Tuesday, December 10, 2024

ವಾಹನ ಹಿಮ್ಮುಖ ಚಲಿಸಿ ಮೂರೂವರೆ ವರ್ಷದ ಮಗು ಸಾವು

Most read

ಮಂಗಳೂರು: ನಿಲ್ಲಿಸಿದ್ದ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ, ವಾಹನದ ಹಿಂಬದಿ ಆಟವಾಡುತ್ತಿದ್ದ ಮೂರೂವರೆ ವರ್ಷದ ಮಗುವೊಂದು ವಾಹನದಡಿ ಸಿಲುಕಿ ಧಾರುಣವಾಗಿ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಲೊರೆಟ್ಟೊಪದವು ಎಂಬಲ್ಲಿ ನಡೆದಿದೆ.


ಫರಂಗಿಪೇಟೆ ಸಮೀಪದ ಪತ್ತನಬೈಲ್ ನಿವಾಸಿಯಾಗಿರುವ ಉನೈಸ್ ಮತ್ತು ಆಶೂರಾ ದಂಪತಿಯ ಮಗಳು ಆಶೀಕಾ ಅಸುನೀಗಿದ ದುರ್ದೈವಿ.
ಮಗುವಿನ ತಾಯಿಯ ತವರು ಮನೆ ಟಿಪ್ಪುನಗರದ ಲೊರೆಟ್ಟೊಪದ. ಅಲ್ಲಿಗೆ ತಾಯಿ ಮಗು ಆಗಮಿಸಿದ್ದರು. ಮಗು ಮನೆಯ ಹೊರಗೆ ಆಟವಾಡುತ್ತಿತ್ತು. ತಾಯಿಯ ಸಹೋದರ ತನ್ನ ಟಾಟಾ ಏಸ್ ವಾಹನವನ್ನು ಮನೆಯಂಗಳದಲ್ಲಿ ನಿಲ್ಲಿಸಿ ಹೋಗಿದ್ದರು. ಮಗು ಆಟವಾಡುತ್ತಿದ್ದ ವೇಳೆ ಈ ವಾಹನ ಏಕಾಏಕಿ ಹಿಂದಕ್ಕೆ ಚಲಿಸಿದೆ ಎಂದು ತಿಳಿದು ಬಂದಿದೆ. ವಾಹನ ಹಿಂದಕ್ಕೆ ಚಲಿಸುತ್ತಿರುವ ವಿಷಯದ ಅರಿವಿಲ್ಲದೆ ಮಗು ಆಟವಾಡುತ್ತಲೇ ಇತ್ತು. ಹಿಂದಕ್ಕೆ ಚಲಿಸಿದ ವಾಹನ ಮಗುವಿನ ಮೇಲೆ ಹರಿದಿದೆ. ವಿಷಯ ತಿಳಿಯುತ್ತಿದ್ದಂತೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

More articles

Latest article