ಬುಲೆಟ್‌ನಲ್ಲಿ ಪರಾರಿ.. ಕೆಲವೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಬಿದ್ದ ಸ್ವಾತಂತ್ರ ಭಾರದ್ವಾಜ್

ಹೊಸದಿಲ್ಲಿ ಸೆ.5: ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆ ಸಂಜಯ್‌ ಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮತ್ತು ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಸ್ವಾತಂತ್ರ ಭಾರದ್ವಾಜ್‌ ಕೊನೆಗೂ ದೆಹಲಿ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ಬಂಧನದಿಂದ ತಪ್ಪಿಸಿಕೊಳ್ಳಲು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬುಲೆಟ್‌ ಬೈಕ್‌ನಲ್ಲಿ ಪರಾರಿಯಾಗಿದ್ದ ಭಾರದ್ವಾಜ್‌ನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಬುಲಂದ್‌ಶಹರ್‌ನ ನೈಥ್ಲಾ ಗ್ರಾಮದಲ್ಲಿ ಭಾರದ್ವಾಜ್ ಇರುವ ಬಗ್ಗೆ ಮಾಹಿತಿ ಪಡೆದಿದ್ದ ದೆಹಲಿ ಪೊಲೀಸರ ತಂಡ ಆತನನ್ನು ಬಂಧಿಸಲು ತೆರಳಿತ್ತು. ಆದರೆ ಪೊಲೀಸರು ಸ್ಥಳಕ್ಕೆ ತಲುಪುವ ಮುನ್ನವೇ ಆತ ಬುಲೆಟ್‌ ಮೋಟಾರ್‌ಸೈಕಲ್‌ನಲ್ಲಿ ಖುರ್ಜಾ ಕಡೆಗೆ ಪರಾರಿಯಾಗಿದ್ದ. ಗುರುತು ಪತ್ತೆಯಾಗದಂತೆ ಹೆಲ್ಮೆಟ್‌ ಧರಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ಪೊಲೀಸರು ಹಲವು ತಂಡಗಳನ್ನು ನಿಯೋಜಿಸಿ ಆತನಿಗಾಗಿ ಶೋಧ ನಡೆಸಿದ್ದರು.

ಪೊಲೀಸರ ಶೋಧ ಕಾರ್ಯಾಚರಣೆ ಮುಂದುವರಿದ ಕೆಲವೇ ಗಂಟೆಗಳಲ್ಲಿ ಭಾರದ್ವಾಜ್‌ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ವರದಿಗಳ ಪ್ರಕಾರ, ಬುಲಂದ್‌ಶಹರ್‌ ಪ್ರದೇಶದಲ್ಲೇ ಆತನನ್ನು ಪೊಲೀಸರು ಪತ್ತೆಹಚ್ಚಿ ದೆಹಲಿಗೆ ಕರೆತಂದಿದ್ದಾರೆ. ನಂತರ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ʻಇಂಡಿಯನ್‌ ಎಕ್ಸ್‌ ಪ್ರೆಸ್‌ʼ ವರದಿ ಮಾಡಿದೆ.
ಜಂತರ್‌ ಮಂತರ್‌ ಹಲ್ಲೆ ಪ್ರಕರಣ
ಜೂನ್‌ 23ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಾಕ್‌ರೋಚ್‌ ಜನತಾ ಪಾರ್ಟಿ (CJP) ವತಿಯಿಂದ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆದಿತ್ತು. ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಿಶು ಆಜಾದ್‌ ಅವರ ತಂದೆ ಸಂಜಯ್‌ ಕುಮಾರ್‌ ಅವರ ಮೇಲೆ ಹಲ್ಲೆ ನಡೆದಿತ್ತು ಎಂಬ ಆರೋಪವಿದೆ.
ಸಂಜಯ್‌ ಕುಮಾರ್‌ ಪ್ರತಿಭಟನೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ವಾಗ್ವಾದ ಆರಂಭವಾಗಿ, ಬಳಿಕ ಕೆಲವರು ಸೇರಿಕೊಂಡು ಹಲ್ಲೆ ನಡೆಸಿದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಅವರ ತಲೆಗೆ ಗಾಯವಾಗಿದ್ದು, ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿತ್ತು. ಪೊಲೀಸರು ಆರಂಭದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 115(2), 126(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪಾಡ್‌ಕಾಸ್ಟ್‌ ಹೇಳಿಕೆಯಿಂದ ಪ್ರಕರಣಕ್ಕೆ ತಿರುವು
ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರದ್ವಾಜ್‌ ಮಾತನಾಡಿದ್ದ ಎನ್ನಲಾದ ಪಾಡ್‌ಕಾಸ್ಟ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬಳಿಕ. ಅದರಲ್ಲಿ ಸಂಜಯ್‌ ಕುಮಾರ್‌ ಅವರ ತಲೆ ಒಡೆದಿರುವುದಾಗಿ ಹಾಗೂ ಅವರಿಗೆ ಹಲವು ಹೊಲಿಗೆ ಹಾಕಲಾಗಿದೆ ಎಂದು ಭಾರದ್ವಾಜ್‌ ಹೇಳಿಕೊಂಡಿದ್ದ.
ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವು ನಾಯಕರು ಕೂಡ ಪ್ರಕರಣದಲ್ಲಿ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರಶ್ನಿಸಿದ್ದರು. ಆದರೆ ದೆಹಲಿ ಪೊಲೀಸರು ರಾಜಕೀಯ ಒತ್ತಡ ಅಥವಾ ಹಸ್ತಕ್ಷೇಪದ ಆರೋಪವನ್ನು ನಿರಾಕರಿಸಿದ್ದರು.

ಪೊಲೀಸ್‌ ಠಾಣೆ ಎದುರು CJP ಪ್ರತಿಭಟನೆ
ಭಾರದ್ವಾಜ್‌ನ ಬಂಧನಕ್ಕೆ ಆಗ್ರಹಿಸಿ CJP ಮುಖಂಡರು ಶುಕ್ರವಾರ ದೆಹಲಿಯ ಪಾರ್ಲಿಮೆಂಟ್‌ ಸ್ಟ್ರೀಟ್‌ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು. CJP ಮುಖಂಡರಾದ ಸೌರವ್‌ ದಾಸ್‌, ಆಶುತೋಷ್‌ ರಾಂಕಾ ಸೇರಿದಂತೆ ಹಲವರು ಪೊಲೀಸರನ್ನು ಭೇಟಿಯಾಗಿ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ನಾಗಿನಾ ಸಂಸದ ಚಂದ್ರಶೇಖರ್‌ ಆಜಾದ್‌ ಕೂಡ ಪೊಲೀಸ್‌ ಅಧಿಕಾರಿಗಳನ್ನು ಭೇಟಿಯಾಗಿ ಕ್ರಮಕ್ಕೆ ಆಗ್ರಹಿಸಿದ್ದರು.

ಸುಮಾರು ಎರಡು ಗಂಟೆಗಳ ಚರ್ಚೆಯ ಬಳಿಕ ಪೊಲೀಸರು ಪ್ರಕರಣದಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನು ಸೇರಿಸುವುದಾಗಿ ಹಾಗೂ ವೈದ್ಯಕೀಯ ವರದಿಯ ಆಧಾರದ ಮೇಲೆ ಕೊಲೆ ಯತ್ನದ ಆರೋಪ ಸೇರ್ಪಡೆ ಕುರಿತು ಪರಿಶೀಲಿಸುವುದಾಗಿ ತಿಳಿಸಿದ್ದರು. ಅಲ್ಲದೆ, ಭಾರದ್ವಾಜ್‌ನನ್ನು 72 ಗಂಟೆಗಳೊಳಗೆ ಬಂಧಿಸುವುದಾಗಿ ಪೊಲೀಸರ ಭರವಸೆ ನೀಡಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

More articles

Latest article

Most read