ಬೆಂಗಳೂರು: ಕುಮಾರಸ್ವಾಮಿ ಅವರ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಐಶ್ವರ್ಯ ಮಹದೇವ,ರಾಜ್ಯದ ಹೆಣ್ಣುಮಗಳಾಗಿ ನಾನು ಮಾತನಾಡ್ತೇನೆ. ಹೆಚ್ಡಿಕೆ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಯಾವ ಉದ್ದೇಶದಿಂದ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಣ್ಣುಮಕ್ಕಳ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ. ಕುಮಾರಸ್ವಾಮಿಯವರದ್ದು ಇದು ಮೊದಲಲ್ಲ. ಹಿಂದೆ ಎಲ್ಲಿ ಮಲಗಿದ್ದೆ ಅಂತ ಮಹಿಳೆಗೆ ಅವಮಾನ ಮಾಡಿದ್ದರು. ಸುಮಲತಾ ಅವರ ಬಗ್ಗೆ ಏನು ಮಾತನಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿ ಒಬ್ಬ ಶಾಸಕರು. ಈಗ ನಮ್ಮ ಮಂಡ್ಯದಲ್ಲೂ ಸ್ಪರ್ಧಿಸಿದ್ದಾರೆ. ಅವರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ ಎಂದು ಅವರು ನುಡಿದಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಸಂತಸದಲ್ಲಿದ್ದಾರೆ. ಬಸ್ ನಲ್ಲಿ ಫ್ರೀಯಾಗಿ ಹೂಮಾರಿ ಬರ್ತಿದ್ದಾರೆ. ಆ ಮಹಿಳೆಯರು ದಾರಿ ತಪ್ಪಿದ್ದಾರಾ ಕುಮಾರಸ್ವಾಮಿ ಅವರೇ. 2 ಸಾವಿರದಿಂದ ಮಹಿಳೆಯರು ಸ್ವಾವಲಂಬಿಯಾಗ್ತಿದ್ದಾರೆ. ಗ್ಯಾರೆಂಟಿಗಳು ಸಬಲೀಕರಣಕ್ಕೆ ದಾರಿಯಾಗಿದೆ ಎಂದರು.
ನಿರ್ಮಲಾ ಸೀತಾರಾಮನ್ ಹಿಂದೆ ಗೌಡರ ಕುಟುಂಬಕ್ಕೆ 1500 ಕೋಟಿ ಆಸ್ತಿ ಇದೆ ಎಂದು ಹೇಳಿದ್ದರು. ಕೆಎಂಎಫ್ ರೇವಣ್ಣನವರ ಜಾಗೀರು ಅಂದಿದ್ದರು. ಇವತ್ತು ಜೆಡಿಎಸ್ ಪಕ್ಷ ಎಲ್ಲಿದೆ? ಜೆಡಿಎಸ್ ಡಿಎನ್ ಎ ಬಿಜೆಪಿ ಡಿಎನ್ ಎ ಆಗಿದೆ. ನಾವು ಪಕ್ಷಾತೀತವಾಗಿ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಕೊಟ್ಟಿದ್ದೇವೆ. ಇದನ್ನು ತಡೆದುಕೊಳ್ಳಲು ಎರಡೂ ಪಕ್ಷಗಳಿಗೆ ಆಗುತ್ತಿಲ್ಲ ಎಂದು ಅವರು ನುಡಿದರು.
ರಾಷ್ಟ್ರೀಯ ಮಹಿಳಾ ಆಯೋಗ ಇದೆ. ಅವರು ಯಾವಗ ಯಾಕ್ಟೀವ್ ಆಗ್ತಾರೆ ಅಂದ್ರೆ ವಿಪಕ್ಷದವರ ಕಡೆ ಏನಾದ್ರು ಆದ್ರೆ ಅವಾಗ ಅವರು ಎದ್ದೇಳುತ್ತಾರೆ. ಆಡಳಿತಾರೂಢ ಪಕ್ಷದ ಕಡೆ ಆದಾಗ ಮೌನವಾಗುತ್ತಾರೆ. ಕುಮಾರಸ್ವಾಮಿ ಅವರ ಸುದ್ದಿ ಗೋಷ್ಠಿಯಲ್ಲಿ ಮಹಿಳೆಯರು ಕುಳಿತಿದ್ದರು. ಅವರು ಕುಮಾರಸ್ವಾಮಿ ಅವರ ಹೇಳಿ ಮಾತಿಗೆ ತಲೆ ಅಲ್ಲಾಡಿಸುತ್ತಿದ್ದರು. ಸಮರ್ಥನೆ ಮಾಡಿಕೊಂಡೇ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಐಶ್ವರ್ಯ ಮಹಾದೇವ ವಾಗ್ದಾಳಿ ನಡೆಸಿದ್ದಾರೆ.