ಶಾಸಕರ ಅಮಾನತು ಸರಿಯಾದ ಕ್ರಮ: ಗೃಹಸಚಿವ ಪರಮೇಶ್ವರ

ಗೋಕರ್ಣ: ವಿಧಾನಸಭೆಯಲ್ಲಿ ಏನು ನಡೆಯಬೇಕು, ಏನು ಮಾತಾಡಬೇಕು ಎಂದು ನಿರ್ಧರಿಸುವುದು ಸಭಾಧ್ಯಕ್ಷರ ಕರ್ತವ್ಯ. ಸದನದ ಘನತೆ, ಗೌರವ, ಮರ್ಯಾದೆ ಕಾಪಾಡುವುದು ಸಭೆಯ ಅಧ್ಯಕ್ಷರ ಕೆಲಸವಾಗಿದ್ದು. ಅದನ್ನು ಅವರು ಸರಿಯಾಗಿ ನಿಭಾಯಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ಅವರು ಬುಧವಾರ ಗೋಕರ್ಣದಲ್ಲಿ ಪೂಜೆ ಸಲ್ಲಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕರನ್ನು ಅಮಾನತ್ತು ಮಾಡುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ. ಶಾಸಕರೂ ಸದನದಲ್ಲಿ ಗೌರವದಿಂದ ನಡೆದುಕೊಳ್ಳಬೇಕು. ಸದನದ ಘನತೆ ಕಾಪಾಡುವುದು ಶಾಸಕರ ಕರ್ತವ್ಯವೂ ಆಗಿದೆ. ಅವರು ಸದನದಲ್ಲಿ ಅಸಭ್ಯತೆಯಿಂದ ವರ್ತಿಸಿದಾಗ ಅನ್ಯ ದಾರಿಯಿಲ್ಲದೆ ಸಭಾಧ್ಯಕ್ಷರು ಅಮಾನತ್ತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಅದು ಸರಿಯಾದ ಕ್ರಮ ಎಂದು ಸಭಾಧ್ಯಕ್ಷರನ್ನು ಸಮರ್ಥಿಸಿಕೊಂಡರು. ಹನಿಟ್ರ್ಯಾಪ್ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕ ಕೆ.ಎನ್.ರಾಜಣ್ಣ ಅವರು ನನ್ನನ್ನು ಭೇಟಿಯಾಗಿ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

More articles

Latest article

Most read