ವಿನೇಶ್ ಪೋಗಟ್ ಅರ್ಜಿ ವಜಾ: ಬೆಳ್ಳಿಪದಕದ ಕನಸೂ ನುಚ್ಚುನೂರು

ಹೊಸದಿಲ್ಲಿ: ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಭಾರತಕ್ಕೆ ಪ್ಯಾರಿಸ್ ನಿಂದ ಕಹಿ ಸುದ್ದಿ ಬಂದಿದೆ. ನೂರು ಗ್ರಾಂ ತೂಕ ಹೆಚ್ಚಾದ ಕಾರಣ ಅನರ್ಹತೆಗೆ ಒಳಗಾದ ಭಾರತೀಯ ಕುಸ್ತಿಪಟು ವಿನೇಶ್ ಪೋಗಟ್ ಜಂಟಿ ಬೆಳ್ಳಿಪದಕಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಫೈನಲ್ ತಲುಪಿದ್ದರೂ ವಿನೇಶ್ ಪದಕವಂಚಿತರಾಗಿದ್ದಾರೆ.

ಒಲಿಂಪಿಕ್ಸ್ 2024ರಲ್ಲಿ ಭಾಗವಹಿಸಿ 50 ಕೆ.ಜಿ. ಫ್ರೀ ಸ್ಟೈಲ್ ಕುಸ್ತಿಯಲ್ಲಿ ಭಾಗವಹಿಸಿದ್ದ ವಿನೇಶ್ ಪೋಗಟ್ ಅಸಾಮಾನ್ಯ ಪ್ರದರ್ಶನ ತೋರಿ ಫೈನಲ್ ತಲುಪಿದ್ದರು. ಆದರೆ ಕೇವಲ ದೇಹದ ತೂಕದಲ್ಲಿ ನೂರು ಗ್ರಾಂ ಹೆಚ್ಚಳ ಕಂಡುಬಂದಿದ್ದರಿಂದ ಅವರನ್ನು ಫೈನಲ್ ಆಡಲು ನಿರ್ಬಂಧಿಸಲಾಯಿತಲ್ಲದೆ, ಯಾವುದೇ ಪದಕವನ್ನೂ ನೀಡಲಾಗಲಿಲ್ಲ.

ಈ ಸಂಬಂಧ ವಿನೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಳೆದ ವಾರ Court of Arbitration (CAS) ನಲ್ಲಿ ನಡೆದಿತ್ತು. ವಿಚಾರಣೆಯ ನಂತರ ಸಿಎಎಸ್ ಆಗಸ್ಟ್ 7ರಂದು ವಿನೇಶ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

ಅರ್ಜಿ ವಜಾಗೊಳ್ಳುತ್ತಿದ್ದಂತೆ ಭಾರತೀಯ ಒಲಿಪಿಂಕ್ ಅಸೋಸಿಯೇಷನ್ (IOA) ಆಘಾತ ವ್ಯಕ್ತಪಡಿಸಿದೆ. IOA ಅಧ್ಯಕ್ಷೆ ಪಿ.ಟಿ.ಉಷಾ ತೀರ್ಪಿನಿಂದ ತಮಗೆ ನಿರಾಶೆ ಆಗಿರುವುದಾಗಿ ತಿಳಿಸಿದ್ದಾರೆ.

More articles

Latest article

Most read