ಪಕ್ಷದಿಂದ ಪ್ರಜ್ವಲ್ ಅಮಾನತು ಮಾಡಿ: ಜೆಡಿಎಸ್ ಶಾಸಕನ ಆಗ್ರಹ

ಬೆಂಗಳೂರು: ಊಹಿಸಲು ಅಸಾಧ್ಯವಾದ ಅತಿದೊಡ್ಡ ಲೈಂಗಿಕ ಹಗರಣದ ರೂವಾರಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂಬ ಆಗ್ರಹ ಪಕ್ಷದಿಂದಲೇ ಕೇಳಿಬಂದಿದೆ.

ಪಕ್ಷದ ಶಾಸಕ ಶರಣಗೌಡ ಕುಂದಕೂರು ಈ ಸಂಬಂಧ ಮಾಜಿ ಪ್ರಧಾನಿ ಹಾಗೂ ಪಕ್ಷದ ಸರ್ವೋಚ್ಛ ನಾಯಕ ಎಚ್.ಡಿ.ದೇವೇಗೌಡರಿಗೆ ಪತ್ರ ಬರೆದಿದ್ದು, ಕೂಡಲೇ ಪ್ರಜ್ವಲ್ ನನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣದಿಂದ ಪಕ್ಷಕ್ಕೆ ತೀವ್ ಮುಜುಗರ ಉಂಟಾಗಿದೆ‌ ರಾಜ್ಯದಲ್ಲಿ 2ನೇ ಹಂತದ ಮತದಾನ ಇನ್ನೂ ನಡೆಯಬೇಕಿದೆ. ಇದು ಚುನಾವಣೆ ಮೇಲೆ ಪ್ರಭಾವ ಬೀರಬಹುದು. ಪಕ್ಷಕ್ಕೂ ಹಾನಿಯಾಗಲಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಅಮಾನತುಪಡಿಸಬೇಕು ಎಂದು ಗುರುಮಿಠಕಲ್ ಶಾಸಕ ಶರಣಗೌಡ ಆಗ್ರಹಿಸಿದ್ದಾರೆ.

ಸರ್ಕಾರ ಈ ಪ್ರಕರಣವನ್ನು SIT ತನಿಖೆಗೆ ವಹಿಸಿದೆ. ಪ್ರಕರಣ ಇತ್ಯರ್ಥ ಆಗುವವರೆಗೂ ಅಮಾನತು ಮಾಡಿ ಪಕ್ಷಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಿ ಎಂದು ಅವರು ಕೋರಿದ್ದಾರೆ.

More articles

Latest article

Most read