Thursday, July 25, 2024

ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮೂವರು ಕಾರ್ಮಿಕರ ದಾರುಣ ಸಾವು

Most read

ಬಳ್ಳಾರಿ: ಇಲ್ಲಿನ ಜಿಂದಾಲ್ ಕಾರ್ಖಾನೆಯಲ್ಲಿ ನಡೆದ ಅವಘಡವೊಂದರಲ್ಲಿ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಮೂರೂ ಕಾರ್ಮಿಕರು ಪೈಪ್ ಲೈನ್ ಪರಿಶೀಲನೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಭುವನಹಳ್ಳಿಯ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ್, ಚೆನ್ನೈ ಮೂಲದ ಕಾರ್ಮಿಕ ಮಹಾದೇವನ್ ಮೃತಪಟ್ಟ ದುರ್ದೈವಿಗಳು.

ಪೈಪ್ ಲೈನ್ ಪರಿಶೀಲನೆಗೆಂದು ತೆರಳಿದ್ದ ಮೂವರು ನೀರಿನ ರಭಸಕ್ಕೆ‌ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ತೋರಣಗಲ್ಲು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

More articles

Latest article