ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಪುತ್ರ

Most read

 ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯಲ್ಲಿ ಆಸ್ತಿ ವಿಚಾರವಾಗಿ ತಂದೆಯನ್ನು ಮಗನೇ ಕೊಲೆ ಮಾಡಿರುವ ಧಾರುಣ ಘಟನೆ ಹಳೆ ಹುಬ್ಬಳ್ಳಿಯಲ್ಲಿ ವರದಿಯಾಗಿದೆ.  ಈ ಸಂಬಂಧ ಮೃತರ ಪತ್ನಿ, ಆರೋಪಿಯ ತಾಯಿ  ಹಳೆ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಸ್ತಿಗಾಗಿ ಅಪ್ಪ ಮಗ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಪ್ಪ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಕೊಲೆ ಮಾಡಿದ ಮಗ ತನ್ನ ಪತ್ನಿಯನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದಾನೆ ಎಂದು ಮೃತರ ಪತ್ನಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಲೆಯಾದ ವ್ಯಕ್ತಿ 77 ವರ್ಷದ ನಾಗರಾಜ ಚಂದ್ರಶೇಖರ್. ಇವರ ಪುತ್ರ  ಅಣ್ಣಪ್ಪ ಕೊಲೆ ಮಾಡಿದ ಆರೋಪಿ.

 ಕಳೆದ ನವೆಂಬರ್ 19 ರಂದು ಮನೆಯಲ್ಲಿ ಆಸ್ತಿ ವಿಚಾರಕ್ಕೇ ತಂದೆ ಹಾಗೂ ಮಗನ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ಹೋಗಿತ್ತು. ಕುಡಿತದ ನಶೆಯಲ್ಲಿದ್ದ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಅಣ್ಣಪ್ಪ ತಂದೆಯ ಮೇಲೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮಗ ಅಣ್ಣಪ್ಪ ಊರು ತೊರೆದಿದ್ದಾನೆ.

ಕೆಲವು ದಿನಗಳ ಹಿಂದೆ ಅಣ್ಣಪ್ಪ ಆಸ್ತಿಯಲ್ಲಿ ಪಾಲು ನೀಡಲೇಬೇಕೆಂದು ಜಗಳ ತೆಗೆದಿದ್ದ. ನಾಗರಾಜ ಇದಕ್ಕೆ ಒಪ್ಪಿರಲಿಲ್ಲ.  ಈ ನಡುವೆ ತಾಯಿಯೇ ಮಗನ ವಿರುದ್ದ ದೂರು ನೀಡಿದ ನಂತರ ಅಣ್ಣಪ್ಪ ತಲೆ ಮರೆಸಿಕೊಂಡಿದ್ದಾನೆ. ತಂದೆಯ ಅಂತ್ಯಕ್ರಿಯೆಗೂ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article