ಹಿರಿಯ ನಟಿ, ರಂಗಭೂಮಿ ಕಲಾವಿದೆ ಲಲಿತಮ್ಮ ಇನ್ನಿಲ್ಲ

ರಂಗಭೂಮಿ ಕಲಾವಿದೆ, ಕಿರುತೆರೆ ಸೇರಿದಂತೆ ಹಲವಾರು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ ಪೋಷಕ ನಟಿ ಲಲಿತಮ್ಮ (65) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ,

ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ನವರಿಗೆ ಪಾರ್ಶ್ವವಾಯು ಉಂಟಾಗಿತ್ತು, ಕೆಲ ತಿಂಗಳುಗಳಿಂದ, ನಟಿ ಶಶಿಕಲಾ ನಾರಾಯಣ್ ಅವರ “ಅಮ್ಮನ ಮಡಿಲು” ಟ್ರಸ್ಟ್ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು.

ಲಲಿತಮ್ಮ ಅವರು ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದಲ್ಲಿ 35 ವರ್ಷಗಳ ಕಾಲ ಸಕ್ರಿಯರಾಗಿದ್ದರು. ತಾಯಿ, ಅಜ್ಜಿಯಂತಹ ಪ್ರಮುಖ ಪೋಷಕ ಪಾತ್ರಗಳ ಮೂಲಕ ರಂಗಭೂಮಿ ಮತ್ತು ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ʻಸುಂಟರಗಾಳಿʼ, ʻಜಾಕಿʼ, ʻಲೈಫು ಇಷ್ಟೇನೆʼ, ʻಪಂಚರಂಗಿʼ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಲಲಿತಮ್ಮ, ಕಿರುತೆರೆಯ ʻಮಾಂಗಲ್ಯʼ, ʻರಂಗೋಲಿʼ, ʻಮಹಾಮಾಯಿʼ ಸೇರಿದಂತೆ ಅನೇಕ ಧಾರಾವಾಹಿಗಳಲ್ಲೂ ನಟಿಸಿದ್ದರು.

More articles

Latest article

Most read