ಕನ್ನಡ, ಕನ್ನಡಿಗರ ಹೀಯಾಳಿಸುವ ಪ್ರವೃತ್ತಿ ಹೆಚ್ಚುತ್ತಿದೆ, ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ: ಸಿಎಂ ಎಚ್ಚರಿಕೆ

Most read

ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ 69ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಮಾತನಾಡಿದ ಸಿಎಂ, ಕನ್ನಡ ಯಾರು ಸರಿಯಾಗಿ ಮಾತಾನಾಡುವುದಿಲ್ಲ ಅಂತಹವರಿಗೆ ಕನ್ನಡ ಕಲಿಸುವ ಕೆಲಸ ಆಗ್ತಿದೆ. ನಾವೆಲ್ಲರೂ ಕನ್ನಡಿಗರಾಗಬೇಕು. ದುರಾಭಿಮಾನ ಇರಬಾರದು. ಅಭಿಮಾನ ಇರಬೇಕು. ಬೇರೆ ರಾಜ್ಯಗಳಲ್ಲಿ ದುರಾಭಿಮಾನ ಇರುತ್ತೆ. ಹಾಗೆ ಇರಬಾರದು. ಯಾರು ಕನ್ನಡ ಮಾತನಾಡುವುದಕ್ಕೆ ಬರೊಲ್ಲಾ ಅಂತ ಜನರಿಗೆ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಇಂದು ನಾವೆಲ್ಲಾ ಕನ್ನಡಿಗರಾಗಿರುತ್ತೇವೆ. ವ್ಯವಹಾರದಲ್ಲಿ ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣಾ ಎಂದು ಕರೆ ನೀಡಿದರು.

More articles

Latest article