ಕಲಬುರಗಿಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟ: 8ಕ್ಕೂ ಅಧಿಕ ಹೋಟೆಲ್​ ಕಾರ್ಮಿಕರಿಗೆ ಗಾಯ

Most read

 ಅಡುಗೆ ಸಿಲಿಂಡರ್ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ 8ಕ್ಕೂ ಅಧಿಕ ಹೋಟೆಲ್​ ಕಾರ್ಮಿಕರು ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ಸಪ್ತಗಿರಿ ಹೋಟೆಲ್​ನಲ್ಲಿ ಇಂದು (ಶುಕ್ರವಾರ) ನಡೆದಿದೆ.

ಅಡುಗೆ ಸಿಬ್ಬಂದಿ ಉಪಹಾರ ತಯಾರಿಸುವುದರಲ್ಲಿ ನಿರತರಾಗಿದ್ದ ಸಮಯದಲ್ಲಿ ಬೆಳಗ್ಗೆ 6.30ಕ್ಕೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿರುವ ಪರಿಣಾಮ, ಸ್ಥಳದಲ್ಲಿದ್ದ 8ಕ್ಕೂ ಅಧಿಕ ಕಾರ್ಮಿಕರಿಗೆ ಸುಟ್ಟುಗಾಯಗಳಾಗಿವೆ.

ಗಂಭೀರವಾಗಿ ಗಾಯಗೊಂಡ ಇಬ್ಬರು ಕಾರ್ಮಿಕರನ್ನು ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್) ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದ್ದು, ಉಳಿದವರು ಆಸ್ಪತ್ರೆಯ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಫೋಟದ ರಭಸಕ್ಕೆ ಬಹು ಮಹಡಿ ಕಟ್ಟಡದ ಹಲವೆಡೆ ಹಾನಿಯಾಗಿದೆ. ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಸಿಲಿಂಡರ್ ಸ್ಪೋಟದ ಬಾರಿ ಸದ್ದು ಕೇಳಿದ್ದರಿಂದ ಜನ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಬೆಳಗ್ಗೆ 6.15ಕ್ಕೆ ಕಾರ್ಮಿಕರು ಉಪಹಾರ ತಯಾರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಫೋಟ ಸಂಭವಿಸಿದ ಕೂಡಲೇ ಅಡುಗೆ ಕೋಣೆಗೆ ಬೆಂಕಿ ತಗುಲಿತು, ಆದರೆ ಸ್ಫೋಟ ಸಂಭವಿಸಿದಾಗ ಗ್ರಾಹಕರು ಇಲ್ಲದ ಕಾರಣ ದೊಡ್ಡ ದುರಂತವನ್ನು ತಪ್ಪಿದೆ.

ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ ನಗರ ಪೊಲೀಸ್ ಉಪ ಆಯುಕ್ತೆ ಕನ್ನಿಕಾ ಸಿಕ್ರಿವಾಲ್ ಅವರು, ”ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಎಂಬಂತೆ ಕಂಡುಬಂದಿದೆ. ಸಂಪೂರ್ಣ ತನಿಖೆ ನಂತರ ಸತ್ಯಾಂಶ ತಿಳಿದುಬರಲಿದೆ” ಎಂದು ಅವರು ತಿಳಿಸಿದ್ದಾರೆ.

More articles

Latest article