ವಿಬಿ -ಜಿ ರಾಮ್‌ ಜಿ ಮಸೂದೆ ಗ್ರಾಮೀಣ ಭಾಗದ ಜನರ ಹಕ್ಕನ್ನು ಕಸಿದುಕೊಳ್ಳುತ್ತಿದೆ; ರಾಹುಲ್‌ ಗಾಂಧಿ ಆತಂಕ

Most read

ನವದೆಹಲಿ: ಕಳೆದ 20 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಮಹಾತ್ಮಾ ಗಾಂಧಿ ನರೇಗಾ ಕಾಯ್ದೆಯನ್ನು ಪ್ರಧಾನಿ ಮೋದಿ ಸರ್ಕಾರ ಒಂದೇ ದಿನದಲ್ಲಿ ನಾಶ ಮಾಡಿದೆ ಎಂದು ಕಾಂಗ್ರೆಸ್‌ ಮುಖಂಡ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಗಾಂಧೀಜಿ ಅವರ ಹೆಸರನ್ನು ಅಳಿಸಿ ಹಾಕಲು ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ-ಜಿ ರಾಮ್‌ ಜಿ ಎಂಬ ಹೊಸ ಹೆಸರನ್ನು ನಾಮಕರಣ ಮಾಡಿದೆ. ಮೇಲಾಗಿ ಃಒಸ ರೂಪದಲ್ಲಿರುವ ಈ ಯೋಜನೆಯು ಗ್ರಾಮೀಣ ಪ್ರದೇಶಗಳ ವಿರೋಧಿಯೂ ಆಗಿದೆ ಎಂದು ಟೀಕಿಸಿದ್ದಾರೆ.

ನರೇಗಾದಲ್ಲಿ ನೀಡಲಾಗುತ್ತಿದ್ದ ಉದ್ಯೋಗದ ದಿನಗಳನ್ನು ಕಡಿಮೆ ಮಾಡಲಾಗುತ್ತಿದೆ. ಕೋವಿಡ್ ಸಮಯದಲ್ಲಿ ನರೇಗಾದಿಂದ  ಗ್ರಾಮೀಣ ಪ್ರದೇಶಗಳ ಜನರ ಜೀವನಕ್ಕೆ ಆಧಾರವಾಗಿದೆ.  ಆದರೆ ಈ ಹೊಸ ಸ್ವರೂಪದಿಂದ ಮಹಿಳೆಯರು, ದಲಿತರು, ಅದಿವಾಸಿಗಳು, ಭೂರಹಿತ ಕಾರ್ಮಿಕರು ಮತ್ತು ಬಡ ಒಬಿಸಿಗಳ ಜನತೆ ಯೋಜನೆಯ ವ್ಯಾಪ್ತಿಯಿಂದ ಹೊರಹೋಗುಳಿಯುವ ಸಂಭವ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಜಾರಿಗೊಳಿಸಿದ ನರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶಗಳ  ಜನರ ಶೋಷಣೆ ನಿಂತಿದೆ. ಜನರು ವಲಸೆ ಹೋಗುವುದು ಕಡಿಮೆಯಾಗಿದೆ. ಕಾರ್ಮಿಕರ ವೇತನ ಹೆಚ್ಚಳವಾಗಿದೆ. ಉದೋಗದ ಅವಕಾಶಗಳು ಸಿಕ್ಕಿವೆ. ಗ್ರಾಮೀಣ ಮೂಲಸೌಕರ್ಯ ನಿರ್ಮಾಣ ಮತ್ತು ಪುನಶ್ಚೇತನವಾಗಿದೆ.  ಇಂತಹ ಅಭಿವೃದ್ಧಿ ಯೋಜನೆಯನ್ನು ನಾಶಗೊಳಿಸಲು ಕೇಂದ್ರ ಸರ್ಕಾರ ಯನ್ನು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಆಪಾದಿಸಿದ್ದಾರೆ.

More articles

Latest article