ಕೋವಿಡ್‌ ಲಸಿಕೆ ಕಡ್ಡಾಯವಾಗಿರಲಿಲ್ಲವೇ? ಹಾಗಿದ್ದರೆ, ಇವೇನು……??

ಲಸಿಕೆ ನೀಡುವಾಗ, ಅದು ತನ್ನ ದೊಡ್ಡ ಸಾಧನೆ, ಅದರ ಕ್ರೆಡಿಟ್ಟೆಲ್ಲ ತನಗೆ ಮಾತ್ರ ಸೇರಬೇಕು ಎನ್ನುವಂತೆ ಕೇಂದ್ರ ಸರ್ಕಾರ ವರ್ತಿಸಿದ್ದನ್ನು ನಾವೆಲ್ಲ ಕಂಡಿದ್ದೇವೆ. ಎಷ್ಟರ ಮಟ್ಟಿಗೆಂದರೆ, ಲಸಿಕೆ ಸರ್ಟಿಫಿಕೇಟ್‌ಗಳಲ್ಲಿ ಪ್ರಧಾನಿ ಮೋದಿಯವರ ಫೋಟೊ ಮುದ್ರಿಸಿ ವಿತರಿಸಲಾಗಿತ್ತು. ಆದರೆ ಈಗ, ಲಸಿಕೆಯ ಅಡ್ಡಪರಿಣಾಮಗಳ ಕುರಿತು ಪ್ರಶ್ನೆಗಳು ಮುನ್ನೆಲೆಗೆ ಬಂದ ಕೂಡಲೇ ಅದರ ಹೊಣೆಯಿಂದ ನುಣುಚಿ ಕೊಳ್ಳಲು ಯತ್ನಿಸುತ್ತಿರುವುದು ವಿಪರ್ಯಾಸ – ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು.

‘…ಕೋವಿಡ್‌ ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯವಾಗಿರಲಿಲ್ಲ. ಲಸಿಕೆಯ ಅಡ್ಡಪರಿಣಾಮಗಳ ಕುರಿತು ಎಲ್ಲಾ ಮಾಹಿತಿ ತಿಳಿದುಕೊಂಡು ಸ್ವಯಂ ಪ್ರೇರಿತರಾಗಿ ಮುಂದೆ ಬಂದವರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಲಸಿಕೆ ತೆಗೆದುಕೊಳ್ಳುವಂತೆ ಯಾರನ್ನೂ ಒತ್ತಾಯ ಮಾಡಲಾಗಿಲ್ಲ. ಹಾಗಾಗಿ, ಅದರಿಂದ ಸಂಭವಿಸಿರಬಹುದಾದ ಅಡ್ಡಪರಿಣಾಮಗಳ ಲುಕ್ಸಾನುಗಳಿಗೆ ಸರ್ಕಾರ ಸಂತಾಪ ಸೂಚಿಸುತ್ತದೆಯೇ ವಿನಾಃ, ಯಾವುದೇ ಬಗೆಯ ಹೊಣೆ ಹೊತ್ತುಕೊಳ್ಳುವುದಿಲ್ಲ; ಪರಿಹಾರವನ್ನೂ ನೀಡುವುದಿಲ್ಲ…’

ಈ ಅರ್ಥದಲ್ಲಿ ಮೋದಿ ಸರ್ಕಾರವು ಸುಪ್ರೀಂ ಕೋರ್ಟಿಗೆ ಒಂದು ಅಫಿಡವಿಟ್‌ ಸಲ್ಲಿಸಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಸುಪ್ರೀಂ ಕೋರ್ಟ್‌ ಹಿರಿಯ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಭೂಷಣ್ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಅಫಿಡವಿಟ್‌ ಪ್ರತಿಯ ಸಮೇತ ಈ ಬಗ್ಗೆ ಚರ್ಚಿಸಿದ್ದಾರೆ. ಲಸಿಕೆ ಪಡೆದ ನಂತರ ಉಂಟಾದ ಆರೋಗ್ಯದ ಏರುಪೇರಿನಿಂದ ಮೃತರಾದ ಇಬ್ಬರು ಹೆಣ್ಣುಮಕ್ಕಳ ಪೋಷಕರು ಸರ್ಕಾರದ ವಿರುದ್ಧ ಸಂವಿಧಾನದ ಆರ್ಟಿಕಲ್‌ 32ರ ಅಡಿ (ಮೂಲಭೂತ ಹಕ್ಕುಗಳ ನಿರಾಕರಣೆ) ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಂತಹದ್ದೊಂದು ಅಫಿಡವಿಟ್‌ ಸಲ್ಲಿಸಿದೆ.

ಹಾಗಾದರೆ ಮೋದಿ ಸರ್ಕಾರ ಹೇಳುತ್ತಿರುವುದು ನಿಜವೇ? ಲಸಿಕೆ ತೆಗೆದುಕೊಳ್ಳುವಂತೆ ಯಾರನ್ನೂ ಒತ್ತಾಯಿಸಿರಲಿಲ್ಲವೇ? ಹಾಗಾದರೆ, ಈ ಉದಾಹರಣೆಗಳು ಏನನ್ನು ಹೇಳ್ತಿವೆ….

1. ಕೈಗಾರಿಕೆ ಅಥವಾ ಕೆಲಸದ ಸ್ಥಳಕ್ಕೆ ಹಾಜರಾಗಬೇಕೆಂದರೆ ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರಬೇಕು ಎಂದು ತಮಿಳುನಾಡು ಸರ್ಕಾರ ಜುಲೈ 25, 2021ರಂದು ಆದೇಶ ಹೊರಡಿಸಿತ್ತು. ಲಸಿಕೆ ಪಡೆಯದವರನ್ನು ಕೆಲಸಕ್ಕೆ ಬಾರದಂತೆ ತಡೆಹಿಡಿಯಲಾಗಿತ್ತು.

https://timesofindia.indiatimes.com/city/chennai/tn-makes-two-vaccine-doses-must-for-industrial-employees/articleshow/84717185.cms

2. ನವೆಂಬರ್‍‌ 28, 2021ರಂದು ಮಹಾರಾಷ್ಟ್ರ ಸರ್ಕಾರ ಒಮಿಕ್ರಾನ್‌ ವೇರಿಯಂಟ್‌ ವೈರಸ್‌ ಹರಡುವಿಕೆ ತಡೆಗಟ್ಟಲು ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗುವುದು ಎಂಬ ಆದೇಶ ಹೊರಡಿಸಿತ್ತು.

3. ನವೆಂಬರ್‍‌ 16 2021ರಲ್ಲಿ ಆದೇಶ ಹೊರಡಿಸಿದ ಗುಜರಾತಿನ ಅಹಮದಾಬಾದ್‌ ಮುನಿಸಿಪಲ್‌ ಕಾರ್ಪೊರೇಷನ್‌ ಲಸಿಕೆ ಪಡೆಯದವರಿಗೆ ಸಿನಿಮಾ ಹಾಲ್‌, ಶಾಪಿಂಗ್‌ ಮಾಲ್‌, ಕ್ಲಬ್‌ಗಳು, ಜಿಮ್‌, ಹೊಟೇಲ್‌, ರೆಸ್ಟೊರೆಂಟ್‌, ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಮೊದಲಾದ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಈ ನಿರ್ಬಂಧವನ್ನು ಸ್ವತಃ ಗುಜರಾತ್‌ ಹೈಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು.

https://indianexpress.com/article/cities/ahmedabad/ahmedabad-amc-bans-non-vaccinated-people-from-entering-private-premises-7624676

https://www.barandbench.com/news/covid-19-gujarat-high-court-upholds-1.compulsory-vaccination-policy-ahmedabad-municipal-corporation

4. ನವೆಂಬರ್‍‌ 18, 2021ರಂದು ವರದಿಯಾದಂತೆ ಸಂಪೂರ್ಣ ಲಸಿಕೆಯ ಡೋಸ್‌ ಪಡೆದವರಿಗೆ ಮಾತ್ರ ರೇಷನ್‌ ವಿತರಣೆ ಮಾಡಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿತ್ತು.

5. ಡಿಸೆಂಬರ್‍‌ 03, 2021ರಂದು ಬೊಮ್ಮಾಯಿಯವರ ನೇತೃತ್ವದ ಕರ್ನಾಟಕ ಸರ್ಕಾರ ಹದಿನೆಂಟು ವರ್ಷಕ್ಕಿಂತ ಚಿಕ್ಕವಯಸ್ಸಿನ ಮಕ್ಕಳು ಶಾಲೆಗೆ ಹೋಗಬೇಕೆಂದರೆ, ಆ ಮಕ್ಕಳ ಪೋಷಕರು ಎರಡು ಡೋಸ್‌ ಲಸಿಕೆ ಪಡೆದಿರುವ ಸರ್ಟಿಫಿಕೇಟ್‌ ಹೊಂದಿರುವುದು ಕಡ್ಡಾಯ ಎಂಬ ಆದೇಶ ಹೊರಡಿಸಿತ್ತು. ಅಲ್ಲದೇ, ಮಾಲ್‌ ಮತ್ತು ಸಿನಿಮಾ ಹಾಲ್‌ ಪ್ರವೇಶಿಸಲೂ ಈ ಸರ್ಟಿಫಿಕೇಟ್‌ ಕಡ್ಡಾಯ ಎಂದು ಸರ್ಕಾರ ಹೇಳಿತ್ತು. ಇದರ ವಿರುದ್ಧ ಕೆಲವರು ಕೋರ್ಟ್‌ ಮೆಟ್ಟಿಲೇರಿದಾಗ, ಸ್ವತಃ ಹೈಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು.

ಇವು ಕೆಲವು ಉದಾಹರಣೆಗಳಷ್ಟೆ. ಅಸ್ಸಾಂ, ಒಡಿಶಾ, ಗುಜರಾತ್‌, ದೆಹಲಿ, ರಾಜಸ್ಥಾನ, ಹರಿಯಾಣ, ಪಂಜಾಬ್‌, ಕೇರಳ ಹೀಗೆ ಬಹುತೇಕ ರಾಜ್ಯಗಳು ಲಸಿಕೆಯನ್ನು ಕಡ್ಡಾಯಗೊಳಿವಂತಹ ಈ ಬಗೆಯ ನಿರ್ಬಂಧಗಳನ್ನು ಜಾರಿಗೆ ತಂದಿದ್ದವು. ಸ್ವತಃ ಪ್ರಧಾನಿಯವರು ಏಪ್ರಿಲ್‌ 11 2021ರಂದು, `ಟೀಕಾ ಉತ್ಸವ್‌’ (ಲಸಿಕೆ ಉತ್ಸವ) ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ನಾಲ್ಕು ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ, “Each one, vaccinate one” ಎಂಬುದನ್ನು ಘೋಷವಾಕ್ಯ ಮಾಡಲಾಗಿತ್ತು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವುದಲ್ಲದೆ, ಕನಿಷ್ಠ ಒಬ್ಬ ವ್ಯಕ್ತಿಗೆ ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸಬೇಕು ಎಂಬುದು ಇದರ ಅರ್ಥ. ಕೇಂದ್ರ ಸರ್ಕಾರ ಈ ಲಸಿಕೆ ಅಭಿಯಾನವನ್ನು ಎಷ್ಟು ವ್ಯಾಪಕವಾಗಿ ಪ್ರಚಾರ ಮಾಡಿತ್ತೆಂಬುದಕ್ಕೆ ಇದು ಸಾಕ್ಷಿ.

ಅದಾದ ಮೇಲೆ, ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಾದಾಗ, ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಲಸಿಕೆ ಅಭಿಯಾನವನ್ನು ವಿಸ್ತರಿಸಿತು. ತಾನು ಕಳಿಸಿದ ಒಂದೇಒಂದು ಲಸಿಕೆಯೂ ವ್ಯರ್ಥವಾಗದಂತೆ ಎಲ್ಲವನ್ನೂ ಜನರಿಗೆ ನೀಡುವಂತೆ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಿತ್ತು(target zero vaccine wastage). ಆ ಒತ್ತಡದಿಂದ ಹೊರಬರಲು ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳದಿದ್ದವರನ್ನು ಹಲವು ಸೇವೆಗಳಿಂದ ಹೊರಗಿಡುವ ಆದೇಶ ಹೊರಡಿಸಿದ್ದವು ಎನ್ನಲಾಗುತ್ತಿದೆ.

ಚಿತ್ರ ಕೃಪೆ : ಲೈವ್‌ ಲಾ

ಕುತೂಹಲಕಾರಿ ಸಂಗತಿ ಏನು ಗೊತ್ತಾ? ರಾಜ್ಯಗಳು ಲಸಿಕೆ ನೀಡುವುದನ್ನು ವ್ಯಾಪಕಗೊಳಿಸಲು ಒತ್ತಡ ಹೇರಿ, ಇಂತಹ ನಿರ್ಬಂಧಕಾರಿ ನಿಯಮಗಳನ್ನು ಜಾರಿಗೆ ತರುವಂತೆ ಮಾಡಿದ್ದರೂ, ಕೇಂದ್ರ ಸರ್ಕಾರ ಮಾತ್ರ ಅಪ್ಪಿತಪ್ಪಿಯೂ ಇಂತಹ ನಿರ್ಬಂಧಗಳನ್ನು ವಿಧಿಸಿರಲಿಲ್ಲ! ಸುಪ್ರೀಂ ಕೋರ್ಟಿನಲ್ಲಿ ಈಗ ಅದನ್ನೇ ತನ್ನ ಸಮರ್ಥನೆಗೆ ಬಳಸಿಕೊಳ್ಳುತ್ತಿದೆ. ಲಸಿಕೆ ಪಡೆಯುವಂತೆ ನಿಯಮಗಳ ಒತ್ತಡ ಹೇರಿದ್ದು ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು. ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ನುಣುಚಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ!

ಲಸಿಕೆ ನೀಡುವಾಗ, ಅದು ತನ್ನ ದೊಡ್ಡ ಸಾಧನೆ, ಅದರ ಕ್ರೆಡಿಟ್ಟೆಲ್ಲ ತನಗೆ ಮಾತ್ರ ಸೇರಬೇಕು ಎನ್ನುವಂತೆ ಕೇಂದ್ರ ಸರ್ಕಾರ ವರ್ತಿಸಿದ್ದನ್ನು ನಾವೆಲ್ಲ ಕಂಡಿದ್ದೇವೆ. ಎಷ್ಟರಮಟ್ಟಿಗೆಂದರೆ, ಲಸಿಕೆ ಸರ್ಟಿಫಿಕೇಟ್‌ಗಳಲ್ಲಿ ಪ್ರಧಾನಿ ಮೋದಿಯವರ ಫೋಟೊ ಮುದ್ರಿಸಿ ವಿತರಿಸಲಾಗಿತ್ತು. ಆದರೆ ಈಗ, ಲಸಿಕೆಯ ಅಡ್ಡಪರಿಣಾಮಗಳು ಕುರಿತು ಪ್ರಶ್ನೆಗಳು ಮುನ್ನೆಲೆಗೆ ಬಂದ ಕೂಡಲೇ ಅದರ ಹೊಣೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವುದು ವಿಪರ್ಯಾಸ.

ಇಷ್ಟಕ್ಕೇ ಮುಗಿಯುವುದಿಲ್ಲ…. ಲಸಿಕೆಯಿಂದ ಆಗುವ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳಬೇಕಾದುದು ಜನರ ಹೊಣೆ. ಅವರು ಲಸಿಕೆ ನೀಡುವವರ ಬಳಿಯೋ, ವೈದ್ಯರ ಬಳಿಯೋ ಆ ಬಗ್ಗೆ ಮಾಹಿತಿ ಕೇಳಿತಿಳಿದುಕೊಳ್ಳಬೇಕಿತ್ತು. ತಾನಂತೂ ಯಾವ ಮಾಹಿತಿಯನ್ನೂ ಮುಚ್ಚಿಟ್ಟಿರಲಿಲ್ಲ. ಆ ಮಾಹಿತಿ ತಿಳಿದುಕೊಳ್ಳದೆ ಲಸಿಕೆ ಪಡೆದು, ಅದರಿಂದ ಅಡ್ಡಪರಿಣಾಮಗಳು ಉಂಟಾದರೆ ಅದು ಅವರ ವೈಯಕ್ತಿಕ ಆಯ್ಕೆಯಾಗಿರುತ್ತದೆ ಎನ್ನುವ ಧಾಟಿಯಲ್ಲಿ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

ಆದ್ರೆ ಪ್ರಧಾನಿ ಮೋದಿಯವರೇ ಹಲವು ಬಾರಿ ಕೋವಿಡ್‌ ವ್ಯಾಕ್ಸಿನ್‌ ಸುರಕ್ಷತೆಯ ಬಗ್ಗೆ ಮಾತನಾಡಿದ್ದು ಇವತ್ತೂ ಮಾಧ್ಯಮಗಳಲ್ಲಿ ಲಭ್ಯವಿವೆ. ಜೂನ್‌ 8, 2021ರಂದು ಟೀವಿ ಮಾಧ್ಯಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಅವರು “ಕೆಲವರು ವ್ಯಾಕ್ಸಿನ್‌ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಯುವಜನರು ಮುಂದೆ ಬಂದು ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು” ಎಂದು ಹೇಳಿದ್ದರು. ಎಲ್ಲಾ ಯುವಜನರು ವೈದ್ಯರೇ? ಅವರಿಗೆ ಲಸಿಕಾ ಅಡ್ಡಪರಿಣಾಮಗಳ ಮಾಹಿತಿ ಇತ್ತೇ? ಅಥವಾ ಅವರನ್ನು ಎಜುಕೇಟ್ ಮಾಡಲು ಕೇಂದ್ರ ಸರ್ಕಾರ ಯಾವುದಾದರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತೇ? ಏನೂ ಇಲ್ಲ! ವಿಷಯತಜ್ಞರಲ್ಲದ ಯುವಜನರು ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ಹೇಳುತ್ತಾರೆಂದರೆ, ಲಸಿಕೆಯ ಬಗ್ಗೆ ಸರಿಯಾದ ಮಾಹಿತಿ ಇರದವರನ್ನು ಕೂಡಾ ಲಸಿಕಾ ಪ್ರಚಾರಕ್ಕೆ ಪ್ರಧಾನಿಗಳು ಯಾಕೆ ಪ್ರೋತ್ಸಾಹಿಸಿದ್ದರು? ಇದು ವೈಜ್ಞಾನಿಕ ಪ್ರಚಾರವೇ? ಲಸಿಕೆ ನೀಡುವಿಕೆಗೆ ಕೇಂದ್ರ ಸರ್ಕಾರ ಎಷ್ಟು ಒತ್ತು ನೀಡಿತ್ತು ಎಂಬುದು ಇದರಿಂದ ಸಾಬೀತಾಗುವುದಿಲ್ಲವೇ? ಹಾಗಿದ್ದರೆ ಜನರೇ ಅದಕ್ಕೆ ಕಾರಣ ಎಂದು ನುಣುಚಿಕೊಳ್ಳುತ್ತಿರುವುದೇಕೆ?

ಕೊನೆಗೆ ಒಂದು ಮಾತು ಹೇಳಲೇಬೇಕು…. ಲಸಿಕೆ ಪಡೆಯುವಂತೆ ಯಾರನ್ನೂ ಒತ್ತಾಯಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಬಾಂಬೆ ಐಐಟಿಯ ಪ್ರೊ. ಭಾಸ್ಕರನ್‌ ರಮಣ್‌, ಪುಣೆಯ ಪಾಟೀಲ್‌ ಮೆಡಿಕಲ್ ಕಾಲೇಜಿನ ಡಾ. ಅಮಿತಾವ್‌ ಬೆನರ್ಜಿ ಮತ್ತು ಅವರ ಸಹೋದ್ಯೋಗಿ ಡಾ. ಸಾಯಿ ಮಹೇಶ್‌ ವಜ್ಜಲ್‌ ಅವರು ಈ ಕುರಿತು Quantification of COVID-19 Vaccine Coercion in India: A Survey Study ಎಂಬ ಸಮೀಕ್ಷೆಯೊಂದನ್ನು ನಡೆಸಿದ್ದಾರೆ

https://pmc.ncbi.nlm.nih.gov/articles/PMC10711416/?utm_source=chatgpt.com#REF2

ಒಟ್ಟು 483 ಜನರ ಸ್ಯಾಂಪಲ್‌ ಸರ್ವೆಯಲ್ಲಿ 106 ಜನ ತಮಗೆ ಹಲವು ಸೇವೆಗಳ ನಿರ್ಬಂಧದ ಒತ್ತಾಯ ಹೇರಿದ್ದರಿಂದ ಇಷ್ಟವಿಲ್ಲದಿದ್ದರೂ ಲಸಿಕೆ ಪಡೆದಿರುವುದಾಗಿ ಹೇಳಿದ್ದಾರೆ. ಅಂದರೆ ಸರಿಸುಮಾರು 21.94% ಜನರಿಗೆ ಒತ್ತಾಯ ಮಾಡಿ ಲಸಿಕೆ ನೀಡಲಾಗಿದೆ. ಇದಕ್ಕೆ ಏನು ಹೇಳುತ್ತೆ ಕೇಂದ್ರ ಸರ್ಕಾರ?

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

More articles

Latest article

Most read