ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? ದೇವನಹಳ್ಳಿಗೆ ಮೆಟ್ರೋ ವಿಸ್ತರಣೆ, ಟನಲ್ ರಸ್ತೆಗೆ ಅನುದಾನ

Most read

ಬೆಂಗಳೂರು: ನಮ್ಮ ಮೆಟ್ರೋ ಜಾಲವನ್ನು ಬೆಂಗಳೂರು ನಗರದಿಂದ ದೇವನಹಳ್ಳಿಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಬೆಂಗಳೂರು ಗ್ರಾಮಾಂತರ ಭಾಗಕ್ಕೂ ಮೆಟ್ರೋ ಸೌಲಭ್ಯ ಸಿಕ್ಕಂತಾಗಲಿದೆ. ಸದ್ಯ ನಮ್ಮ ಮೆಟ್ರೋ ಜಾಲದ ಮೊದಲ ಹಾಗೂ 2 ನೇ ಹಂತದಲ್ಲಿ 76 ಕಿ.ಮೀ ವಿಸ್ತರಣೆಯಾಗಿದೆ. 2 ಹಾಗೂ 3 ನೇ ಹಂತದಲ್ಲಿ ಮತ್ತಷ್ಟು ದೂರಕ್ಕೆ ವಿಸ್ತರಣೆ ಮಾಡಲಾಗುತ್ತಿದ್ದು, ಹಾಲಿ ಇರುವ ನೇರಳೆ, ಹಸಿರು ಮಾರ್ಗದ ಜತೆಗೆ ನೀಲಿ, ಹಳದಿ, ಗುಲಾಬಿ ಮಾರ್ಗ ಕಾಮಗಾರಿ ನಡೆಯುತ್ತಿವೆ.

40000 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಸುರಂಗ ಮಾರ್ಗ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರದಿಂದ ಬಿ.ಬಿ.ಎಂ.ಪಿಗೆ 19 ಸಾವಿರ ಕೋಟಿ ರೂ. ಗ್ಯಾರಂಟಿ.

ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ನಮ್ಮ ಮೆಟ್ರೋ ಜಾಲ ಅಭಿವೃದ್ಧಿ.

• ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 40.50 ಕಿ.ಮಿ. ಉದ್ದದ ಡಬಲ್ – ಡೆಕ್ಕರ್ ಮೇಲು ಸೇತುವೆಯನ್ನು 8916 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
• “ಬ್ರ್ಯಾಂಡ್ ಬೆಂಗಳೂರು” ಯೋಜನೆಯಡಿ, 1,800 ಕೋಟಿ ರೂ. ಮೊತ್ತದ 21 ಯೋಜನೆಗಳಿಗೆ ಅನುಮೋದನೆ. 413 ಕೋಟಿ ರೂ. ವೆಚ್ಚದಲ್ಲಿ “ಸಮಗ್ರ ಆರೋಗ್ಯ ಯೋಜನೆ” ಜಾರಿ.
• ಬೆಂಗಳೂರು ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ನಿರ್ಮಿಸಲು 3 ಸಾವಿರ ಕೋಟಿ ರೂ. ಆರ್ಥಿಕ ನೆರವು.
• ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಯಿಂದ 50 ಲಕ್ಷ ಜನರಿಗೆ ನೀರು ಪೂರೈಕೆ.
• ಕಾವೇರಿ 6 ನೇ ಹಂತ ಯೋಜನೆ ಅನುಷ್ಠಾನಗೊಳಿಸಲು ವಿಸ್ತೃತ ಯೋಜನಾ ವರದಿ ತಯಾರಿಕೆ
• BWSSB ವತಿಯಿಂದ ಬಯೋಗ್ಯಾಸ್ – ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್ಗಳ ಉಪಯೋಗ ಪಡೆಯಲು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯೋಜನೆ.
• ಬೆಂಗಳೂರು ಬಿಸ್ನೆಸ್ ಕಾರಿಡಾರ್ 73 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ. ಯೋಜನೆ.

More articles

Latest article