ಬೀರ್ ಬಲ್ 2 ಸಿನಿಮಾಗೆ ರೆಡಿಯಾದ ಶ್ರೀನಿ : ಕೇಸ್ ನಂ2 ನಲ್ಲಿ ಏನೆಲ್ಲಾ ಇರಲಿದೆ..?

Most read

ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕ ಎಂ.ಜೆ. ಶ್ರೀನಿವಾಸ್ ಅರ್ಥಾಥ್ ಶ್ರೀನಿ ಸಿನಿಮಾ ಮಾಡ್ತಾರೆ ಅಂದ್ರೆ ಅಲ್ಲೊಂದು ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಇದ್ದೇ ಇರುತ್ತದೆ. ಜೊತೆಗೆ ನಗು ಮಿಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಅವರ ನಿರ್ದೇಶನ, ನಟನೆಯಲ್ಲಿ ಬಂದ ಸಿನಿಮಾಗಳು ಅದನ್ನು ಪ್ರೂವ್ ಮಾಡಿದೆ. ಕಳೆದ ವರ್ಷ ಶಿವಣ್ಣನಿಗೆ ಘೋಸ್ಟ್ ಸಿನಿಮಾ ಮಾಡಿ, ಎಲ್ಲರ ಗಮನ ಸೆಳೆದಿದ್ದರು. ಅದರ ಸಕ್ಸಸ್ ಬೆನ್ನಲ್ಲೇ ಘೋಸ್ಟ್ 2 ಗೆ ರೆಡಿಯಾಗುತ್ತಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ದಿಢೀರನೇ ಬೀರ್ ಬಲ್ -2 ಬಗ್ಗೆ ಘೋಷಣೆ ಮಾಡಿದ್ದಾರೆ.

ಅವರ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಬೀರ್ ಬಲ್ -2 ಸಿನಿಮಾದ ಕಥೆ ಮುಗಿದಿರುವ ಬಗ್ಗೆ ಹೇಳಿದ್ದಾರೆ. ಕಳೆದ ಐದು ವರ್ಷದ ಹಿಂದೆ ಬೀರ್ ಬಲ್ ಸಿನಿಮಾದಲ್ಲಿ ಕೇಸ್ ನಂಬರ್ ಒನ್ ಇಂಟ್ರೆಸ್ಟಿಂಗ್ ಆಗಿತ್ತು. ಈಗ ಕೇಸ್ ನಂಬರ್ 2 ಕಥೆ ಸಿದ್ಧವಾಗಿದೆ. ಈ ಸಿನಿಮಾ ಜುಲೈ ಕೊನೆಯಲ್ಲಿ ಶೂಟಿಂಗ್ ಶುರು ಮಾಡಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಬೀರ್ ಬಲ್ 2 ಸಿನಿಮಾದ ಸ್ಕ್ರಿಪ್ಟ್ ಮುಗಿದಿದೆ ಎಂಬ ಮಾಹಿತಿಯನ್ನು ಬಿಟ್ಟರೆ, ಪಾತ್ರ ವರ್ಗವಾಗಲೀ, ತಂತ್ರಜ್ಞರ ಬಗ್ಗೆಯಾಗಲೀ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸಂದೇಶ್ ಪ್ರೊಡಕ್ಷನ್ ಗೆ ಪೇಜ್ ಗೆ ಟ್ಯಾಗ್ ಮಾಡಿರುವ ಕಾರಣ, ಈ ಸಿನಿಮಾವನ್ನು ಸಂದೇಶ್ ಬ್ಯಾನರ್ ನಿಂದಾನೇ ನಿರ್ಮಾಣವಾಗುತ್ತದೆ ಎಂಬುದು ಅರ್ಥವಾಗಿದೆ. ಶೂಟಿಂಗ್ ಶುರುವಾದ ಮೇಲೆ ಇನ್ನುಳಿದ ಮಾಹಿತಿಯನ್ನು ಶ್ರೀನಿ ಹಂಚಿಕೊಳ್ಳಬಹುದು.

More articles

Latest article