ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಚಾರಗಳು ಸುಮ್ಮ ಸುಮ್ಮನೆ ವೈರಲ್ ಆಗಿ ಬಿಡುತ್ತವೆ. ಇತ್ತಿಚೆಗೆ ಡೀಪ್ ಫೇಕ್ ಕೂಡ ಸಾಕಷ್ಟು ಸದ್ದು ಮಾಡಿತ್ತು. ಯಾರದ್ದೋ ದೇಹಕ್ಕೆ ಇನ್ಯಾರದ್ದೋ ಮುಖ ಅಂಟಿಸಿದ್ದರು. ಅದರಲ್ಲೂ ಇಂಥವೆಲ್ಲಾ ಸೆಲೆಬ್ರೆಟಿಗಳನ್ನೇ ಹೆಚ್ಚು ಕಾಡುತ್ತವೆ. ಆದರೆ ಇದೀಗ ಸಮಂತಾ ಬಗ್ಗೆ ಪೋಸ್ಟರ್ ಒಂದು ಹರಿದಾಡುತ್ತಿದೆ.
ಅರೆಬೆತ್ತಲೆ ಕುಳಿತ ಫೋಟೋ ಒಂದು ವೈರಲ್ ಆಗಿತ್ತು. ಆ ಫೋಟೋ ನೋಡಿದ ಅನೇಕರು ಇದು ಸಮಂತಾ ಅವರದ್ದೇ ಫೋಟೋ ಎಂದು ನಾನಾ ರೀತಿಯ ಕಮೆಂಟ್ ಗಳನ್ನು ಹಾಕುತ್ತಿದ್ದರು. ಬಾತ್ ಟಬ್ ನಲ್ಲಿ ಕುಳಿತಿರುವುದು ಸಮಂತಾ ಎಂದು ಎಲ್ಲೆಡೆ ಟ್ರೋಲ್ ಆಗುತ್ತಿತ್ತು. ಆದರೆ ಇದಕ್ಕೆ ಸಮಂತಾ ನಯವಾಗಿಯೇ ಉತ್ತರಿಸಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಒಂದನ್ನು ಹಾಕುವ ಮೂಲಕ ಟ್ರೋಲ್ ಮಾಡುವವರಿಗೆ ಉತ್ತರಿಸಿದ್ದಾರೆ. ‘ನೀವು ನಿಮ್ಮನ್ನು ಸಾಬೀತುಪಡಿಸುವ ಅಗತ್ಯವಿಲ್ಲದೆ ಅಥವಾ ಸ್ಪಷ್ಟನೆ ನೀಡುವ ಅಗತ್ಯವೇ ಇಲ್ಲದಂತೆ ಬದುಕುವುದೇ ನಿಜವಾದ ಸಾಧನೆ’ ಎಂಬ ಸಾಲನ್ನು ಹಾಕಿದ್ದಾರೆ. ಈ ಮೂಲಕ ಇದಕ್ಕೆಲ್ಲಾ ಪ್ರತಿಕ್ರಿಯೆ, ಸ್ಪಷ್ಟನೆ ನೀಡುವುದಕ್ಕೆ ಹೋಗಲ್ಲ ಎಂಬುದಾಗಿ ತಿರುಗೇಟು ನೀಡಿದ್ದಾರೆ.
ಸಮಂತಾ ಹೆಚ್ಚು ಟ್ರೋಲ್ ಆಗುವುದಕ್ಕೆ ಶುರುವಾಗಿದ್ದು, ಡಿವೋರ್ಸ್ ಪಡೆದ ಬಳಿಕ. ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಸಿ ಮದುವೆಯಾದವರು. ಆದರೆ ಮದುವೆಯಾದ ನಾಲ್ಕು ವರ್ಷ ತುಂಬುವುದರೊಳಗೆ ಡಿವೋರ್ಸ್ ಘೋಷಣೆ ಮಾಡಿದ್ದರು. ಆ ವೇಳೆ ಸಮಂತಾ ಬಗ್ಗೆಯೇ ಹೆಚ್ಚು ನೆಗೆಟಿವ್ ಟ್ರೋಲ್ ಗಳು ಬಂದವು. ಸಮಂತಾ ಕಡೆಗೆ ಬೆರಳು ಮಾಡಿ ತೋರಿಸಿದವರು ಹೆಚ್ಚು. ಆದರೆ ಸಮಂತಾ ಹೆಚ್ಚು ತಲೆಕೆಡಿಸಿಕೊಳ್ಳದೆ ಮುಂದೆ ಸಾಗುತ್ತಿದ್ದಾರೆ.