ತಮಿಳುನಾಡಿಗೆ ಜುಲೈ 12 ರಿಂದ 31ರವರೆಗೆ ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣಾ ಸಮಿತಿ ( CWRC) ಸೂಚನೆ ನೀಡಿದೆ.
ಗುರುವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಶಿಫಾರಸು ಮಾಡಲಾಗಿದೆ. ಜುಲೈ 12 ರಿಂದ 31ರವರೆಗೆ ಪ್ರತಿನಿತ್ಯ 1 ಟಿಎಂಸಿ ನೀರನ್ನು ಹರಿಸವಂತೆ ಶಿಫಾರಸು ಮಾಡಲಾಗಿದೆ.
ಕರ್ನಾಟಕದ ಜಲಾಶಯಗಳಲ್ಲಿ ಒಳಹರಿವು 41 ಟಿಎಂಸಿ ಮಾತ್ರ ಇದೆ. ಜೂ.1 ರಿಂದ ಇಲ್ಲಿಯವರಗೆ ಕೇವಲ 41 ಟಿಎಂಸಿ ನೀರು ಸೇರಿದೆ. ಈ ಮಾನ್ಸೂನ್ ಸರಿಯಾಗಿ ಮಳೆಯಾಗಿಲ್ಲ. ರಾಜ್ಯದಲ್ಲಿ ಶೇ 28% ರಷ್ಟು ಮಳೆ ಕೊರತೆಯಾಗಿದೆ. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಒಟ್ಟು 58 ಟಿಎಂಸಿ ಮಾತ್ರ ನೀರಿದೆ. ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಸಂಗ್ರಹವಿದೆ. ಸಧ್ಯಕ್ಕೆ ನೀರು ಬಿಡುವ ಬಗ್ಗೆ ಯಾವುದೇ ಶಿಫಾರಸು ಮಾಡಬೇಡಿ. ಜು.25 ರ ವರೆಗೆ ಮಳೆಯ ಪ್ರಮಾಣ ನೋಡಿಕೊಂಡು ಶಿಫಾರಸು ಮಾಡಿ. ಈಗಲೇ ನೀರು ಬಿಡುವಂತೆ ಶಿಫಾರಸು ಮಾಡಬೇಡಿ ಎಂದು CWRC ಸಭೆಯಲ್ಲಿ ಕರ್ನಾಟಕ ಮನವಿ ಮಾಡಿದ ಮೇಲೆಯೂ ಈ ನಿರ್ಧಾರವನ್ನು ತೆಗೆದುಕೊಂಡಿದೆ.