ಬುರ್ಖಾಗೆ ನಿಷೇಧ ಹೇರಿದ್ದ ಮುಂಬೈನ ಕಾಲೇಜೊಂದರ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ತಡೆ ನೀಡುವ ವೇಳೆ, ‘ನಿಷೇಧದ ಹಿಂದಿನ ತರ್ಕ ಏನು?’ ಹಿಜಾಬ್ ನಿಷೇಧಿಸುವ ನೀವು ತಿಲಕ, ಬಿಂದಿಗೂ ನಿಷೇಧ ಹೇರುತ್ತೀರಾ? ಎಂದೂ ಸರ್ವೋಚ್ಚ ನ್ಯಾಯಾಲಯ ಗಂಭೀರ ಪ್ರಶ್ನೆಗಳನ್ನೂ ಕೇಳಿದೆ.
ವಿಚಾರಣೆ ಕೈಗೆತ್ತುಕೊಂಡ ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಹಾಗೂ ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠ, ಯಾವುದೇ ಹಿಜಾಬ್, ಟೋಪಿ, ಬ್ಯಾಡ್ಜ್ಗಳನ್ನು ಕಾಲೇಜು ಆವರಣದ ಒಳಗೆ ಧರಿಸಲು ಅನುಮತಿ ನೀಡಲಾಗುವುದಿಲ್ಲ ಎಂಬ ಸುತ್ತೋಲೆಯ 2ನೇ ವಾಕ್ಯಕ್ಕೆ ಮಾತ್ರ ತಡೆ ನೀಡುತ್ತಿದ್ದೇವೆ. ಈ ಮಧ್ಯಂತರ ಆದೇಶವನ್ನು ಯಾರೂ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂಧು ಕೋರ್ಟ್ ಹೇಳಿದೆ.
ವಿದ್ಯಾರ್ಥಿಗಳು ತಮ್ಮ ಧರ್ಮವನ್ನು ಬಹಿರಂಗಪಡಿಸಬೇಕು ಎಂದು ಅಧಿಕಾರಿಗಳು ಬಯಸುವುದಿಲ್ಲ. ಆದ್ಧರಿಂದ ವಸ್ತ್ರ ಸಂಹಿತೆ ಅತ್ಯಗತ್ಯ,” ಎಂದು ಕಾಲೇಜು ವಾದಿಸಿದಾಗ, ಹಿಜಾಬ್ ನಿಷೇಧಿಸುವ ನೀವು ತಿಲಕ, ಬಿಂದಿಗೂ ನಿಷೇಧ ಹೇರುತ್ತೀರಾ? ವಿದ್ಯಾರ್ಥಿಗಳ ಆಗ ಹೆಸರಿನಲ್ಲೂ ಧರ್ಮವಿದೆ, ವಿದ್ಯಾರ್ಥಿಗಳನ್ನು ಕೇವಲ ಸಂಖ್ಯೆಗಳ ಮೂಲಕ ಗುರುತಿಬೇಕು ಎಂದು ಹೇಳುತ್ತೀರಾ?” ಎಂದು ಕೇಳಿದೆ.
ಆಗಸ್ಟ್ 9ರಂದು ಬಾಂಬೆ ಹೈಕೋರ್ಟ್ ಮುಂಬೈನ ಕಾಲೇಜೊಂದು ಹಿಜಾಬ್ಗೆ ನಿಷೇಧ ಹೇರಿದ್ದ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಇಂದು ತಡೆಯಾಜ್ಞೆ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದೆ.