ಅಸಹಜ ಲೈಂಗಿಕ ದೌರ್ಜನ್ಯ ಕೇಸ್:  ಸೂರಜ್ ರೇವಣ್ಣ ಮೆಡಿಕಲ್ ಟೆಸ್ಟ್ ಗೆ ಕೋರ್ಟ್ ಅನುಮತಿ

Most read

ಎಚ್ ಡಿ ರೇವಣ್ಣ ಅವರ ಇಬ್ಬರು ಮಕ್ಕಳು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧ ಮೆಡಿಕಲ್ ಟೆಸ್ಟ್ ಮಾಡಿಸುವಂತೆ 42ನೇ ACMM ಕೋರ್ಟ್ ಅನುಮತಿ ನೀಡಿದೆ.

ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಯೂರಾಲಜಿಸ್ಟ್, ಫೊರೆನ್ಸಿಕ್ ತಜ್ಷರು ಮತ್ತು ಪಿಜಿಷಿಯನ್ ವೈದ್ಯರಿಂದ ವಿವಿಧ ಮಾದರಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮತ್ತಷ್ಟು  ವೈದ್ಯಕೀಯ ಪರೀಕ್ಷೆಗಳನ್ನು ಮಾಡಲು ಅನುಮತಿ ಸಿಕ್ಕಿರಲಿಲ್ಲ. ಈಗ ಸಿಐಡಿ ವಿವಿಧ ಪರಿಕ್ಷೆಗೆ ಒಳಪಡಿಸಲು 42ನೇ ACMM ಕೋರ್ಟ್ ಅನುಮತಿ ಕೋರಿ ಅರ್ಜಿ ಹಾಕಿದ ಹಿನ್ನಲೆ ಅನುಮತಿ ದೊರಕಿದೆ.

ಜೆಡಿಎಸ್ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮ ದೌರ್ಜನ್ಯಕ್ಕೆ ಸಂಬಂಧಿಸಿ ದಂತೆ ಎರಡು ಪ್ರಕರಣ ದಾಖಲಾಗಿದೆ. ಮೊದಲನೇ ಪ್ರಕರಣ ದಾಖಲಾಗುತ್ತಿದ್ದಂತೆ ಸೂರಜ್‌ ರನ್ನು ಅರೆಸ್ಟ್‌ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು. ನಂತರ ಕೇಸ್‌ ಅನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತ ಮಾಡಿ ಬೆನ್ನಲ್ಲೇ ಸೂರಜ್‌ ರನ್ನು ಸಿಐಡಿ ಕಸ್ಟಡಿಗೆ ತರೆದುಕೊಂಡಿತ್ತು. ಈಗ ಎರಡನೇ ದೂರು ದಾಖಲಾಗಿದ್ದು ಆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

More articles

Latest article