ಉಪರಾಷ್ಟ್ರಪತಿ ಚುನಾವಣೆ; ಸೆಪ್ಟಂಬರ್‌ 9 ರಂದು ಮತದಾನ; ಅಂದೇ ಫಲಿತಾಂಶ ಪ್ರಕಟ

ನವದೆಹಲಿ: ಉಪರಾಷ್ಟ್ರಪತಿ ಆಯ್ಕೆಗೆ ಸೆಪ್ಟೆಂಬರ್‌ 9ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಇಂದು ತಿಳಿಸಿದೆ. ಜಗದೀಪ್‌ ಧನಕರ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನೂತನ ಅಭ್ಯರ್ಥಿ ಆಯ್ಕೆಗೆ ಸಿದ್ಧತೆಗಳು ನಡೆಯುತ್ತಿವೆ. ನಿನ್ನೆಯಷ್ಟೇ ಚುನಾವಣಾ ಆಯೋಗವು ಮತ ಮೌಲ್ಯಗಳ ಪಟ್ಟಿ (ಮತದಾರರ ಪಟ್ಟಿ) ಅಂತಿಮಗೊಳಿಸಿದೆ.

ಇನ್ನೂ ಎರಡು ವರ್ಷ ಅಧಿಕಾರ ಇರುವಾಗಲೇ ಧನಕರ್ ಅವರು ಜುಲೈ 21ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆಗಸ್ಟ್‌ 7 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಆಗಸ್ಟ್‌ 21 ಕೊನೆಯ ದಿನವಾಗಿರುತ್ತದೆ. ಆಗಸ್ಟ್‌ 22 ರಂದು ನಾಮಪತ್ರ ಪರಿಶೀಲನೆ  ನಡೆಯಲಿದೆ. ಆಗಸ್ಟ್‌ 25 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ.  ಸೆಪ್ಟೆಂಬರ್‌ 9 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

More articles

Latest article

Most read