ಜ್ಯುವೆಲರಿ ಅಂಗಡಿಯಲ್ಲಿ ಕಳವು; ಬಿಕಾಂ ಪದವೀಧರನ ಬಂಧನ

Most read

ಬೆಂಗಳೂರು: ಚಿನ್ನಾಭರಣ ಅಂಗಡಿಯೊಂದರಲ್ಲಿ ಆಭರಣ ಕಳವು ಮಾಡಿ ಮಾರಾಟ ಮಾಡಿದ್ದ ಬಿಕಾಂ ಪದವೀಧರನೊಬ್ಬನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಲಿಖಿತ್ ಬಂಧಿತ ಆರೋಪಿ. ಈತನಿಂದ 9 ಲಕ್ಷ ಮೌಲ್ಯದ 126 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಸೂರ್ಯನಗರದ ಜ್ಯುವೆಲರಿ ಅಂಗಡಿಯೊಂದರಲ್ಲಿ ಲಿಖಿತ್ ಚಿನ್ನಾಭರಣ ಕಳವು ಮಾಡಿ ಅದರಲ್ಲಿ 34 ಗ್ರಾಂ ಆಭರಣವನ್ನು ದೊಡ್ಡಬಸ್ತಿಯಲ್ಲಿರುವ ಜ್ಯುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ.


ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಉತ್ತರಹಳ್ಳಿ ಸರ್ಕಲ್ ಬಳಿ ಜ್ಯುವೆಲರಿ ಅಂಗಡಿಯೊಂದರ ಮುಂಭಾಗದಲ್ಲಿ ಈತ ಅನುಮಾನಾಸ್ಪದವಾಗಿ ಬ್ಯಾಗ್ ಹಿಡಿದುಕೊಂಡು ಸಂಚರಿಸುತ್ತಿದ್ದ. ಈತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬ್ಯಾಗ್‌ ನಲ್ಲಿ ಚಿನ್ನಾಭರಣದ ಬಾಕ್ಸ್ ಪತ್ತೆಯಾಗಿತ್ತು. ಪೊಲೀಸರು ಬ್ಯಾಗ್‌ ನಲ್ಲಿದ್ದ 92 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದರು.


ಲಿಖಿತ್‌ ನನ್ನು ವಿಚಾರಣೆಗೊಳಪಡಿಸಿದಾಗ ಸೂರ್ಯನಗರ ಜ್ಯುವೆಲರಿ ಅಂಗಡಿಯೊಂದರಲ್ಲಿ ಕಳವು ಮಾಡಿದ್ದ ಮಾಹಿತಿ ನೀಡಿದ್ದ. ಮಾರಾಟ ಮಾಡಿದ್ದ 34 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 126 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಅದರ ಮೌಲ್ಯ 9 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

More articles

Latest article