ಭಾರತೀಯ ದಂಪತಿಗಳಿಗೆ ಜನಿಸುವ ಮಕ್ಕಳ ಪೌರತ್ವಕ್ಕೆ ಕೊಕ್ಕೆ ಹಾಕಲು ಟ್ರಂಪ್ ಸಿದ್ದತೆ ?

Most read

ಬೆಂಗಳೂರು: ಭಾರತ ಮತ್ತು ಅಮೆರಿಕಾದಲ್ಲಿರುವ ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ಯಾವತ್ತೂ ಕಂಟಕ ಎನ್ನುವುದು ಈ ಹಿಂದೆ ಅವರು ಅಧ್ಯಕ್ಷರಾಗಿದ್ದಾಗಲೇ ಸಾಬೀತಾಗಿತ್ತು. ಇದೀಗ ಅವರು ಮತ್ತೆ ಅದೇ ನಿಟ್ಟಿನಲ್ಲಿ ಸಾಗಲು ಹೊರಟಿದ್ದಾರೆ. ಅಮೆರಿಕಾದ ಪೌರತ್ವ ಪಡೆಯದ ವಿದೇಶೀ ದಂಪತಿಗಳಿಗೆ ಜನಿಸುವ ಮಕ್ಕಳಿಗೆ ಲಭ್ಯವಾಗುವ ಸ್ವಾಭಾವಿಕ ಪೌರತ್ವವನ್ನು ರದ್ದುಗೊಳಿಲು ಚಿಂತನೆ ನಡೆಸಿದ್ದಾರೆ ಎಂದು ಅಮೆರಿಕಾ ಮತ್ತು ಇತರ ದೇಶಗಳ ಮಾಧ್ಯಮಗಳು ವರದಿ ಮಾಡಿವೆ.


ಒಂದು ವೇಳೆ ಈ ಕಾನೂನು ಜಾರಿಯಾದರೆ ಅಮೆರಿಕಾದಲ್ಲಿರುವ ಎಲ್ಲ ವಿದೇಶಿಯರು, ವಿಶೇಷವಾಗಿ ಭಾರತೀಯರು ತೊಂದರೆಗೆ ಸಿಲುಕುತ್ತಾರೆ. ಗ್ರೀನ್ ಕಾರ್ಡ್ ಸಮಸ್ಯೆಯಿಂದ ಭಾರತೀಯರು ಈಗಾಗಲೇ ತೊಂದರೆಗೆ ಸಿಲುಕಿದ್ದುಇದೀಗ ಮತ್ತಷ್ಟು ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಳ್ಳುವ ಎಲ್ಲ ಲಕ್ಷಣಗಳಿವೆ.


ಇತ್ತೀಚೆಗಷ್ಟೇ ಮುಗಿದ ಚುನಾವಣೆಯಲ್ಲಿ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಈ ಜಯ ಭಾರತೀಯ ದಂಪತಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಈ ಆದೇಶವನ್ನು ಜಾರಿಗೊಳಿಸಲಿದ್ದಾರೆ ಎಂದೂ ತಿಳಿದು ಬಂದಿದೆ.
ಹೊಸ ಆದೇಶದ ಪ್ರಕಾರ ಇಬ್ಬರು ಪೋಷಕರಲ್ಲಿ ಒಬ್ಬರು ಅಮೆರಿಕಾದ ಪೌರತ್ವವನ್ನು ಪಡೆದಿರಬೇಕು. ಅಂತಹ ದಂಪತಿಗಳಿಗೆ ಜನಿಸಿದ ಮಗು ಅಮೆರಿಕಾದ ಪೌರತ್ವವನ್ನು ಸ್ವಾಭಾವಿಕವಾಗಿ ಪಡೆಯುತ್ತದೆ ಎಂದು ನಿಯಮ ಹೇಳುತ್ತದೆ. ಇಲ್ಲವಾದಲ್ಲಿ ಅಮೆರಿಕಾದ ಪೌರತ್ವ ಸಿಗಲಾರದು.

ಭಾರತೀಯರಿಗೆ ಆತಂಕ ಏಕೆ?


ಅಮೆರಿಕಾದಲ್ಲಿ ಸುಮಾರು 48 ಮಿಲಿಯನ್ ಭಾರತೀಯರಿದ್ದಾರೆ. ಇವರಲ್ಲಿ ಶೇ..3.4ರಷ್ಟು ಅಂದರೆ 1.6 ಮಿಲಿಯನ್ ನಾಗರೀಕರು ಅಮೆರಿಕಾದಲ್ಲಿ ಜನಿಸಿದವರಾಗಿದ್ದಾರೆ. ಒಂದು ವೇಳೆ ಈ ಕಾನೂನು ಜಾರಿಯಾದರೆ ಭಾರತೀಯ ದಂಪತಿಗಳಲ್ಲಿ ಒಬ್ಬರೂ ಅಮೆರಿಕಾದ ಪೌರತ್ವವನ್ನು ಪಡೆಯದಿದ್ದಲ್ಲಿಅವರಿಗೆ ಜನಿಸುವ ಮಗುವಿಗೆ ಅಮೆರಿಕಾದ ಪೌರತ್ವ ಲಭ್ಯವಾಗುವುದಿಲ್ಲ. ಅದೆಷ್ಟೋ ಭಾರತೀಯರು ದಶಕಗಳ ಹಿಂದಿನಿಂದಲೂ H-1B ವೀಸಾದಡಿಯಲ್ಲಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಅಧಾರಿತ ಗ್ರೀನ್ ಕಾರ್ಡ್ ನೀಡಲು ಮಿತಿ ಹೇರಲಾಗಿದೆ. ಪ್ರತಿ ವರ್ಷ ಉದ್ಯೋಗಕ್ಕಾಗಿ ಆಗಮಿಸುವ ಭಾರತೀಯರಿಗೆ 65 ಸಾವಿರ H-1B ವೀಸಾ ನೀಡಲಾಗುತ್ತದೆ. ಉನ್ನತ ಶಿಕ್ಷಣ ಪಡೆದಿದ್ದರೆ ಹೆಚ್ಚುವರಿಯಾಗಿ 20 ಸಾವಿರ H-1B ವೀಸಾ ನೀಡಲಾಗುತ್ತದೆ.

More articles

Latest article