ಬೇಸಿಗೆಯಲ್ಲಿ ಅತ್ಯಂತ ವೇಗವಾಗಿ ಮಂಗನ ಕಾಯಿಲೆ ಪಸರಿಸುತ್ತಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 108 ಜನರಲ್ಲಿ ಮಂಗನ ಕಾಯಿಲೆ (ಕೆಎಫ್ಡಿ) ಪತ್ತೆ ಆಗಿದೆ.
ಸಿದ್ದಾಪುರ ಒಂದೇ ತಾಲೂಕಿನಲ್ಲಿ ಮಂಗನಕಾಯಿಲೆ 100 ಪ್ರಕರಣಗಳು ದಾಖಲಾಗಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಎಫ್ಡಿ ಹೆಮಟೆ ಮನೆಯಲ್ಲಿ 11 ವರ್ಷದ ಬಾಲಕನಿಗೆ ಪತ್ತೆಯಾಗಿದೆ. ಕೊರ್ಲಕೈ ಒಂದೇ ಗ್ರಾಮದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆ ಆಗಿದ್ದು, ಮಂಗನ ಕಾಯಿಲೆ ಪ್ರಕರಣ ತಡೆಗಟ್ಟಲು ಜಿಲ್ಲಾಡಳಿತ ವಿಫಲವಾಗಿದೆ.
ಮಂಗನಕಾಯಿಲೆಯಿಂದಾಗಿ ಸಾವಿನ ಸಂಖ್ಯೆ 9ಕ್ಕೆ ಏರಿದೆ. ಹೀಗಾಗಿ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ.
ಈ ಹಿಂದೆ ನೀಡಲಾಗುತಿದ್ದ ಲಸಿಕೆಯನ್ನು ಪರಿಣಾಮಕಾರಿ ಅಲ್ಲ ಹಾಗೂ ಗುಣಮಟ್ಟದ ಕಾರಣ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಹಿಂಪಡೆದಿತ್ತು. ಹೀಗಾಗಿ ಮಂಗನಕಾಯಿಲೆ ಗೆ ಲಸಿಕೆ ಸಹ ಇಲ್ಲದಂತಾಗಿದ್ದು, ಹೀಗಾಗಿ ಜನರಲ್ಲಿ ಸಹ ಲಸಿಕೆ ಇಲ್ಲದ ಕಾರಣ ಸೊಂಕಿನ ಪ್ರಮಾಣ ಸಹ ಗಣನೀಯ ಏರಿಕೆ ಕಂಡಿದೆ.