ಉತ್ತರ ಪ್ರದೇಶದ ಬಹ್ರೈಚ್‌ನ ವಿವಾಹಿತ ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆಯ ಅಭಿವೃದ್ಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಕ್ಕಾಗಿ ಪತಿ ತನಗೆ “ತ್ರಿವಳಿ ತಲಾಖ್” ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ವ್ಯಕ್ತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ತನ್ನ ಅತ್ತೆ, ಪತಿ ಮತ್ತು ಇತರರು ತನಗೆ ಅಮಾನುಷವಾಗಿ ಥಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತನ್ನ ಪತಿಯ ಮನೆಯವರು ಕೂಡ ತನ್ನ ಕತ್ತು ಹಿಸುಕಲು ಪ್ರಯತ್ನಿಸಿದರು ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 13, 2023 ರಂದು, ನಾನು ಅಯೋಧ್ಯೆಯ ಕೊತ್ವಾಲಿ ನಗರದ ಮೊಹಲ್ಲಾ ದೆಹಲಿ ದರ್ವಾಜಾ ನಿವಾಸಿ ಇಸ್ಲಾಂ ಅವರ ಮಗ ಅರ್ಷದ್ ಅವರನ್ನು ವಿವಾಹವಾಗಿದ್ದೇನೆ. ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ಮೇರೆ ಮದುವರೆಯಾಗಿದ್ದು, ನನ್ನ ತಂದೆ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿ ನಮ್ಮ ಮದುವೆ ಮಾಡಿದ್ದಾರೆ, ”ಎಂದು ಹೇಳಿಕೊಂಡಿದ್ದಾರೆ.
“ಮದುವೆಯ ನಂತರ, ನಾನು ನಗರಕ್ಕೆ ಹೋದಾಗ, ನಾನು ಅಯೋಧ್ಯಾ ಧಾಮದ ರಸ್ತೆಗಳು, ಸುಂದರೀಕರಣ, ಅಭಿವೃದ್ಧಿ ಮತ್ತು ಅಲ್ಲಿನ ವಾತಾವರಣವನ್ನು ಇಷ್ಟಪಟ್ಟೆ. ಈ ಕುರಿತು ನಾನು ನನ್ನ ಪತಿಯ ಮುಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದೆ, ಆದರೆ ನನ್ನ ಪತಿ ನನಗೆ ಬೈದು ಹೊಡೆದಿದ್ದಾರೆ. ನಂತರ ನನ್ನ ತವರಿಗೆ ಕಳಿಸುವುದಾಗಿ ಕೂಡ ಹೇಳಿದ್ದರು. ನಂತರ ಪತಿ ಮುಖ್ಯಮಂತ್ರಿ, ಪ್ರಧಾನಿಯನ್ನು ನಿಂದಿಸಿ, ತಲಾಖ್, ತಲಾಖ್, ತಲಾಖ್ ಎಂದು ಉಚ್ಚರಿಸುವ ಮೂಲಕ ವಿಚ್ಛೇದನ ನೀಡಿದ್ದರು ಎಂದ ಆರೋಪಿಸಲಾಗಿದೆ.