ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈ ವೋಲ್ಟೇಜ್ ಪಂದ್ಯ ಅಂತಲೇ ಕರೆಯಬಹುದು. ಆದರೆ 18 ಮೇ ರಂದು ಆರ್‌ಸಿಬಿ ಆಡಿದ ಅಷ್ಟು ಪಂದ್ಯಗಳು ಭರ್ಜರಿ ಜಯ ಗಳಿಸಿದ್ದು ಈಗ ಕಿಂಗ್ಸ್ ತಂಡದ ಮನದಲ್ಲಿ ಭಯ ಹುಟ್ಟುವಂತೆ ಮಾಡಿದೆ.
ಆರ್‌ಸಿಬಿ vs ಸಿಎಸ್‌ಕೆ ನಡುವಣ ಮುಖಾಮುಖಿ ಇತಿಹಾಸದಲ್ಲಿ ಮೊದಲ ಬಾರಿ 18ರ ನಂಟು ಶುರುವಾಗಿದ್ದು 2013ರಲ್ಲಿ. ಅಂದು ಆರ್‌ಸಿಬಿ ತಂಡ ಸಿಎಸ್‌ಕೆ ಎದುರು 24 ರನ್‌ಗಳ ಜಯ ದಾಖಲಿಸಿತ್ತು. 57 ರನ್ ಬಾರಿಸಿ ಅಜಯರಾಗಿ ಉಳಿದಿದ್ದರು. ಐಪಿಎಲ್ ಇತಿಹಾಸ ಕೆದಕಿದರೆ 18ನೇ ತಾರೀಖಿನಲ್ಲಿ ವಿರಾಟ್ ಕೊಹ್ಲಿ ಎರಡು ಮನಮೋಹಕ ಶತಕಗಳನ್ನು ಬಾರಿಸಿರುವುದು ಕಾಣಿಸುತ್ತದೆ.
ಬಳಿಕ 2014ರಲ್ಲೂ ಸಿಎಸ್‌ಕೆ ಎದುರು ಮೇ 18ರಂದೇ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಜಯ ದಾಖಲಿಸಿತ್ತು.
ಹೀಗೆ ವಿರಾಟ್ ಕೊಹ್ಲಿ ಅವರ ನೇತೃತ್ವದ ಆರ್‌ಸಿಬಿ ಈ ವಿಶೇಷ ಅಂಕಿ ಅಂಶಗಳು ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮನದಲ್ಲಿ ಭಯ ಹುಟ್ಟುವಂತೆ ಮಾಡಿದೆ.
ಮೇ 18ರಂದು ಆಡಿದ ಅಷ್ಟು ಪಂದ್ಯಗಳ ವಿವರ
56* (29) – ಸಿಎಸ್‌ಕೆ ವಿರುದ್ಧ 2013ರಲ್ಲಿ (ಆರ್‌ಸಿಬಿಗೆ ಜಯ)
27 (29) – ಸಿಎಸ್‌ಕೆ ವಿರುದ್ಧ 2014ರಲ್ಲಿ (ಆರ್‌ಸಿಬಿಗೆ ಜಯ)
113 (50) – ಪಂಜಾಬ್ ಕಿಂಗ್ಸ್ ವಿರುದ್ಧ 2016ರಲ್ಲಿ (ಆರ್‌ಸಿಬಿಗೆ ಜಯ)
100 (63) – ಎಸ್‌ಆರ್‌ಎಚ್ ವಿರುದ್ಧ 2023ರಲ್ಲಿ (ಆರ್‌ಸಿಬಿಗೆ ಜಯ)