೀಗಾಗಿ ವಾಸ್ತವ ಸಮಸ್ಯೆಗಳನ್ನು ಬಿಟ್ಟು ಭಾವನಾತ್ಮಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.

ಈ ನಮ್ಮ ದೇಶದಲ್ಲಿ ಸರಕಾರಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಶಾಲೆಗಳು ಶಿಥಿಲಗೊಂಡಿವೆ. ಅಗತ್ಯ ಶಿಕ್ಷಕರ ನೇಮಕಾತಿಗಳಿಲ್ಲ. ಶಾಲೆ ಬಿಡುವ ಮಕ್ಕಳ ಸಂಖ್ಯೆ ಬೇಕಾದಷ್ಟಿದೆ. ಶಾಲೆ ಇದ್ದರೆ ಶಿಕ್ಷಕರಿಲ್ಲ, ಶಿಕ್ಷಕರಿದ್ದರೆ ವಿದ್ಯಾರ್ಥಿಗಳಿಲ್ಲ ಎನ್ನುವ ದುಸ್ಥಿತಿ ದೇಶಾದ್ಯಂತ ಇದೆ. ಕೇಂದ್ರ ಸರಕಾರದ ಅಂಕಿ ಅಂಶಗಳ ಪ್ರಕಾರವೇ ದೇಶದಲ್ಲಿ 65 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಾಥಮಿಕ ಶಾಲೆಯನ್ನು ತೊರೆದಿದ್ದಾರೆ. ಇದರಲ್ಲಿ ಮೋದಿಯವರ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಯೋಗಿಯವರ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಮೊದಲು ದೇಶಾದ್ಯಂತ ಗುಣಮಟ್ಟದ ಸಮಾನ ಉಚಿತ ಶಿಕ್ಷಣವನ್ನು ಕೇಂದ್ರ ಸರಕಾರ ಜಾರಿ ಮಾಡಬೇಕಿದೆ. ಆ ನಂತರ ಶಾಲೆಗಳಲ್ಲಿ ಯಾವ ಗೀತೆಯನ್ನು ಹೇಗೆ ಹಾಡಿಸಬೇಕು ಎಂಬುದನ್ನು ನಿರ್ಧರಿಸಲಿ. ಈಗ ದೇಶದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಬೇಕಾಗಿರುವುದು ಸಂವಿಧಾನದ ಪ್ರಸ್ತಾವನೆಯೆ ಹೊರತು ಭಾವತೀವ್ರತೆಯನ್ನು ಹೆಚ್ಚಿಸಿ ಹಿಂದುತ್ವವನ್ನು ಬಿತ್ತಿ ಹಿಂದೂರಾಷ್ಟ್ರ ಮಾಡಬಯಸುವವರ ವಂದೇ ಮಾತರಂ ಗೀತೆ ಅಲ್ಲ.  ಆದ್ದರಿಂದ ಎಲ್ಲಾ ಪ್ರಜ್ಞಾವಂತರು ವಂದೇ ಮಾತರಂ ಗೀತೆಯ ಹೇರಿಕೆಯನ್ನು ಪ್ರಶ್ನಿಸಬೇಕಿದೆ. ಈ ದೇಶದ ಜನರು ಈ ಭಾವನಾತ್ಮಕ ಹೇರಿಕೆಯ ಹಿಂದಿರುವ ಹುನ್ನಾರವನ್ನು ಅರಿಯಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- http://ಎಫ್‌ಸ್ಟೀನ್‌ ಫೈಲ್ಸ್‌ ಭಾಗ 2 -ಮೋದಿ ನಂಟಿನ ಈ-ಮೇಲ್ ಗುಟ್ಟೇನು? https://kannadaplanet.com/epstein-files-part-2-what-is-the-secret-behind-modis-email/

More articles

Latest article

Most read