ತಮಿಳು ನಟ ವಿಜಯ್ ಗುರುವಾರ ಚೆನ್ನೈನಲ್ಲಿ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಯ ಧ್ವಜ ಮತ್ತು ಚಿಹ್ನೆಯನ್ನು ಅನಾವರಣಗೊಳಿಸಿದರು ಮತ್ತು ತಮ್ಮ ಪಕ್ಷವು ಸಾಮಾಜಿಕ ನ್ಯಾಯದ ಮಾರ್ಗವನ್ನು ಅನುಸರಿಸುತ್ತದೆ ಎಂದು ಹೇಳಿದರು.
ಧ್ವಜವು ಮೇಲಿನ ಮತ್ತು ಕೆಳಭಾಗದಲ್ಲಿ ಕೆಂಗಂದು ಬಣ್ಣದ್ದಾಗಿದ್ದು, ಮಧ್ಯದಲ್ಲಿ ಹಳದಿ ಎರಡು ಬಣ್ಣವಿದೆ ಹಾಗು ಅದರಲ್ಲಿ ಎರಡು ಆನೆಗಳು ಮತ್ತು ವಾಗೈ ಹೂ ಚಿತ್ರವಿದ್ದು ಇದು ವಿಜಯವನ್ನು ಸಂಕೇತಿಸುತ್ತದೆ. ಟಿವಿಕೆ ಪಕ್ಷದ ಸಾಮಾಜಿಕ ಮಾಧ್ಯಮದ ತನ್ನ ಧ್ವಜ ಕುರಿತು ಟ್ವೀಟ್ ಮಾಡಿದೆ.
ಧ್ವಜಾರೋಹಣ ಸಮಾರಂಭದಲ್ಲಿ ಮಾತನಾಡಿದ ವಿಜಯ್, ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಟಿವಿಕೆ ಧ್ವಜದ ಮಹತ್ವವನ್ನು ಬಹಿರಂಗಪಡಿಸಲಾಗುವುದು, ಸಮ್ಮೇಳನ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದರು.
ಫೆಬ್ರವರಿ 2 ರಂದು ವಿಜಯ್ TVK ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು, ಪಾರದರ್ಶಕ, ಜಾತಿ-ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ “ರಾಜಕೀಯ ಬದಲಾವಣೆ” ಯ ತರುವುದಾಗಿ ತಿಳಿಸಿದರು. 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.