ದ್ವೀಪಗಳ ರಾಷ್ಟ್ರ ವೆಸ್ಟ್ ಇಂಡೀಸ್ ಗೆ ಅತ್ಯಂತ ಅಪಾಯಕಾರಿ ಬೆರಿಲ್ ಚಂಡಮಾರುತ ಅಪ್ಪಳಿಸುತ್ತಿದೆ. ಹೀಗಾಗಿ ಟಿ20 ಚಾಂಪಿಯನ್ಸ್ ಭಾರತದ ಸದಸ್ಯರು ತವರಿಗೆ ಮರಳೋದು ತಡವಾಗಲಿದೆ ಎಂದು ಮಾಹಿತಿ ತಿಳಿದುಬಂದಿದೆ.
ಶನಿವಾರ ನಡೆದ ವಿಶ್ವ ಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ರೋಹಿತ್ ಶರ್ಮಾ ಪಡೆ ಐಸಿಸಿ ಟಿ20 ವಿಶ್ವಕಪ್ 2024 ಅನ್ನು ಮುಡಿಗೇರಿಸಿಕೊಂಡಿತು. ಈ ಸಂಭ್ರಮವನ್ನು ಭಾರತಕ್ಕೆ ಮರಳಿ ಆಚರಿಸಬೇಕಾಗಿತ್ತು. ಆದರೆ, ಅಪಾಯಕಾರಿ ಚಂಡ ಮಾರುತ ಅವರು ತಡವಾಗಿ ಭಾರತ ಸೇರಬೇಕಾಗಿದೆ.
ಭಾನುವಾರ ಬೆಳಿಗ್ಗೆ ಗ್ರೇಡ್ 3 ಚಂಡಮಾರುತವಾಗಿ ಪರಿವರ್ತನೆಗೊಂಡಿಡು ಗಂಟೆಗೆ 120 ಕಿಲೋಮೀಟರ್ನಷ್ಟಿತ್ತು. ಚಂಡಮಾರುತವು ಕ್ಷಣದಿಂದ ಕ್ಷಣಕ್ಕೆ ಬಲಗೊಳ್ಳುತ್ತಿದ್ದು ಈ ಹೊತ್ತಿನಲ್ಲಿ ಯಾವುದೇ ವಿದೇಶಿ ಆಟಗಾರರು, ಪ್ರಯಾಣಿಕರು ವಿಮಾನಯಾನ ಮಾಡಲು ಸಾಧ್ಯವಿಲ್ಲ. ಹಾಗಾಗು ಭಾರತದ ತಂಡದ ಎಲ್ಲರೂ ಸದ್ಯಕ್ಕೆ ಬಾರ್ಬಡೋಸ್ನಲ್ಲಿ ಸಿಲುಕಿದ್ದಾರೆ.
ಸೋಮವಾರ ಚಂಡಮಾರುತ ಹೆಚ್ಚಾಗಿ ಭೂಕುಸಿತ ಕೂಡ ಉಂಟಾಗಬಹುದು ಎಂದು ಬಾರ್ಬಡೋಸ್ ನ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಮತ್ತು ಎಲ್ಲಾ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ. ವಿಮಾನಯಾನ ಆರಂಭವಾದ ಬಳಿಕ ಭಾರತ ತವರಿಗೆ ವಾಪಸ್ ಮರಳಲಿದೆ.