ಒಕ್ಕೂಟ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ದ್ರೋಹ ಖಂಡಿಸಿ ಭಾನುವಾರ(ಫೆ.4) ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಲಾಗಿದೆ.
ಕೇಂದ್ರ ಬಜೆಟ್ ಮಂಡನೆಯ ನಂತರ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಎಂದಿನಂತೆ ಆಗಿರುವ ಅನ್ಯಾಯದ ವಿರುದ್ಧ ಎಲ್ಲೆಡೆ ಕೂಗು ಭುಗಿಲೆದ್ದಿದೆ. ಇದೇ ವೇಳೆ ‘ಕೇಂದ್ರದಿಂದ ಅನ್ಯಾಯ ಮುಂದುವರೆದರೆ ಪ್ರತ್ಯೇಕ ರಾಷ್ಟ್ರದ ಕೂಗು ಕೇಳಬಹುದು’ ಎಂದು ಸಂಸದ ಡಿ.ಕೆ. ಸುರೇಶ ಹೇಳಿಕೆ ನೀಡಿದ್ದರು. ಇವರ ಈ ಹೇಳಿಕೆಯ ನಂತರ ಕರ್ನಾಟಕವೂ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಿಗೆ ಆಗುತ್ತಿರುವ ತೆರಿಗೆ ಅನ್ಯಾಯದ ಕುರಿತು ಚರ್ಚೆಗಳು ಏಳಲಾರಂಭಿಸಿವೆ.
ಅವರ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಸರಕಾರವನ್ನು ಹಣಿಯಲು ಶುರುಮಾಡಿದ್ದ ಬಿಜೆಪಿ ಸಂಸದರು ಸಂಸತ್ತಿನಲ್ಲೂ ಈ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ ದಕ್ಷಿಣದ ರಾಜ್ಯಗಳಿಗೆ ಪ್ರತಿ ಬಜೆಟ್ ನಲ್ಲಿ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ಧ ಕೇಂದ್ರ ಸರಕಾರವನ್ನು ಈ ಬಾರಿ ಜನ ತುಸು ಜೋರಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯುತ್ತಿರುವ ಟ್ವಿಟರ್ ಅಭಿಯಾನ ಮಹತ್ವ ಪಡೆದುಕೊಂಡಿದೆ.
#ನನ್ನತೆರಿಗೆನನ್ನಹಕ್ಕು, #SouthTaxMovement ಆಷ್ ಟ್ಯಾಗ್ ಬಳಸಿ ನಾಳೆ ನಡೆಯುವ ಟ್ವಿಟರ್ ಅಭಿಯಾನಕ್ಕೆ ಬೆಂಬಲ ಸೂಚಿಸುವ ಮೂಲಕ ಕರ್ನಾಟಕದ ತೆರಿಗೆ ಪಾಲನ್ನು ಸಮವಾಗಿ ಹಂಚಿಕೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಹಲವು ಕನ್ನಡಪರ ಸಂಘಟನೆಗಳು ಕರೆ ನೀಡಿವೆ.