ಉದ್ಯಾನ್ ಎಕ್ಸ್‌ಪ್ರೆಸ್ –  ದಶಕ ನಾಲ್ಕು ಬವಣೆ ನೂರು

1,003 ಕಿಮೀ ದೂರವನ್ನು 14 ಗಂಟೆಗಳಲ್ಲಿ ಮುಗಿಸುವ ಸಂಪೂರ್ಣ ಕ್ರಾಂತಿ ಎಕ್ಸ್‌ಪ್ರೆಸ್ ಇರುವಾಗ, 1001 ಕಿಮೀ ಪ್ರಯಾಣಕ್ಕೆ 24 ಗಂಟೆ ತೆಗೆದುಕೊಳ್ಳುವ ಉದ್ಯಾನ್ ಎಕ್ಸ್‌ಪ್ರೆಸ್ ಅನ್ನು ಕನಿಷ್ಠ 15 ಗಂಟೆಗಳೊಳಗೆ ನಡೆಸಲು ಸಾಧ್ಯವಿಲ್ಲವೇ?” –

ದೇಶದ ಪ್ರಮುಖ ರೈಲು ಸಂಪರ್ಕಗಳಲ್ಲಿ ಒಂದಾದ ಉದ್ಯಾನ್ ಎಕ್ಸ್‌ಪ್ರೆಸ್ ಪ್ರಾರಂಭವಾಗಿ ನಾಲ್ಕು ದಶಕಗಳಾದರೂ ಅದರ ಪ್ರಯಾಣ ಸಮಯದಲ್ಲಿ ಯಾವುದೇ ಬದಲಾವಣೆ ಆಗದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಮುಂಬೈ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಈ ರೈಲು 1983ರಲ್ಲಿ 43 ವರ್ಷಗಳ ಹಿಂದೆ ತೆಗೆದುಕೊಂಡಷ್ಟೇ ಅಂದರೆ ಸುಮಾರು 24 ಗಂಟೆಗಳ ಕಾಲವನ್ನು ಇಂದಿಗೂ ತೆಗೆದುಕೊಳ್ಳುತ್ತಿದೆ!!

ಈ ಅವಧಿಯಲ್ಲಿ ಮುಂಬೈ ಮಹಾನಗರವಾಗಿ ಬೆಳೆಯುತ್ತಿದ್ದರೆ, ಬೆಂಗಳೂರು ಜಾಗತಿಕ ಐಟಿ ಕೇಂದ್ರವಾಗಿ ರೂಪಾಂತರಗೊಂಡಿದೆ. ಆದರೆ ಭಾರತೀಯ ರೈಲ್ವೆ ತಾಂತ್ರಿಕವಾಗಿ ಮುಂದುವರೆದಿದ್ದರೂ, ಈ ಪ್ರಮುಖ ಮಾರ್ಗದಲ್ಲಿ ಅದರ ವೇಗ ಹೆಚ್ಚಾಗದೆ ಇರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೇಗ ಹೆಚ್ಚಿಸುವ ಕುರಿತು ತೀವ್ರಗೊಂಡ ಚರ್ಚೆ

ಮುಂಬೈ ರೈಲು ಯಾತ್ರಿ ಸಂಘದ ಎಕ್ಸಿಕ್ಯುಟಿವ್‌ ಸೆಕ್ರೆಟರಿ ಒಲಿವರ್ ಡಿ’ ಸೋಜಾ ಅವರು “1,003 ಕಿಮೀ ದೂರವನ್ನು 14 ಗಂಟೆಗಳಲ್ಲಿ ಮುಗಿಸುವ ಸಂಪೂರ್ಣ ಕ್ರಾಂತಿ ಎಕ್ಸ್‌ಪ್ರೆಸ್ ಇರುವಾಗ, 1001 ಕಿಮೀ ಪ್ರಯಾಣಕ್ಕೆ 24 ಗಂಟೆ ತೆಗೆದುಕೊಳ್ಳುವ ಉದ್ಯಾನ್ ಎಕ್ಸ್‌ಪ್ರೆಸ್ ಅನ್ನು ಕನಿಷ್ಠ 15 ಗಂಟೆಗಳೊಳಗೆ ನಡೆಸಲು ಸಾಧ್ಯವಿಲ್ಲವೇ?” ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ.

ಅವರ ಅಭಿಪ್ರಾಯಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಜನಾಭಿಪ್ರಾಯವು ಹೆಚ್ಚಾಗಿ ಅಸಮಾಧಾನವನ್ನು ತೋರಿಸುತ್ತದೆ. ನಿರಂತರವಾಗಿ ಪ್ರಯಾಣಿಸುವವರು ಇಂದಿನ ವೇಗದ ರೈಲುಗಳ ಯುಗದಲ್ಲಿ ಮುಂಬೈ–ಬೆಂಗಳೂರು ಅಂತಹ ಪ್ರಮುಖ ಮಾರ್ಗದಲ್ಲಿ ವೇಗವಾದ ಸೇವೆ ಅಗತ್ಯವಿದೆ ಎಂದು ಒತ್ತಾಯಿಸುತ್ತಿದ್ದಾರೆ.

ಕೆಲವರು ರೈಲಿನ ಪ್ರಯಾಣ ಸಮಯ ಆರಂಭದಿಂದಲೂ ಬದಲಾಗಿಲ್ಲ ಎಂದು ಗಮನ ಸೆಳೆದರೆ, ಇನ್ನು ಕೆಲವರು ಉತ್ತಮ ಸಮನ್ವಯ ಮತ್ತು ತಂತ್ರಜ್ಞಾನ ಬಳಕೆಯಿಂದ ಸಮಯ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಭೌಗೋಳಿಕ ಸವಾಲುಗಳು ಮತ್ತು ಕಾರ್ಯಾಚರಣಾ ಅಡಚಣೆಗಳು ಪ್ರಮುಖ ಅಡ್ಡಿಯಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ರೈಲ್ವೆ ಇಲಾಖೆ ಸ್ಪಷ್ಟನೆ

ರೈಲುಗಳ ವೇಗಕ್ಕೆ  ಸಂಬಂಧಿಸಿ ದಕ್ಷಿಣ ಪಶ್ಚಿಮ ರೈಲ್ವೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರೈಲಿನ ವೇಗವು ವಿಭಾಗೀಯ ವೇಗ ಮಿತಿಗಳು, ಶಾಶ್ವತ ನಿರ್ಬಂಧಗಳು, ಮಾರ್ಗ ವಿನ್ಯಾಸ, ಏರುಪೇರುಗಳು, ನಿಲ್ದಾಣಗಳ ಸಂಖ್ಯೆ, ಪ್ಲಾಟ್‌ಫಾರ್ಮ್ ಲಭ್ಯತೆ ಹಾಗೂ ಟರ್ಮಿನಲ್ ಸೌಲಭ್ಯಗಳಂತಹ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

ರೈಲು ಸಂಖ್ಯೆ 11301 (CSMT–SBC) ಉದ್ಯಾನ್ ಎಕ್ಸ್‌ಪ್ರೆಸ್ 1,139 ಕಿಮೀ ಪ್ರಯಾಣವನ್ನು 32 ನಿಲ್ದಾಣಗಳೊಂದಿಗೆ 21 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ. ಸರಾಸರಿ ವೇಗ 52.1 ಕಿಮೀ/ಗಂಟೆಗೆ ಆಗಿದೆ. ವಿರುದ್ಧ ದಿಕ್ಕಿನಲ್ಲಿ 11302 (SBC–CSMT) ರೈಲು 31 ನಿಲ್ದಾಣಗಳೊಂದಿಗೆ 23 ಗಂಟೆ 35 ನಿಮಿಷ ತೆಗೆದುಕೊಳ್ಳುತ್ತದೆ ಮತ್ತು ಸರಾಸರಿ ವೇಗ 48.2 ಕಿಮೀ/ಗಂಟೆಗೆ ಆಗಿದೆ.

ಈ ರೈಲು ಆರಂಭವಾದ ಕಾಲದಲ್ಲಿ, ಆ ಕಾಲದ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಗಮನಿಸಿದರೆ ಅದರ ಪ್ರಯಾಣ ಅವಧಿ ಸಮಂಜಸವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ರೈಲು ತಂತ್ರಜ್ಞಾನದಲ್ಲಿ ಸಂಭವಿಸಿದ ಪ್ರಗತಿ, ಉತ್ತಮ ಹಳಿ ವ್ಯವಸ್ಥೆಗಳು ಮತ್ತು ವೇಗವಾದ ಹೊಸ ರೈಲುಗಳ ಪರಿಚಯದಿಂದ ಪ್ರಯಾಣಿಕರ ನಿರೀಕ್ಷೆಗಳು ಹೆಚ್ಚಾಗಿವೆ. ಪ್ರಯಾಣಿಕರು ಉದ್ಯಾನ್ ಎಕ್ಸ್‌ಪ್ರೆಸ್  ಕೂಡಾ ಇತರ ವೇಗದ ರೈಲುಗಳಂತೆ ಓಡುವುದನ್ನು ಎದುರು ನೋಡುತ್ತಿದ್ದಾರೆ

ನಿಲ್ದಾಣಗಳೇ ಪ್ರಮುಖ ಅಂಶ

“ಉದ್ಯಾನ್ ಎಕ್ಸ್‌ಪ್ರೆಸ್‌ನ ಪ್ರಯಾಣ ಸಮಯವನ್ನು ನಿರ್ಧರಿಸುವ ಪ್ರಮುಖ ಅಂಶವೇ ನಿಲ್ದಾಣಗಳ ಸಂಖ್ಯೆ. “ಈ ರೈಲು ಕೇವಲ ಎರಡು ನಗರಗಳನ್ನು ಮಾತ್ರವಲ್ಲ, ಕಲ್ಯಾಣ ಕರ್ನಾಟಕ ಮತ್ತು ಮುಂಬೈ- ಬೆಂಗಳೂರು ನಡುವಿನ ನೂರಾರು ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ಮಂತ್ರಾಲಯ ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮುಂತಾದ ಸ್ಥಳಗಳಿಗೆ ಉತ್ತಮ ಸಂಪರ್ಕ ಒದಗಿಸುತ್ತದೆ. ನಿಲ್ದಾಣಗಳನ್ನು ಕಡಿಮೆ ಮಾಡಿದರೆ ಸಾಮಾನ್ಯ ಜನರಿಗೆ ತೊಂದರೆ ಉಂಟಾಗುತ್ತದೆ” ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ಕಾಲಕ್ರಮೇಣ ಹೆಚ್ಚು ಪಟ್ಟಣಗಳು ಮತ್ತು ನಗರಗಳಿಗೆ ಸೇವೆ ನೀಡಲು ಹೆಚ್ಚುವರಿ ನಿಲ್ದಾಣಗಳನ್ನು ಸೇರಿಸಲಾಗಿದೆ. ಇದರಿಂದ ಪ್ರವೇಶ ಸೌಲಭ್ಯ ಹೆಚ್ಚಾದರೂ, ಒಟ್ಟು ಪ್ರಯಾಣ ಸಮಯ ಹೆಚ್ಚಾಗಿದೆ. ಇನ್ನೊಂದು ಮುಖ್ಯ ಕಾರಣವೆಂದರೆ ಹಳೆಯ ಮೂಲಸೌಕರ್ಯ. ಹಲವಾರು ಹಳಿ ಭಾಗಗಳಲ್ಲಿ ಸರಕು ಮತ್ತು ಪ್ರಯಾಣಿಕ ರೈಲುಗಳು ಒಂದೇ ಹಳಿಯನ್ನು ಬಳಸುವುದರಿಂದ ಟ್ರಾಫಿಕ್ ಹೆಚ್ಚಾಗಿ, ವೇಗವನ್ನು ಹೆಚ್ಚಿಸುವುದು ಕಷ್ಟವಾಗುತ್ತದೆ.

ಈ ಸ್ಥಿತಿಗೆ ಮಾರ್ಗದ ಮಧ್ಯದಲ್ಲಿರುವ ನಿಲ್ದಾಣಗಳ ಸಂಖ್ಯೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಾಲಕ್ರಮೇಣ ಹೆಚ್ಚು ಪಟ್ಟಣಗಳು ಮತ್ತು ನಗರಗಳಿಗೆ ಸೇವೆ ನೀಡಲು ಹೆಚ್ಚುವರಿ ನಿಲ್ದಾಣಗಳನ್ನು ಸೇರಿಸಲಾಗಿದೆ. ಇದರಿಂದ ಪ್ರವೇಶ ಸೌಲಭ್ಯ ಹೆಚ್ಚಾದರೂ, ಒಟ್ಟು ಪ್ರಯಾಣ ಸಮಯ ಹೆಚ್ಚಾಗಿದೆ. ಇನ್ನೊಂದು ಮುಖ್ಯ ಕಾರಣವೆಂದರೆ ಹಳೆಯ ಮೂಲಸೌಕರ್ಯ. ಹಲವಾರು ಹಳಿ ಭಾಗಗಳಲ್ಲಿ ಸರಕು ಮತ್ತು ಪ್ರಯಾಣಿಕ ರೈಲುಗಳು ಒಂದೇ ಹಳಿಯನ್ನು ಬಳಸುವುದರಿಂದ ಟ್ರಾಫಿಕ್ ಹೆಚ್ಚಾಗಿ, ವೇಗವನ್ನು ಹೆಚ್ಚಿಸುವುದು ಕಷ್ಟವಾಗುತ್ತದೆ.

ಪ್ರಯಾಣಿಕರ ಬೇಡಿಕೆ ಯಥಾಸ್ಥಿತಿ

ಪ್ರಯಾಣವು ದೀರ್ಘ ಸಮಯವನ್ನು ತೆಗೆದುಕೊಂಡರೂ ಉದ್ಯಾನ್ ಎಕ್ಸ್‌ಪ್ರೆಸ್‌ಗೆ ಬೇಡಿಕೆ ಏನೂ ಕಡಿಮೆಯಾಗಿಲ್ಲ. ಮುಂಬೈನವರಾದ ಅಮೃತ್ ಪ್ರಭು ಎಂಬ ಪ್ರಯಾಣಿಕರು, “ರಸ್ತೆ ಮೂಲಕ ಪ್ರಯಾಣಿಸಲು 18–19 ಗಂಟೆ ಹಿಡಿಯುತ್ತದೆ. ರೈಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಆದರೆ ನಾವು ಇನ್ನೂ ರೈಲನ್ನೇ ಇಷ್ಟಪಡುತ್ತೇವೆ,” ಎಂದು ಹೇಳುತ್ತಾರೆ.

ಉದ್ಯಾನ್ ಎಕ್ಸ್‌ಪ್ರೆಸ್‌ ಬೆಂಗಳೂರು ಮತ್ತು ಮುಂಬೈ ನಗರಗಳನ್ನು ಸಂಪರ್ಕಿಸುವ ಪ್ರಮುಖ ರೈಲುಗಳಲ್ಲಿ ಒಂದಾಗಿದೆ. ಹಲವು ದಶಕಗಳಿಂದ ಇದು ಸಾವಿರಾರು ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಮತ್ತು ನಂಬಲರ್ಹ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಈ ರೈಲು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ—ಅದರ ಸೇವೆಗಳಿಗಾಗಿ ಅಲ್ಲ, ಬದಲಿಗೆ ನಾಲ್ಕು ದಶಕಗಳಾದರೂ ಅದರ ಪ್ರಯಾಣ ಸಮಯದಲ್ಲಿ ಯಾವುದೇ ಮಹತ್ತರ ಬದಲಾವಣೆ ಆಗದಿರುವುದಕ್ಕಾಗಿ.

ಈ ರೈಲು ಪ್ರಾರಂಭಕ್ಕೂ ಮೊದಲು ಪ್ರಯಾಣಿಕರು ಸೋಲಾಪುರ ಅಥವಾ ಮಿರಜ್‌ನಲ್ಲಿ ರೈಲು ಬದಲಾಯಿಸ ಬೇಕಾಗುತ್ತಿತ್ತು. ಈಗ ಇದು ರಾಯಚೂರು, ಕಲಬುರಗಿ ಮುಂತಾದ ಕಲ್ಯಾಣ ಕರ್ನಾಟಕ ಭಾಗಗಳಿಗೆ ಪ್ರಮುಖ ಸಂಪರ್ಕವಾಗಿದೆ.ಉದ್ಯಮ ವೀಕ್ಷಕರ ಪ್ರಕಾರ, ನಿಧಾನಗತಿಯ ಕಾರಣದಿಂದ ಈ ರೈಲು ದೊಡ್ಡ ನಗರಗಳ ನಡುವಿನ ಪ್ರಯಾಣಿಕರಿಗಿಂತ ಮಧ್ಯಮ ನಗರಗಳ ಪ್ರಯಾಣಿಕರಿಗೆ ಹೆಚ್ಚು ಉಪಯುಕ್ತವಾಗಿದೆ.

ಇತರ ರೈಲುಗಳ ಹೋಲಿಕೆ

ಬೆಂಗಳೂರು–ಮುಂಬೈ ಮಾರ್ಗದಲ್ಲಿ ಇತರ ರೈಲುಗಳೂ ಓಡುತ್ತಿವೆ. 11014 ಲೋಕಮಾನ್ಯ ಎಕ್ಸ್‌ಪ್ರೆಸ್ ಸುಮಾರು 22 ಗಂಟೆ 20 ನಿಮಿಷಗಳಲ್ಲಿ ಮುಂಬೈ ತಲುಪುತ್ತದೆ. 16331 ತಿರುವನಂತಪುರಂ ಎಕ್ಸ್‌ಪ್ರೆಸ್ ಸುಮಾರು 19 ಗಂಟೆ 30 ನಿಮಿಷಗಳಲ್ಲಿ ಬೆಂಗಳೂರಿಗೆ ತಲುಪುವ ವೇಗವಾದ ರೈಲುಗಳಲ್ಲಿ ಒಂದಾಗಿದೆ.

ಸಾಮಾನ್ಯ ಬೋಗಿಗಳಲ್ಲಿ ಗಿಜಿಗುಟ್ಟು

ಇತ್ತೀಚೆಗೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ಸಾಮಾನ್ಯ ಬೋಗಿಗಳಲ್ಲಿ ಭಾರೀ ಗಿಜಿಗುಟ್ಟು ಕಂಡುಬಂದಿದೆ. ಟಿಕೆಟ್ ಹೊಂದಿದ್ದ ಹಲವಾರು ಪ್ರಯಾಣಿಕರು ಬೋಗಿಯೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಪ್ರಯಾಣಿಕ ಮುಕಾಳೆಪ್ಪ ಲಕ್ಕುಂಡಿ ತಮ್ಮ ಅನುಭವ ಹಂಚಿಕೊಂಡು, “₹150 ಟಿಕೆಟ್ ತೆಗೆದುಕೊಂಡಿದ್ದೆ, ಆದರೆ ಬೋಗಿಯೊಳಗೆ ಹೋಗಲು ಸಾಧ್ಯವಾಗಲಿಲ್ಲ. ಜನರು ಫುಟ್‌ಬೋರ್ಡ್ ಮೇಲೆ ಕುಳಿತಿದ್ದರು. ಕೊನೆಗೆ ಬೇರೆ ರೈಲು ಹಿಡಿಯಬೇಕಾಯಿತು,” ಎಂದು ಹೇಳಿದ್ದಾರೆ.

ಮತ್ತೊಬ್ಬ ಪ್ರಯಾಣಿಕರು, “ಕೆಲಸದ ವರ್ಗದವರಿಗೆ ರೈಲು ಮುಖ್ಯ ಸಾರಿಗೆ. ಆದರೆ ಇಂತಹ ಗಿಜಿಗುಟ್ಟು ಸಮಸ್ಯೆಯನ್ನು ರೈಲ್ವೆ ಇಲಾಖೆ ಗಮನಿಸಬೇಕು. ವೇಗದ ಹೊಸ ರೈಲು ಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ,ಉದ್ಯಾನ್ ಎಕ್ಸ್‌ಪ್ರೆಸ್ ತನ್ನ ಐತಿಹಾಸಿಕ ಮಹತ್ವವನ್ನು ಹೊಂದಿದ್ದರೂ ಅದರ ವೇಗ ಹೆಚ್ಚಿಸುವ ಕುರಿತು ಚರ್ಚೆ ಮತ್ತೆ ಗಂಭೀರವಾಗಿದೆ. ತಂತ್ರಜ್ಞಾನ, ಯೋಜನೆ ಹಾಗೂ ಆಡಳಿತದ ಸಮನ್ವಯದಿಂದ ಪ್ರಯಾಣದ ಸಮಯ ಕಡಿಮೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಪ್ರಯಾಣಿಕರ ಅಗತ್ಯ ಮತ್ತು ಭೌಗೋಳಿಕ ಅಡಚಣೆಗಳ ನಡುವೆ ಸಮತೋಲನ ಸಾಧಿಸುವುದು ರೈಲ್ವೆ ಇಲಾಖೆಗೆ ಬಹುದೊಡ್ಡ ಸವಾಲಾಗಿದೆ. ಈ ಸವಾಲನ್ನು ಮೀರುವ ಪ್ರಯತ್ನವನ್ನು ರೈಲ್ವೇ ಇಲಾಖೆ ತುರ್ತಾಗಿ ಮಾಡಬೇಕಾಗಿದೆ.

ಒಲಿವರ್ ಡಿʼಸೋಜಾ

ಎಕ್ಸಿಕ್ಯುಟಿವ್‌ ಸೆಕ್ರೆಟರಿ

ರೈಲುಯಾತ್ರಿ ಸಂಘ ಮುಂಬೈ

More articles

Latest article

Most read