ಸಂಸ್ಕೃತ ಮೂಲ ಭಾಷೆ, ವೇದ,ಯೋಗ, ಸನಾತನ ನಮ್ಮ ಮೂಲ ಧರ್ಮ: ಬಾಬಾ ರಾಮದೇವ್

Most read

ಸಂಸ್ಕೃತ ಮೂಲ ಭಾಷೆ, ವೇದ,ಯೋಗ, ಸನಾತನ ನಮ್ಮ ಮೂಲ ಧರ್ಮ. ಪ್ರಾಚೀನ ವಿದ್ಯೆಗಳು ಉಡುಪಿಯಲ್ಲಿ ಗುರು ಸ್ಥಾನದಲ್ಲಿತ್ತು. ಉಡುಪಿಯನ್ನು ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಪರಿಗಣಿಸಬಹುದು ಎಂದು ಬಾಬಾ ರಾಮದೇವ ಹೇಳಿದ್ದಾರೆ.

ಇಂದು ಉಡುಪಿಯಲ್ಲಿ ನಡೆಯುತ್ತಿರುವ 51ನೇ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸನಾತನ ಧರ್ಮ ಸಾಮ್ರಾಜ್ಯ ವಿಶ್ವದಲ್ಲೇ ಪ್ರಸರಿಸಬೇಕು ಇದು ನನ್ನ ಬಯಕೆ. ನನಗೆ 5 ಲಕ್ಷ ಕೋಟಿಯ ಸಾಮ್ರಾಜ್ಯ ಕಟ್ಟುವ ಆಸೆಯಿದೆ. ಎಲ್ಲವನ್ನೂ ಪಾರಮಾರ್ಥಿಕ ಸಾಧನೆಗಾಗಿ ಬಳಸುವ ಚಿಂತನೆಯಿದೆ. ಆಸ್ತಿಗಳೆಲ್ಲವೂ ಪುರುಷಾರ್ಥಗಳ ಸಾಧನೆಗೆ ವಿನಿಯೋಗವಾಗಲಿದೆ ಎಂದಿದ್ದಾರೆ.

ಸಂಸ್ಕೃತ ಮೂಲ ಭಾಷೆ, ವೇದ,ಯೋಗ, ಸನಾತನ ನಮ್ಮ ಮೂಲ ಧರ್ಮ. ಪ್ರಾಚೀನ ವಿದ್ಯೆಗಳು ಉಡುಪಿಯಲ್ಲಿ ಗುರು ಸ್ಥಾನದಲ್ಲಿತ್ತು.  ಧರ್ಮ, ಸಂಸ್ಕೃತಿ, ಆಚಾರದ ಪಾರಮಾರ್ಥಿಕ ದರ್ಶನ ನೀಡಿದ್ದಾರೆ. ಹಾಗೆ ನೋಡಿದರೆ ಉಡುಪಿಯನ್ನು ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಪರಿಗಣಿಸಬಹುದು ಎಂದಿದ್ದಾರೆ.  

ಆಚಾರ್ಯ ಮಧ್ವರು ಪಾರಮಾರ್ಥಿಕ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು ನೀಡಿದವರು. ಮುಂದಿನ ಶತಮಾನ ಸನಾತನಿಗಳದ್ದಾಗಿರಲಿದೆ. ಶತಮಾನ ಸಂಸ್ಕೃತ ಭಾಷೆಗೆ ಸೇರಲಿದೆ. ಅಕ್ಸ್‌ಫರ್ಡ್, ಹಾರ್ವರ್ಡ್ ವಿಶ್ವವಿದ್ಯಾಲಯಗಳ ಕಾಲ ಮುಗಿದುಹೋದ ಅಧ್ಯಾಯ, ಬರಲಿರುವ ಶತಮಾನ ಗುರುಕುಲದ ಕಾರಣಕ್ಕೆ ಹೆಸರಲಾಗಲಿದೆ ಎಂದರು.

More articles

Latest article