ಹರಿಯಾಣ: ಮತಕಳ್ಳತನದ ಮೂಲಕ ಕಾಂಗ್ರೆಸ್‌ ಗೆಲುವನ್ನು ಬಿಜೆಪಿ ಕದ್ದಿದೆ: ರಾಹುಲ್‌ ಗಾಂಧಿ ಗಂಭೀರ ಆರೋಪ

Most read

ನವದೆಹಲಿ: ಮತ ಕಳವುನಡೆಸಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗೆಲುವನ್ನು ಬಿಜೆಪಿ ಕಸಿದುಕೊಂಡಿದೆ ಎಂದು ಕಾಂಗ್ರೆಸ್‌ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹರಿಯಾಣದಲ್ಲಿ 25 ಲಕ್ಷ ಮತಗಳನ್ನು ಕದಿಯಲಾಗಿದ್ದು, ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅನರ್ಹ ಮತದಾರರು ಹಾಗೂ 19.26 ಲಕ್ಷ ಬಲ್ಕ್ ಮತದಾರರು ಇದ್ದರು ಎಂದು ವಿವರಿಸಿ ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ನಕಲಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲು ತಂತ್ರಾಂಶ ಇದೆ ಎಂದಾದರೆ, ಆ ಕೆಲಸವನ್ನು ಚುನಾವಣಾ ಆಯೋಗ ಏಕೆ ಮಾಡುತ್ತಿಲ್ಲ ಎಂದೂ ಪ್ರಶ್ನಿಸಿದ್ದಾರೆ.

ಹರಿಯಾಣದಲ್ಲಿ ಚುನಾವಣಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಫಲಿತಾಂಶದ ಬಳಿಕ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು ಎಂದರು. ಒಬ್ಬರೇ ಮಹಿಳೆ 22 ಬಾರಿ ಮತದಾನ ಮಾಡಿದ್ದಾರೆ.  ಬ್ರೆಜಿಲ್ ಮೂಲದ ಮಾಡೆಲ್ ಹೆಸರಿನಲ್ಲಿ ಕಳ್ಳ ಮತದಾನ ನಡೆದಿದೆ. ಒಬ್ಬರೇ ಸೀಮಾ, ಸ್ವೀಟಿ, ಸುನಿತಾ, ರಶ್ಮಿ ಹೆಸರಲ್ಲಿ 10 ಬೂತ್ ಗಳಲ್ಲಿ ಮತದಾನ ಮಾಡಿದ್ದಾರೆ ಎಂದು ಆಪಾದಿಸಿದರು.

ಒಬ್ಬನೇ ವ್ಯಕ್ತಿ ಉತ್ತರ ಪ್ರದೇಶ, ಹರಿಯಾಣ ಎರಡೂ ರಾಜ್ಯದಲ್ಲಿ ಮತದಾನ ಮಾಡಿದ್ದಾನೆ. ಹರಿಯಾಣದಲ್ಲಿ ವೋಟ್. ಮನೆ ವಿಳಾಸ ಇಲ್ಲದವರೆಲ್ಲಾ ಮತ ಚಲಾಯಿಸಿದ್ದಾರೆ. ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ 66 ವೋಟ್ ಗಳಿವೆ. ಪರಿಶೀಲನೆ ನಡೆಸಿದಾಗ ಆ ಮನೆಯಲ್ಲಿ 66 ಮಂದಿ ಇಲ್ಲವೇ ಇಲ್ಲ.  ಮತಕಳ್ಳತನದ ಹಲವು ನಿದರ್ಶನಗಳನ್ನು ನೀಡಿದ ಅವರು, ನಾನು ಹೇಳುತ್ತಿರುವುದು ಶೇ. 101ರಷ್ಟು ಸತ್ಯ. ಹರಿಯಾಣದ ಒಟ್ಟು ಮತದಾರರ ಪೈಕಿ ಶೇ. 12.5ರಷ್ಟು ನಕಲಿ ಮತದಾನ ನಡೆದಿದೆ. ಈ ಕಳ್ಳತನಕ್ಕೆ ಬಿಜೆಪಿ ಕಾರಣ ಎಂದು ಟೀಕಿಸಿದರು.

More articles

Latest article