Thursday, December 12, 2024

ಕಂಗನಾ ರಣಾವತ್ ಆಗಿ ಬದಲಾಗುತ್ತಿದ್ದಾರಾ ರಶ್ಮಿಕಾ : ತಾವೇ ವೋಟ್ ಹಾಕಲ್ಲ, ಅಭಿವೃದ್ಧಿಗೆ ಮತ ನೀಡಿ ಅಂತೆ..! ಕೊಡಗಿನ ಕುವರಿ ಫುಲ್ ಟ್ರೋಲ್..!

Most read

ರಶ್ಮಿಕಾ ಮಂದಣ್ಣ ಟ್ರೋಲ್ ಆಗುವುದೇನು ವಿಶೇಷವಲ್ಲ. ಕುಂತ್ರು ನಿಂತ್ರು ಟ್ರೋಲರ್ಸ್ ಗಳ ಕೈಗೆ ಸಿಕ್ಕಿ ಬೀಳುತ್ತಾರೆ. ಆದರೆ ಈ ಬಾರಿ ಟ್ರೋಲ್ ಆಗ್ತಾ ಇರೋದು ರಾಜಕೀಯದ ವಿಚಾರಕ್ಕೆ. ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ‌. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದೆ. ಎಲ್ಲಾ ಸೆಲೆಬ್ರೆಟಿಗಳು ಮತ ನೀಡುವ ಮೂಲಕ ನೀವೂ ಮತ ನೀಡಿ ಎಂದು ಮನವಿ ಮಾಡಿದ್ದರು. ಆದರೆ ರಶ್ಮಿಕಾ ಮಂದಣ್ಣ ಮಾತ್ರ ಮತ ಹಾಕುವುದಕ್ಕೆ ಹೋಗಿಲ್ಲ. ಅದನ್ನ ಬಿಡಿ, ಮತ ಹಾಕದೆ ಮತದ ವ್ಯಾಲ್ಯೂ ಬಗ್ಗೆ ರಶ್ಮಿಕಾ ಮಾತನಾಡಿರುವುದು ಫುಲ್ ಟ್ರೋಲ್ ಆಗಿದೆ.

’10 ವರ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಣ್ಣು ತೆರೆದು ನೋಡಿ. 22 ಕಿಮೀ ಉದ್ದದ ಆರು ಪಥದ ಸೇತುವೆಯ ಪ್ರಯಾಣದ ಸಮಯವನ್ನು 2 ಗಂಟೆಗಳಿಂದ ಕೇವಲ‌ ನಿಮಿಷಕ್ಕೆ ಇಳಿಸಲಾಗಿದೆ. ಭಾರತವೂ ದೊಡ್ಡ ಕನಸುಗಳನ್ನು ಹೊಂದಿರಲಿಲ್ಲ. ಆದರೆ ಏಳು ವರ್ಷಗಳಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಅಟಲ್ ಸೇತು ಮೂಲಕ ಅಭಿವೃದ್ಧಿ ಹೊಂದಿದ ಭಾರತ ಹೆಬ್ಬಾಗಿಲು ತೆರೆದುಕೊಂಡಿದೆ.‌ ವೆಸ್ಟ್ ಇಂಡಿಯಾ ಟು ಈಸ್ಟ್ ಇಂಡಿಯಾ.. ಕನೆಕ್ಟಿಂಗ್ ಹಾರ್ಟ್ಸ್.. ಮೈ ಇಂಡಿಯಾ ಎಂದು ಕ್ಯಾಪ್ಶನ್ ಹಾಕಿ ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಅನೇಕರು ಕಮೆಂಟ್ ಹಾಕುವುದಕ್ಕೆ ಶುರು ಮಾಡಿದ್ದಾರೆ. ಮೇಡಂ ಮೊದಲು ನೀವೂ ಈ ವರ್ಷ ಮತ ಹಾಕಿದ್ದೀರಾ..? ಎಂದು ಪ್ರಶ್ನೆ ಮಾಡಿದ್ದರೆ, ಇನ್ನು ಕೆಲವರು ಓಓ ರಶ್ಮಿಕಾ ಮಂದಣ್ಣ ನಿಧಾನವಾಗಿ ಕಂಗನಾ ರಣಾವತ್ ಆಗಿ ಬದಲಾಗುತ್ತಿದ್ದಾರೆ ಎಂದು ಕಮೆಂಟ್ ಹಾಕಿದ್ದಾರೆ.

More articles

Latest article