Sunday, September 8, 2024

ಹಿಂಸೆ ಎಂದಿಗೂ ಒಂದುಗೂಡಿಸಿಲ್ಲ ಮತ್ತು ಶಾಂತಿ ಎಂದಿಗೂ ಬಿರುಕು ಮೂಡಿಸಿಲ್ಲ : ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

Most read

ಭಗವಾನ್ ಬುದ್ಧನ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶವು ದ್ವೇಷ ಮತ್ತು ಭಯೋತ್ಪಾದನೆಯ ಶಕ್ತಿಗಳ ವಿರುದ್ಧ ನಿಂತಿದೆ. ಬುದ್ಧರ ಬೋಧನೆಗಳು ಭವಿಷ್ಯದ ದಿಕ್ಸೂಚಿ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಬುಧವಾರ ಹೇಳಿದ್ದಾರೆ.

ಇಂತಹ ದುರತ ಕಾಲದಲ್ಲಿ, ಗೌತಮ ಬುದ್ಧನ ಬೋಧನೆಗಳು ಸುಸ್ಥಿರತೆಯ ಮಾರ್ಗವನ್ನು ನೀಡುತ್ತವೆ.  ಜನರು ಸಹಿಷ್ಣುತೆ, ನ್ಯಾಯ ಮತ್ತು ಶಾಂತಿ ಪಸರಿಸುವ ಕಡೆ ನಡೆಯಬೇಕು. ಇದು ಎಲ್ಲರೂ ಅಭಿವೃದ್ಧಿ ಹೊಂದುವ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ.

ಶಾಂತಿಗಾಗಿ ಏಷ್ಯನ್ ಬೌದ್ಧ ಸಮ್ಮೇಳನದ 12 ನೇ ಮಹಾಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಒಂದು ರಾಷ್ಟ್ರವಾಗಿ ಬುದ್ಧನ ತತ್ವಗಳು ಮಾರ್ಗದರ್ಶಿಯಾಗಿದೆ.

“ಬೌದ್ಧ ಧರ್ಮವು ಭಾರತದಲ್ಲಿ ಹುಟ್ಟಿ ಪ್ರಪಂಚದ ವಿವಿಧ ಮೂಲೆಗಳಿಗೆ ಹರಡಿದೆ. ನರೇಂದ್ರ ಮೋದಿ ಅವರ ಹೇಳುವಂತೆ, ನಮ್ಮದು ಬುದ್ಧನನ್ನು ನೀಡಿದ ರಾಷ್ಟ್ರ, ಯುದ್ಧವನಲ್ಲ ಎಂದು ನಾವು ಹೆಮ್ಮೆಯಿಂದ  ಹೇಳಿಕೊಳ್ಳೊಣ” ಎಂದು ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

“ಜಗತ್ತು ಇಂದು ಸಾರ್ವತ್ರಿಕವಾದ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಸಂಘಟಿತ ಹೋರಾಟಕ್ಕೆ ಕರೆ ನೀಡುತ್ತದೆ.  ಹವಾಮಾನ ಬದಲಾವಣೆ, ಸಂಘರ್ಷ, ಭಯೋತ್ಪಾದನೆ ಮತ್ತು ಬಡತನದಂತಹ ದೊಡ್ಡ ಸಮಸ್ಯೆಯನ್ನು ನಾವು ಸಂಘಟಿತವಾಗಿಯೇ ಎದುರಿಸಬೇಕಿದೆ. ಈ ಸವಾಲುಗಳು ಸಾಮಾನ್ಯ ಸಂಕಲ್ಪ ಮತ್ತು ಸಹಯೋಗ ಮತ್ತು ಸಾಮೂಹಿಕ ವಿಧಾನದಿಂದ ಪರಿಹರಿಸಬಹುದು” ಎಂದು ಅವರು ಹೇಳಿದ್ದಾರೆ.

ಹಿಂಸೆ ಎಂದಿಗೂ ಒಂದುಗೂಡಿಸಿಲ್ಲ ಮತ್ತು ಶಾಂತಿ ಎಂದಿಗೂ ಬಿರುಕುಮೂಡಿಸಿಲ್ಲ. ಪ್ರಪಂಚದಾದ್ಯಂತದ ಯುವ ಪೀಳಿಗೆಗಳು ಭಗವಾನ್ ಬುದ್ಧನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವರ ಆದರ್ಶಗಳಿಂದ ಸ್ಫೂರ್ತಿ ಪಡೆದುಕೊಳ್ಳಬೇಕು ಇದನ್ನು ಖಾತ್ರಿ ಪಡಿಸಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹೇಳಿದ್ದಾರೆ.

More articles

Latest article