ರಂಗ ಪ್ರಯೋಗ ವಿಮರ್ಶೆ | ಅಪಾರ ನಿರೀಕ್ಷೆಯನ್ನು ನಿರಾಸೆಗೊಳಿಸಿದ “ಅಂಬೇಡ್ಕರ್ ಕೊಲ್ಯಾಜ್”

ಚೆಂದದ ಕಣ್ಮನ ಸೆಳೆಯುವ ಬಿಡಿ ದೃಶ್ಯಗಳು, ಬಣ್ಣ ಬೆಳಕಿನಲಿ ಮಿಂಚುವ ಸಣ್ಣ ಸಣ್ಣ ಸನ್ನಿವೇಶಗಳು, ನೋಡುಗರಲ್ಲಿ ಸಂಚಲನ ಹುಟ್ಟಿಸುವ ಗುಂಪು ದೃಶ್ಯ ಸಂಯೋಜನೆಗಳು, ಪಾದರಸದ ಚಲನೆಗಳು, ಉತ್ತೇಜನಾತ್ಮಕ ಹಾಡು ಸಂಗೀತದಲೆಗಳು, ಪೇಂಟಿಂಗ್ ಮಾದರಿಯಲ್ಲಿ ಬಳಕೆಯಾದ ರಂಗಪರಿಕರಗಳು, ರಂಗದಂಗಳವೆಂಬ ಬೃಹತ್ ಕ್ಯಾನ್ವಾಸ್ ಮೇಲೆ ಚಿತ್ರಕಲಾವಿದ ಎರಚಿದಂತಹ ಭಿನ್ನ ಭಿನ್ನವಾದ ಬಣ್ಣದೋಕಳಿ ಚಿತ್ರ ಸಮೂಹಗಳು.. ಇವೆಲ್ಲವೂ ಸೇರಿದ್ದೇ ‘ಅಂಬೇಡ್ಕರ್ ಕೊಲ್ಯಾಜ್’ ಎಂಬ ವಿಶಿಷ್ಟ ವಿಚಿತ್ರ ವಿಕ್ಷಿಪ್ತ ರಂಗಪ್ರಯೋಗ.

ಮಾರ್ಚ್ 23 ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಈ ‘ಅಂಬೇಡ್ಕರ್ ಕೊಲ್ಯಾಜ’ನ್ನು ರಚಿಸಿದ್ದು ಬುಡ್ಡಿದೀಪದ ಕೋಟಗಾನಹಳ್ಳಿ ರಾಮಯ್ಯನವರು, ನಿರ್ದೇಶಿಸಿದ್ದು ಹೆಸರಾಂತ ರಂಗ ನಿರ್ದೇಶಕ  ಚಿದಂಬರರಾವ್ ಜಂಬೆಯವರು, ಅಭಿನಯಿಸಿದ್ದು ಮೈಸೂರಿನ ರಂಗಾಯಣದ ರೆಪರ್ಟರಿ ಕಲಾವಿದರು, ಇದೆಲ್ಲದರ ಮೇಲೆ ಈ ನಾಟಕ ವಿಶ್ವಮಾನ್ಯ ಅಂಬೇಡ್ಕರ್ ರವರ ಕುರಿತದ್ದಾಗಿದ್ದರಿಂದ ಅಪಾರವಾದ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು.

ಆದರೆ.. ಅಂಬೇಡ್ಕರ್ ರವರ ಭಾವಚಿತ್ರಕ್ಕಿಂತ ಅದಕ್ಕಳವಡಿಸಿದ ಚೌಕಟ್ಟಿಗೆ ಮಾಡಲಾದ ಬಣ್ಣಬಣ್ಣದ ಅಲಂಕಾರಗಳೇ ಅತಿಯಾದಂತೆ ಭಾಸವಾಗಿ ಆಶಯವನ್ನು ಅಲಂಕಾರವೇ ನುಂಗಿದಂತಾಗಿತ್ತು. ಇಡೀ ನಾಟಕದಲ್ಲಿ ಬಿಡಿ ಹೂವುಗಳನ್ನು ಚೆಂದವಾಗಿ ತೋರಿಸುವ ಭರದಲ್ಲಿ ಹೂವಿನ ಹಾರವನ್ನು ಕಟ್ಟಲು ಬಳಸುವ ದಾರವೇ ಮಾಯವಾದಂತಿತ್ತು. ಸೂತ್ರದ ದಾರವೇ ಇಲ್ಲದಿರುವ ಅಂದದ ಗಾಳಿಪಟ ಎಲ್ಲಿಂದ ಎಲ್ಲೆಲ್ಲಿಗೋ ಹಾರಿ ವಿಸ್ಮಯದ ಜೊತೆಗೆ ವಿಕ್ಷಿಪ್ತತೆಯನ್ನು ಹುಟ್ಟಿಸಿತು.

ಇದು ಹೆಸರಿಗೆ ತಕ್ಕ ಹಾಗೆ ಕೊಲ್ಯಾಜ್ ಪೇಂಟಿಂಗ್ ಮಾದರಿಯ ನಾಟಕವಾಗಿದೆ. ಕೊಲ್ಯಾಜ್ ಅಂದರೆ ಆಯ್ದ ಬೇರೆ ಬೇರೆ ಬಿಡಿ ಚಿತ್ರಗಳನ್ನು, ತರಾವರಿ ಬಣ್ಣಗಳನ್ನು ಒಂದು ಕ್ಯಾನ್ವಾಸ್ ಮೇಲೆ ಮೂಡಿಸಿ ಸಮಗ್ರವಾಗಿ ಕಣ್ಮನ ಸೆಳೆಯುವ ಚಿತ್ರವೊಂದನ್ನು ಚಿತ್ರಿಸುವ ಆರ್ಟ್ ಫಾರಂ. ಅಂದರೆ ಕಲಾತ್ಮಕವಾಗಿ ತೇಪೆ ಹಚ್ಚುವ, ಬಣ್ಣದ ಬಟ್ಟೆಗಳ ತುಂಡುಗಳನ್ನು ಬಳಸಿ ಕೌದಿ ಹೊಲೆಯುವ ಕೆಲಸ. ಅಂಬೇಡ್ಕರ್ ನೆಪದಲ್ಲಿ ಬಣ್ಣದ ತುಂಡು ದೃಶ್ಯಗಳ ಕೌದಿ ಕಲೆಯನ್ನು ನಿರ್ದೇಶಕರು ಅಂದವಾಗಿ ಕಟ್ಟಿಕೊಟ್ಟಿದ್ದಾರೆ, ಆದರೆ ಅಂಬೇಡ್ಕರವರ ಬದುಕು ಆಶಯ, ಸಾಧನೆ ವೇದನೆಗಳು ಇಲ್ಲಿ ಬರೀ ನೆಪಗಳಾಗಿವೆ, ಕೆಲವೇ ದೃಶ್ಯಕ್ಕೆ ಸೀಮಿತವಾಗಿವೆ. ಬಾಬಾಸಾಹೇಬರಿಗೆ ಸಂಬಂಧವೇ ಇಲ್ಲದ ಹಲವಾರು ದೃಶ್ಯಗಳನ್ನು ಅಸಂಬದ್ದವಾಗಿ ಜೋಡಿಸಲಾಗಿದೆ.

ಕೊಲ್ಯಾಜ್ ಪೇಂಟಿಂಗ್ ಮಾದರಿಗಳಲ್ಲಿ ಯಾವುದೇ ಚಿತ್ರಗಳನ್ನು ಅಂಟಿಸಿರಲಿ, ಯಾವುದೇ ಬಣ್ಣಗಳನ್ನು ಬಳಸಿರಲಿ, ಸಮಗ್ರವಾಗಿ ನೋಡಿದಾಗ ಇಡೀ ಪೇಂಟಿಂಗ್ ಒಂದು ಥೀಮ್ ನ್ನು ಕಟ್ಟಿಕೊಡುತ್ತದೆ ಹಾಗೂ ಬಿಡಿ ಚಿತ್ರಗಳೂ ಸಹ ಒಂದಕ್ಕೊಂದು ಯಾವುದೊ ರೂಪದಲ್ಲಿ ಸಂಬಂಧವನ್ನು ಹೊಂದಿರುತ್ತವೆ. ಆದರೆ ರಾಮಯ್ಯನವರು ಹಾಕಿಕೊಟ್ಟ ನೀಲಿನಕ್ಷೆಯಲಿ, ಜಂಬೆಯವರು ಬಿಡಿಸಿದ ಕೊಲ್ಯಾಜ್ ನಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದ ಚೆಂದದ ಬಿಡಿ ಚಿತ್ರಗಳು  ಸೃಷ್ಟಿಯಾಗಿವೆ. ಇಲ್ಲಿ ದೇಶ ಭಾಷೆ ಕಾಲಗಳನ್ನೆಲ್ಲಾ ಮಿಶ್ರಣಗೊಳಿಸಿ ಯಾವ ತರ್ಕದ ಚೌಕಟ್ಟಿಗೂ ದಕ್ಕದಂತೆ ನಾಟಕ ನಿರ್ಮಿಸಲಾಗಿದೆ. ಅಂಬೇಡ್ಕರ್ ರವರನ್ನು ಈಗಿನ ಆಧುನಿಕ ಕಾಲಕ್ಕೆ ಬಲವಂತವಾಗಿ ಎಳೆದು ತರಲಾಗಿದೆ.

ಹೌದು. ಅಲ್ಲಿ ಅಂಬೇಡ್ಕರ್ ಕಾಲದಲ್ಲಿ ಹಣ್ಣು ಮಾರುವವರೊಂದಿಗೆ ಗೂಗಲ್ ಪೇ ವ್ಯವಹಾರವಿದೆ, ತಳವರ್ಗದವರ ಬಾಯಲ್ಲಿ ಯಥೇಚ್ಚವಾಗಿ ಇಂಗ್ಲೀಷ್ ಪದಗಳ ಬಳಕೆ ಇದೆ, ಓಎಲ್ ಎಕ್ಸ್ ನಲ್ಲಿ ಗುಜರಿ ಸೈಕಲ್ ಮಾರಬಹುದಾಗಿದೆ, ಜಟಕಾ ಬಂಡಿಯವನ ಬಳಿ ವಿಸಿಟಿಂಗ್ ಕಾರ್ಡ್ ಇದೆ, ಅಯ್ಯಪ್ಪ ಮಾಲಾಧಾರಿಯ ಪ್ರಲಾಪವಿದೆ.. ಗಲ್ಲಿ ಬಾಯ್ಸ್ ಮತ್ತು ಗರ್ಲ್ಸ್ ಗಳ ಬೆಲ್ಲಿ ಡಾನ್ಸ್ ಗಳಿವೆ,  ಒಟ್ಟಾರೆಯಾಗಿ ಅಂಬೇಡ್ಕರ್ ರವರನ್ನು ಹಾಗೂ ಅವರ ಕಾಲಘಟ್ಟವನ್ನು ಆಧುನೀಕರಣ ಮಾಡುವ ಪ್ರಯತ್ನ ನಾಟಕದಾದ್ಯಂತ ವ್ಯಾಪಕವಾಗಿದೆ. ಇದಕ್ಕೇ ಕೊಲ್ಯಾಜ್ ಎನ್ನುವ ನಿರೀಕ್ಷಣಾ ಜಾಮೀನನ್ನು ನಾಟಕದ ಶೀರ್ಷಿಕೆಯಲ್ಲಿ ಅಳವಡಿಸಲಾಗಿದೆ.

ಪಾದಕಮ್ಮ ಅಂತೆ, ಹಣ್ಣು ಮಾರುವವಳಂತೆ, ಪಂಚರವಾಲಿಯಂತೆ, ಅಂಬೇಡ್ಕರ್ ರವರ ಕೋಣೆಗೆ ಎಗ್ಗಿಲ್ಲದೇ ಆಕೆ ನುಗ್ಗಬಹುದಂತೆ, ತೊ ಥೊ ಥೋ ಇದೆಲ್ಲಾ ಯಾಕೆ? ಏನು? ಎಂಬುದು ರಾಮಯ್ಯನವರು ಹಾಗೂ ಜಂಬೆಯವರನ್ನು ಹೊರತು ಪಡಿಸಿ ಯಾರಿಗೂ ಏನೂ ಅರ್ಥವಾಗುವುದು ಕಷ್ಟ ಕಷ್ಟ.

ಇವೆಲ್ಲಾ ಅರ್ಥ ಅನರ್ಥಗಳ ನಡುವೆ ಅಂಬೇಡ್ಕರ್ ಬದುಕಿನ ಘಟನೆಗಳ ಸ್ಯಾಂಪಲ್ ತುಣುಕುಗಳನ್ನು ಅಲ್ಲಲ್ಲಿ  ತೋರಿಸಲಾಗಿದೆ. ಬಾಲಕ ಭೀಮ ಶಾಲೆಯಲ್ಲಿ ಓದಿದ್ದು, ಶಿಕ್ಷಕರಿಗೆ ಬೈದಿದ್ದು, ಚಿಕ್ಕ ಹುಡುಗ ಗ್ರಂಥಾಲಯದಲ್ಲಿ ಬೃಹತ್ ಗ್ರಂಥಗಳನ್ನು ಇಂಗ್ಲಿಷ್‌ ನಲ್ಲಿ ಅಧ್ಯಯನ ಮಾಡಿದ್ದು, ಮೇಲ್ವರ್ಗದ ಗ್ರಂಥಪಾಲಕಿ ಭೀಮನ ಜೊತೆ ಊಟ ಹಂಚಿಕೊಂಡಿದ್ದು, ನಂತರ ಅಂಬೇಡ್ಕರ್ ಆಗಿ ಪಾರ್ಸಿ ವಸತಿಗೃಹದಲ್ಲಿ ಹೆಸರು ಬದಲಾಯಿಸಿ ಕೋಣೆ ಪಡೆದು ಹೊರಗೆ ಹಾಕಿಸಿಕೊಂಡಿದ್ದು, ಮತ್ತೆ ಸ್ಟ್ಯಾಂಡ್ ಇಲ್ಲದ ಸೈಕಲ್ಲನ್ನು ಪಂಚರ್ ಅಂಗಡಿಗೆ ತಂದು ಅಲ್ಲಿ ಹಾಲು ಮಾರುವ ಬಸವಾನುಯಾಯಿಯನ್ನು ಭೇಟಿಯಾಗಿದ್ದು, ಅಲ್ಲಿಂದ ಮಹಾಡ್ ಕೆರೆಯ ನೀರಿಗಾಗಿ ಹೋರಾಟ ಮಾಡಿದ್ದು, ಎಂದೋ ಸತ್ತ ಪತ್ನಿ ರಮಾಳನ್ನು ಮತ್ತೆ ಭೇಟಿಯಾಗಿದ್ದು, ಸಂಬಂಧವೇ ಇಲ್ಲದ ಕಾರ್ಲ್‌ಮಾರ್ಕ್ಸ್ ನನ್ನು ಎಳೆದು ತಂದು ಅವರ ದುರಂತ ಬದುಕಿನ ಸನ್ನಿವೇಶ ಸೃಷ್ಟಿಸಿದ್ದು, ಇದ್ದಕ್ಕಿದ್ದಂತೆ ಚಾಟಿ ಏಟು ಹೊಡೆದುಕೊಳ್ಳುತ್ತಾ ಬರುವ ವ್ಯಕ್ತಿ ಪಾರ್ಲಿಮೆಂಟು ಸಂಸತ್ತು ನತದೃಷ್ಟ ದೇಶವೆಂದು ಕೂಗುತ್ತಾ ಆವೇಶಕ್ಕೊಳಗಾಗಿದ್ದು, ನಡುವೆ ಚೇಂಜ್ ಗೆ ಇರಲಿ ಎಂದು ಅರೆಬರೆ ಬಟ್ಟೆ ತೊಟ್ಟ ಯುವಪಡೆ ಗಲ್ಲಿ ಡಾನ್ಸ್ ಮಾಡಿದ್ದು… ಅಂಬೇಡ್ಕರ್ ಕಾಲಾನಂತರ ಅವರ ಪತ್ನಿ ಸವಿತಾರವರ ಮನೆಯ ಸಾಮಾನುಗಳನ್ನು ಬೀದಿಗೆಸೆದಿದ್ದು.. ಚೆ ಛೇ.. ಒಂದಾ ಎರಡಾ, ಒಂದಕ್ಕೊಂದು ಸಂಬಂಧವೇ ಇಲ್ಲದ ದೃಶ್ಯಗಳು.  ದೇಶ ಕಾಲದ ಹಂಗು ಮೀರಿ ಎತ್ತಲಿಂದೆತ್ತಲೋ ದಿಕ್ಕು ತಪ್ಪಿ ಸಂಚರಿಸುವ ಸನ್ನಿವೇಶಗಳು. ಇವೆಲ್ಲವೂ ಪ್ರೇಕ್ಷಕರ ಮೆದುಳಿಗೇ ಕೈಹಾಕುವ ಪ್ರಯತ್ನಗಳು.

ಇದು ಖಂಡಿತಾ ಅಂಬೇಡ್ಕರರವರ ಬದುಕು ಸಾಧನೆ ಕೇಂದ್ರಿತ ಕೊಲ್ಯಾಜಂತೂ ಅಲ್ಲವೇ ಅಲ್ಲಾ, ರಾಮಯ್ಯನವರು ಸೃಜಿಸಿದ ವಿಸ್ಮೃತಿಗಳು. ಜಂಬೆಯವರು ಸೃಷ್ಟಿಸಿದ ವಿಕ್ಷಿಪ್ತತೆಗಳು.

ಈ ನಾಟಕದಲ್ಲಿ ಅಂಬೇಡ್ಕರ್ ಪಾತ್ರಧಾರಿ ಹೇಳುತ್ತಾರೆ “ನಾನು ಕಷ್ಟಪಟ್ಟು ಹೋರಾಟದಿಂದ ಎಳೆದು ತಂದ ರಥವನ್ನು ಮುಂದಕ್ಕೆಳೆಯದಿದ್ದರೂ ಪರವಾಗಿಲ್ಲ ಹಿಂದಕ್ಕೆ ಹೋಗಲು ಬಿಡಬೇಡಿ” ಎಂದು. ಈ ನಾಟಕವನ್ನು ಅಂಬೇಡ್ಕರ್ ನೋಡಿದ್ದರೆ ” ದಯವಿಟ್ಟು ಗೋಜಲು ಗೊಂದಲ ಮಾಡಬೇಡಿ” ಎಂದು ಹೇಳುತ್ತಿದ್ದರೇನೋ.  “ನನ್ನ ಅಕ್ಷರಗಳನ್ನು ನಿರ್ಲಕ್ಷಿಸಿ ಬರೀ ಭಾವಚಿತ್ರಕ್ಕೆ ಬೆಲೆ ಕೊಡುವ ಅವಿವೇಕಿಗಳು” ಎಂದು ಅಂಬೇಡ್ಕರ್ ಪಾತ್ರ ಹೇಳುತ್ತದೆ. ಆದರೆ ಈ ನಾಟಕ ಅಕ್ಷರಕ್ಕೂ ಹಾಗೂ ಭಾವಚಿತ್ರಕ್ಕೂ ಸೂಕ್ತ ಬೆಲೆ ಕೊಡದೇ ವಿಕ್ಷಿಪ್ತತೆಗೆ ಒತ್ತು ಕೊಟ್ಟಿರುವುದು ವಿಪರ್ಯಾಸ.

ಅಂಬೇಡ್ಕರ್ ಎಂದರೆ ಎಲ್ಲರ ಮನದಲ್ಲಿ ಒಂದು ಇಮೇಜ್ ಸೃಷ್ಟಿಯಾಗಿದೆ. ಆದರೆ ಈ ನಾಟಕದಲ್ಲಿ  ಅಂಬೇಡ್ಕರ್ ಕೋಪಿಷ್ಟ ಎನ್ನುವ ಇಮೇಜನ್ನು ಹುಟ್ಟುಹಾಕಲಾಗಿದೆ. ಬಾಲಕನಾದಾಗಲೂ ಹೀಗೆಯೇ ಸಿಡಿಮಿಡಿ, ವಿದೇಶಕ್ಕೆ ಹೋಗಿ ವಿದ್ಯೆಕಲಿತು ಬಂದಮೇಲೂ ಸಿಡಿಯುವ ಸಿಟ್ಟು, ಅದರ ಮೇಲೆ ಅವರ ಬಾಯಿಂದ ಬ್ಲಡಿ ಬಗ್ಗರ್, ಶಟಪ್ ಎನ್ನುವ ಇಂಗ್ಲೀಷ್ ಬೈಗಳುಗಳ ಸರಮಾಲೆ. ಹೋಗಲಿ ಅಂಬೇಡ್ಕರ್ ಪಾತ್ರಧಾರಿ ಕೆಲವು ಸಲ ಉತ್ತರ ಕನ್ನಡ ಭಾಷೆ ಬಳಸಿದರೆ, ಹಲವಾರು ಬಾರಿ ಬೆಂಗಳೂರು ಭಾಷೆ ಬಳಸುವುದೂ ಸಹ ಭಾಷಾ ಕೊಲ್ಯಾಜ್ ಇರಬಹುದಾ ಎನ್ನುವ ಅನುಮಾನ ಕಾಡುವಂತಿದೆ.

ಈ ಕೊಲ್ಯಾಜ್ ನ್ನು ಹೀಗೆಯೇ ವಿಸ್ತರಿಸುತ್ತಾ ಹೋಗಿ ಹತ್ತು ಗಂಟೆಗಳ ನಾಟಕ ಮಾಡುವುದಾಗಿ ಈ ನಾಟಕ ಪ್ರದರ್ಶನದ ನಂತರ ಮಾತಾಡಿದ ರಾಮಯ್ಯನವರು ಹೇಳಿದರು. ಈಗ ಪ್ರದರ್ಶನಗೊಂಡ ಎರಡು ಗಂಟೆಗಳ ಕೊಲ್ಯಾಜನ್ನೇ ಅರಗಿಸಿಕೊಳ್ಳುವುದು ಅಸಾಧ್ಯವಾಗಿರುವಾಗ ಇನ್ನು ಹತ್ತು ಗಂಟೆ ನಾಟಕ! ಊಹಿಸಿಕೊಂಡರೇ ಆತಂಕವಾಗುತ್ತದೆ. ಸೃಜನಶೀಲ ನಾಟಕಕಾರರಾಗಿದ್ದ ರಾಮಯ್ಯನವರ ಬತ್ತಳಕೆಯಲ್ಲಿದ್ದ ಬಾಣಗಳು ಖಾಲಿ ಆದಂತಿವೆ. ಮತಾಂತರ ಕುರಿತು ಕೋಳಿ ಆಲೂಗಡ್ಡೆ ರೂಪಕದ ವಾಟ್ಸಾಪ್‌ ನಲ್ಲಿ ಹರದಾಡಿದ ಹಳಸಲು ಜೋಕನ್ನು ಈ ನಾಟಕದಲ್ಲಿ ಬಳಸಿದ್ದು ಇದಕ್ಕೊಂದು ಸಾಕ್ಷಿಯಾಗಿದೆ.  ಉತ್ತಮ ನಾಟಕ ಸೃಷ್ಟಿಸುತ್ತಿದ್ದ ಚಿದಂಬರರಾವ್ ಜಂಬೆಯವರ ಕ್ರಿಯಾಶೀಲತೆ ಬಿಡಿಯಾದ ದೃಶ್ಯಸೃಷ್ಟಿಗೆ ಮಾತ್ರ ಸೀಮಿತವಾದಂತಿದೆ. ಇಂತಹ ವಿಕ್ಷಿಪ್ತ ನಾಟಕವನ್ನು ಬೇರೆ ಯಾವುದಾದರೂ ರಂಗತಂಡ ಮಾಡಿದ್ದರೆ ‘ಏನೋ ಒಂದು ಪ್ರಯತ್ನ ಮಾಡಿದ್ದಾರೆ ಬಿಡು’ ಎನ್ನಬಹುದಾಗಿತ್ತು. ಆದರೆ ಜನರ ತೆರಿಗೆ ಹಣದಿಂದ ನಡೆಯುತ್ತಿರುವ ‘ರಂಗಾಯಣ’ದಂತಹ ಸರಕಾರಿ ಕೃಪಾ ಪೋಷಿತ ಸಂಸ್ಥೆಯೊಂದು ಜನಸಾಮಾನ್ಯರಿಗೂ ಅರ್ಥವಾಗುವಂತಹ ನಾಟಕವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಯಾರಿಗೂ ಅರ್ಥವಾಗದ ಕೊಲ್ಯಾಜ್ ನ್ನು ಅಂಬೇಡ್ಕರ್ ಹೆಸರಲ್ಲಿ ಪ್ರೇಕ್ಷಕರ ಮೇಲೆ ಹೇರಬಾರದಿತ್ತು. ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ‘ ಅಂಬೇಡ್ಕರ್ ಕೊಲ್ಯಾಜ್’ ಕೊಲ್ಯಾಪ್ಸ್ ಆಗಿ ಹೀಗೆ ನಿರಾಸೆಯನ್ನುಂಟು ಮಾಡಬಾರದಾಗಿತ್ತು. ನಾಟಕದಲ್ಲಿ ಲೋಪ ನ್ಯೂನತೆಗಳಾಗಿದ್ದರೆ ಮುಂದಿನ ಪ್ರದರ್ಶನಗಳಲ್ಲಿ ರಿಪೇರಿ ಮಾಡಬಹುದು, ಆದರೆ ಇಡೀ ನಾಟಕವೇ ಗೋಜಲಾಗಿರುವಾಗ ರಿಪೇರಿಯೂ ಅಸಾಧ್ಯ, ಬದಲಾವಣೆಯಂತೂ ಕಷ್ಟ ಸಾಧ್ಯ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ರಂಗ ಪ್ರಯೋಗ ವಿಮರ್ಶೆ | ತಳವರ್ಗದವರ ತಲ್ಲಣಗಳನ್ನು ಅನಾವರಣಗೊಳಿಸುವ ‘ಈ ಕೆಳಗಿನವರು’

More articles

Latest article

Most read