ಭಾರತದ ಮೇಲೆ ಮಧ್ಯಪ್ರಾಚ್ಯ ಯುದ್ಧದ ದುಷ್ಪರಿಣಾಮಗಳು

ಮಧ್ಯಪ್ರಾಚ್ಯದ ಯುದ್ಧ, ಹಳಿ ತಪ್ಪಿದ ಭಾರತದ ವಿದೇಶಾಂಗ ನೀತಿ, ಅಮೇರಿಕಕ್ಕೆ ಕೇಂದ್ರ ಸರಕಾರದ ಶರಣಾಗತಿ, ರೂಪಾಯಿ ಬೆಲೆ ಕುಸಿತ, ತೈಲ ಸರಬರಾಜಿನಲ್ಲಿ ವ್ಯತ್ಯಯಗಳು ಭಾರತದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ತೀವ್ರತರ ಪರಿಣಾಮಗಳನ್ನು ಬೀರುತ್ತಿದ್ದು, ರಷ್ಯಾ -ಉಕ್ರೇನ್ ಯುದ್ಧದಂತೆ ಇರಾನ್-ಇಸ್ರೇಲ್ ಯುದ್ಧವೂ ದೀರ್ಘಕಾಲದವರೆಗೆ ಮುಂದುವರೆದರೆ ಭಾರತದ ಪರಿಸ್ಥಿತಿ ಗಂಭೀರವಾಗಲಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ  ವಿಶ್ಲೇಷಕರು.

ಮಧ್ಯಪ್ರಾಚ್ಯದಲ್ಲಿ ಯುದ್ಧ ತಾರಕಕ್ಕೇರಿದೆ. ಮಾರ್ಚ್ 28 ರಿಂದ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ದೇಶಗಳು ವಿನಾಶಕಾರಿ ಯುದ್ಧ ಸಾರಿವೆ. ಇರಾನ್ ಕೂಡಾ ಈ ಆಕ್ರಮಣಕೋರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿದಾಳಿ ನಡೆಸುತ್ತಿದೆ. ಯುದ್ಧದ ತೀವ್ರತೆ ದುಬೈ ಕುವೈತ್ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ದೇಶಗಳಲ್ಲೂ ಆತಂಕ ಸೃಷ್ಟಿಸಿದೆ. ಈ ದೇಶಗಳಲ್ಲಿರುವ ಅಮೇರಿಕದ ಮಿಲಿಟರಿ ಬೇಸ್ ಗಳು ಹಾಗೂ ಅಮೇರಿಕದ ದೂತವಾಸಗಳ ಮೇಲೆ ಇರಾನ್ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡುತ್ತಿದೆ. ತೈಲೋತ್ಪನ್ನ ಸ್ಥಾವರಗಳು ಧಗಧಗಿಸುತ್ತಿವೆ.

ಡ್ರೋನ್ ಗಳು ಮಿಸೈಲ್‌ ಗಳು ಹಗಲಿರುಳೆನ್ನದೇ ಬೆಂಕಿ ಕಾರುತ್ತಿವೆ. ಪ್ಯಾಲೆಸ್ತೈನಿನ ಗಾಝಾ ಮೇಲೆ ಅಮಾನವೀಯ ಆಕ್ರಮಣ ಮಾಡಿದ್ದ ಇಸ್ರೇಲ್ ಆ ಪ್ರದೇಶವನ್ನು ಹೇಗೆ ಸರ್ವನಾಶ ಮಾಡಿತ್ತೋ, ಈಗ ಇರಾನ್ ಆ ರೀತಿಯ ನಾಶವನ್ನು ಇಸ್ರೇಲಿನಲ್ಲಿ ಮಾಡುತ್ತಿದೆ.

ಅಲ್ಲೆಲ್ಲೊ ದೂರದಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರುವಾಗಿದ್ದರಿಂದ ನಮ್ಮ ದೇಶ ಸುರಕ್ಷಿತವಾಗಿದೆ ಎಂದುಕೊಳ್ಳುವ ಹಾಗಿಲ್ಲ. ವಿನಾಶಕಾರಿ ಯುದ್ಧದ ದುಷ್ಪರಿಣಾಮಗಳು ಭಾರತದಾದ್ಯಂತ ಈಗಾಗಲೇ ಆರಂಭವಾಗಿವೆ. ಇದಕ್ಕೆ ಮೂಲ ಕಾರಣ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿದೇಶಾಂಗ ನೀತಿ.

ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತ ಅಲಿಪ್ತ ನೀತಿಯನ್ನು ಆಚರಿಸಿಕೊಂಡು ಬಂದಿತ್ತು. ಯಾವುದೇ ದೇಶದ ಪರ ಅಥವಾ ವಿರೋಧಿ ಧೋರಣೆಯನ್ನು ತೋರದೇ ಇರುವ ವಿದೇಶಾಂಗ ನೀತಿ ನಮ್ಮ ದೇಶದ್ದಾಗಿತ್ತು. ಆದರೆ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಈ ನೀತಿಗೆ ತಿಲಾಂಜಲಿ ಕೊಟ್ಟಾಗಿದೆ. ತಪ್ಪಾದ ವಿದೇಶಾಂಗ ನೀತಿಗಳಿಂದಾಗಿ ಈಗಾಗಲೇ ಭಾರತದ ನೆರೆಹೊರೆಯ ದೇಶಗಳೊಂದಿಗೆ ಶತ್ರುತ್ವ ಬೆಳೆಸಿಕೊಳ್ಳಲಾಗಿದೆ. ಅದೇ ರೀತಿ ಅಮೇರಿಕದ ಅಡಿಯಾಳಂತೆ ವರ್ತಿಸಲಾಗುತ್ತಿದೆ.

ಇರಾನ್ ದೇಶ ಮೊದಲಿನಿಂದಲೂ ಭಾರತದ ಮಿತ್ರದೇಶ. ಭಾರತಕ್ಕೆ ಹೆಚ್ಚು ತೈಲವನ್ನು ರಫ್ತು ಮಾಡುತ್ತಿದ್ದ ರಾಷ್ಟ್ರ. ಬೇರ ದೇಶಗಳು ಡಾಲರ್ ನಲ್ಲಿ ವ್ಯವಹರಿಸಿದರೆ ಇರಾನ್ ರೂಪಾಯಿ ಲೆಕ್ಕದಲ್ಲಿ ವ್ಯಾಪಾರ ಆರಂಭಿಸಿತ್ತು ಹಾಗೂ ಭಾರತದಿಂದ ಅಕ್ಕಿ ಪಡೆದು ಅದಕ್ಕೆ ಬದಲಾಗಿ ತೈಲವನ್ನು ವಿನಿಮಯ ಮಾಡಿಕೊಳ್ಳುತ್ತಿತ್ತು. ಆದರೆ ಇರಾನ್ ಜೊತೆಗಿನ ಪಾರಂಪರಿಕ ಸ್ನೇಹ ಮತ್ತು ಆ ದೇಶದಿಂದಾದ ಅನುಕೂಲಗಳನ್ನು ಮರೆತು ಇರಾನ್ ದೇಶದ ಬದ್ಧ ವೈರಿಯಾದ ಇಸ್ರೇಲ್ ಜೊತೆ ಸ್ನೇಹ ಸಂಬಂಧವನ್ನು ಮೋದಿ ಸರಕಾರ ಬೆಳೆಸಿತು. ಯುದ್ಧ ಆರಂಭಕ್ಕೆ ಕೆಲವೇ ದಿನಗಳ ಮುನ್ನ ಸ್ವತಃ ಮೋದಿಯವರೇ ಇಸ್ರೇಲಿಗೆ ಹೋಗಿ ಗಾಜಾ ನರಮೇಧದ ನಾಯಕ ಬೆಂಜಮಿನ್ ನೆತನ್ಯಾಹುವನ್ನು ಬಲವಂತವಾಗಿ ಅಪ್ಪಿಕೊಂಡು “ಭಾರತ ಮಾತೃ ದೇಶವಾದರೆ ಇಸ್ರೇಲ್ ಪಿತೃದೇಶ’ ಎಂದು ಘೋಷಿಸಿದರು. ಅಮೇರಿಕದ ಅಧ್ಯಕ್ಷ ಟ್ರಂಪ್ ಗೆ ಶರಣಾಗತಿಯಾದ ಮೋದಿ ತಮ್ಮ ಗುಲಾಮಗಿರಿಯನ್ನು ವ್ಯಕ್ತಪಡಿಸಿದರು. ಹೀಗಾಗಿ ಇರಾನ್ ಹಾಗೂ ಭಾರತದ ಸಂಬಂಧ ಹಳಸಿತು.

ಈಗ ಇರಾನ್ ಇಸ್ರೇಲ್ ಯುದ್ಧ ಜೋರಾಗಿದೆ. ಜಗತ್ತಿಗೆ ಶೇಕಡಾ 20 ರಷ್ಟು ತೈಲ ಸಾಗಾಟದ ಮಾರ್ಗವಾದ ಹಾರ್ಮುಜ್‌  ಜಲಸಂಧಿ ಯನ್ನು ರಷ್ಯಾ ಹಾಗೂ ಚೈನಾ ಹೊರತುಪಡಿಸಿ ಎಲ್ಲಾ ದೇಶಗಳಿಗೂ ಬಂದ್ ಮಾಡಿದೆ. ಇದರಿಂದಾಗಿ ಭಾರತದ ತೈಲ ಹಾಗೂ ಇತರೇ ಸಾಮಗ್ರಿಗಳ ಸಾಗಾಣಿಕೆ ಹಡಗುಗಳು ಬರದಂತಾಗಿವೆ. ಭಾರತದ ಆರ್ಥಿಕತೆಗೆ ತೀವ್ರ ಧಕ್ಕೆಯಾಗಿದೆ.

ಭಾರತದ ಮೇಲೆ ಯುದ್ಧದ ಕಾರ್ಮೋಡ

* ಭಾರತವು 90 % ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಗಲ್ಫ್ ಪ್ರದೇಶಗಳಿಂದಲೇ 55% ತೈಲ ಪಡೆಯಲಾಗುತ್ತದೆ. ಈಗ  ಹಾರ್ಮುಜ್‌  ಜಲಸಂಧಿ ಮುಚ್ಚಿದ್ದರಿಂದ 50% ತೈಲ ಆಮದು ನಿಂತು ಹೋಗಿದೆ. ಯುದ್ಧದಿಂದಾಗಿ ಕ್ರೂಡ್ ಆಯಿಲ್ ಬೆಲೆ ಪ್ರತಿ ಬ್ಯಾರಲ್ಲಿಗೆ 80 ಡಾಲರ್‌ ನಿಂದ 114 ಡಾಲರಿಗೆ ಏರಿಕೆಯಾಗಿದೆ. ಯುದ್ಧದಿಂದಾಗಿ ಗಲ್ಫ್ ದೇಶಗಳ ತೈಲೋತ್ಪನ್ನ ಸ್ಥಾವರಗಳು ಹೊತ್ತಿ ಉರಿಯುತ್ತಿರುವುದರಿಂದ ತೈಲ ಬೆಲೆ ಇನ್ನೂ ಹೆಚ್ಚುವ ಸಾಧ್ಯತೆಗಳಿಗೆ. ಹೀಗಾಗಿ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಲಿದೆ. ಈಗಾಗಲೇ ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಿಯಾಗಿದೆ. 50% ವಾಣಿಜ್ಯ ಬಳಕೆಯ ಸಿಲಿಂಡರ್ ಸರಬರಾಜು ನಿಂತು ಹೊಟೇಲ್‌ ಗಳು ಮುಚ್ಚುವ ದುಸ್ಥಿತಿ ಎದುರಾಗಿದೆ.

* ಗಲ್ಫ್ ದೇಶಗಳಲ್ಲಿ 1 ಕೋಟಿಗೂ ಹೆಚ್ಚು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅವರು ಅಲ್ಲಿ ದುಡಿದು ತಮ್ಮ ಕುಟುಂಬಕ್ಕೆ ಕಳುಹಿಸುವ ಹಣ 135 ಬಿಲಿಯನ್ ಡಾಲರ್ ಗಳಷ್ಟಿದೆ. ಯುದ್ಧ ದೀರ್ಘಕಾಲ ನಡೆದರೆ ಗಲ್ಫ್ ಆರ್ಥಿಕತೆ ಕುಸಿದು, ಭಾರತೀಯರ ಉದ್ಯೋಗಕ್ಕೆ ಸಂಚಕಾರ ಬಂದು ಭಾರತದ ಆರ್ಥಿಕತೆ ದುರ್ಬಲವಾಗುತ್ತದೆ. ಜೊತೆಗೆ ರೂಪಾಯಿ ಮೌಲ್ಯ ಕುಸಿಯುತ್ತದೆ.

* ಭಾರತದಿಂದ ಮಧ್ಯಪ್ರಾಚ್ಯಕ್ಕೆ 17% ಸರಕುಗಳು ರಫ್ತಾಗುತ್ತವೆ. ಹಾರ್ಮುಜ್ ಹಾಗೂ ಕೆಂಪು ಸಮುದ್ರ ಮಾರ್ಗಗಳ ಅಡಚಣೆಯಿಂದಾಗಿ ರಫ್ತು ವ್ಯವಹಾರ ಸ್ಥಗಿತಗೊಂಡಿದೆ. ಗಲ್ಫ್ ದೇಶಗಳಿಗೆ 75% ಬಾಸ್ಮತಿ ಅಕ್ಕಿ ರಫ್ತಾಗುತ್ತದೆ. ಈಗ ನಾಲ್ಕು ಲಕ್ಷ ಟನ್ ಅಕ್ಕಿ ಬಂದರುಗಳಲ್ಲಿ ಸ್ಥಗಿತಗೊಂಡು ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಬಹು ದೊಡ್ಡ ನಷ್ಟವಾಗಿದೆ.

* ತೈಲ ಬೆಲೆ ಏರಿಕೆಯಿಂದಾಗಿ ಭಾರತದ ಶೇರು ಮಾರುಕಟ್ಟೆ ಅಪಾರವಾದ ಕುಸಿತ ಕಂಡಿದೆ. ಒಂದೇ ವಾರದಲ್ಲಿ ಹೂಡಿಕೆದಾರರಿಗೆ 40 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ಎಲ್ಪಿಜಿ ಹಾಗೂ ರಸಗೊಬ್ಬರಗಳ ಬೆಲೆ ಹೆಚ್ಚಾಗಿ ರಾಜ್ಯ ಸರಕಾರಗಳ ಬಜೆಟ್ ಮೇಲೆ ಭಾರ ಬೀಳುತ್ತದೆ.

* ಕಾರ್ಪೋರೇಟ್ ಲಾಭ ಕುಸಿತ ಹಾಗೂ ಬೆಲೆಗಳ ಏರಿಕೆಯಿಂದಾಗಿ ಮಧ್ಯಮ, ಕೆಳಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ.

* ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಭಾರತದ ಜಿಡಿಪಿ ಕುಸಿಯುತ್ತದೆ. ವಿದೇಶಿ ವಿನಿಮಯ ಅಧೋಗತಿಯಾಗುತ್ತದೆ. ಜನಸಾಮಾನ್ಯರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಹೀಗೆ.. ಮಧ್ಯಪ್ರಾಚ್ಯದ ಯುದ್ಧ, ಹಳಿ ತಪ್ಪಿದ ಭಾರತದ ವಿದೇಶಾಂಗ ನೀತಿ, ಅಮೇರಿಕಕ್ಕೆ ಕೇಂದ್ರ ಸರಕಾರದ ಶರಣಾಗತಿ, ರೂಪಾಯಿ ಬೆಲೆ ಕುಸಿತ, ತೈಲ ಸರಬರಾಜಿನಲ್ಲಿ ವ್ಯತ್ಯಯಗಳು ಭಾರತದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ತೀವ್ರತರ ಪರಿಣಾಮಗಳನ್ನು ಬೀರುತ್ತಿದ್ದು, ರಷ್ಯಾ -ಉಕ್ರೇನ್ ಯುದ್ಧದಂತೆ ಇರಾನ್-ಇಸ್ರೇಲ್ ಯುದ್ಧವೂ ದೀರ್ಘಕಾಲದವರೆಗೆ ಮುಂದುವರೆದರೆ ಭಾರತದ ಪರಿಸ್ಥಿತಿ ಗಂಭೀರವಾಗಲಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಇರಾನ್‌ ಅನ್ನು ಸೋಲಿಸುವುದು ಸಾಧ್ಯವೇ?

More articles

Latest article

Most read