ಟಿಬಿ ಡ್ಯಾಂ ಗೇಟ್‌ ದುರಸ್ತಿ ಕಾರ್ಯ; ಮೂರನೇ ಎಲಿಮೆಂಟ್ ಅಳವಡಿಕೆ ಯಶಸ್ವಿ

Most read

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ತುಂಡಾಗಿ ನೀರುಪಾಲಾಗಿತ್ತು. ಕೂಡಲೇ ಎಚ್ಚೆತ್ತ ಸರ್ಕಾರ, ಹೊಸ ಸ್ಟಾಪ್ಲ್ಯಾಗ್ ಗೇಟ್ ಅಳವಡಿಸಲು ಸೂಚಿಸಿತ್ತು. ನಿನ್ನೆ ರಾತ್ರಿ ಯಶಸ್ವಿಯಾಗಿ ಮೊದಲನೇ ಹಂತದ ಗೇಟ್‌ ಅಳವಡಿಕೆ ಯಶಸ್ವಿಯಾಗಿದ್ದ ನಂತರ ಇಂದು ಎರಡು ಮತ್ತು ಮೂರನೇ ಹಂತದ ಎಲಿಮೆಂಟ್‌ ಅಳವಡಿಕೆಗೆ ಮುಂದಾಗಿದ್ದು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿ, ಮೂರನೇ ಎಲಿಮೆಂಟ್ನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಈ ಮೂಲಕ ಹರಿಯುವ ನೀರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ರಸ್ಟಗೇಟ್ 19 ಕೊಚ್ಚಿಕೊಂಡು ಹೋಗಿದ್ದರಿಂದ ಕಳೆದ ಆಗಸ್ಟ್ 10 ರಿಂದ ನಿರಂತರವಾಗಿ ಡ್ಯಾಂ ನೀರು ಹರಿದು ವ್ಯರ್ಥವಾಗಿ ಹೋಗುತ್ತಿತ್ತು.. ಇದೀಗ ಮೂರನೇ ಎಲಿಮೆಂಟ್ ಕೂಡ ಅಳವಡಿಕೆ ಮಾಡಲಾಗಿದ್ದು, ನೀರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

More articles

Latest article