ಬೆಂಗಳೂರು ಸಮಸ್ಯೆಗೆ ನಿಮ್ಮ ಬಳಿ ಪರಿಹಾರವಿದೆಯೇ? ಹಾಗಾದರೆ ನೀವೂ “ನಮ್ಮ ಬೆಂಗಳೂರು ಚಾಲೆಂಜ್”ನಲ್ಲಿ ಭಾಗವಹಿಸಿ!

Most read

ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವಿಭಿನ್ನ ಆಲೋಚನೆ, ಐಡಿಯಾ ನಿಮ್ಮಲ್ಲಿದೆಯೇ? ಹಾಗಿದ್ದರೆ ಇಲ್ಲಿದೆ ಉತ್ತಮ ಅವಕಾಶ.

ಅನ್ಬಾಕ್ಸಿಂಗ್ ಬೆಂಗಳೂರು ಹಾಗೂ WT ಫಂಡ್ ಸಹಯೋಗದೊಂದಿಗೆ ಬೆಂಗಳೂರು ಸಮಸ್ಯೆಗೆ ಪರಿಹಾರ ಸೂಚಿಸುವ ಐದು ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ ಅನುದಾನ ನೀಡುವ “ನಮ್ಮ ಬೆಂಗಳೂರು ಚಾಲೆಂಜ್” ಉಪಕ್ರಮವನ್ನು ಘೊಷಣೆ ಮಾಡಿದೆ. ಉತ್ತಮ ಐಡಿಯಾ ನೀಡುವ 5 ವ್ಯಕ್ತಿಗಳು ಅಥವಾ ಸ್ಟಾರ್ಟ್ಅಪ್ ಅಥವಾ ಸಮುದಾಯ ಸಂಸ್ಥೆಗಳು ತಲಾ 10 ಲಕ್ಷ ರೂಪಾಯಿಗಳ ಅನುದಾನಕ್ಕಾಗಿ ಆಯ್ಕೆ ಆಗಲಿವೆ.

ಈ ಕುರಿತು ಮಾತನಾಡಿದ ಅನ್ಬಾಕ್ಸಿಂಗ್ ಬೆಂಗಳೂರಿನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಮಾಲಿನಿ ಗೋಯಲ್ ಮಾತನಾಡಿ, ಈ ವಿನೂತನ ಉಪಕ್ರಮದ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು ನಗರ ನಮಗೆ ಸಾಕಷ್ಟು ನೀಡಿದೆ. ಅದಕ್ಕೆ ಪರ್ಯಾಯವಾಗಿ ನಾವೂ ಸಹ ನಮ್ಮ ಬೆಂಗಳೂರಿಗೆ ಕೊಡುಗೆ ನೀಡುವ ಉದ್ದೇಶದಿಂದ ಈ ಹೆಜ್ಜೆ ಇಟ್ಟಿದ್ದೇವೆ ಎಂದರು.

ಡಬ್ಲ್ಯೂಟಿ ಫಂಡ್ನ ಉದ್ಯಮಿ ನಿಖಿಲ್ ಕಾಮತ್ ಬೆಂಗಳೂರು ನನಗೆ ಎಲ್ಲವನ್ನೂ ನೀಡಿದೆ, ಮುಂದೆ ಬೆಳೆಯಬೇಕು ಎನ್ನುವ ಹಸಿವು ಸಹ ನೀಡಿದೆ. ಈ ಬೆಂಗಳೂರು ಸುಂದರವನ್ನಾಗಿ ಉಳಿಸಿಕೊಂಡು ಹೋಗಲು ಈಗಿರುವ ಒಂದಷ್ಟು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಬೇಕು. ಈ ನಿಟ್ಟಿನಲ್ಲಿ ಬೆಂಗಳೂರ ಚಾಲೆಂಜ್ನನ್ನು ಜನಸಾಮಾನ್ಯರ ವಿಭಿನ್ನ ಆಲೋಚನೆಗೆ ಬಿಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ನಮ್ಮ ಬೆಂಗಳೂರು ಚಾಲೆಂಜ್ಗಾಗಿ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ನಾವೀನ್ಯತೆ, ಪ್ರಭಾವ, ಕಾರ್ಯಸಾಧ್ಯತೆ, ಸ್ಕೇಲೆಬಿಲಿಟಿ ಮತ್ತು ಬದ್ಧತೆಯ ಆಧಾರದ ಮೇಲೆ ಅವರ ಐಡಿಯಾಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಇಚ್ಚಿಸುವವರು ಅನ್ಬಾಕ್ಸಿಂಗ್ ಬೆಂಗಳೂರಿನ ಅಧಿಕೃತ ವೆಬ್ಸೈಟ್ https://www.unboxingblr.com/ ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ, ತಮ್ಮ ಸ್ವವಿವರ ಮತ್ತು ಅವರ ಐಡಿಯಾಗಳ ಪರಿಚಯಿಸುವ ಕಿರು ವೀಡಿಯೊವನ್ನು ಸಲ್ಲಿಸಬೇಕು. ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವರ್ಚುವಲ್ ಇಂಟರ್ವ್ಯೂಗಳಿಗೆ ಆಹ್ವಾನಿಸಲಾಗುತ್ತದೆ, ಇದರಲ್ಲಿ ಆಯ್ಕೆಯಾಗುವ ಟಾಪ್ 5 ಅರ್ಜಿದಾರರು ತಲಾ 10 ಲಕ್ಷ ರೂ.ಗಳ ಅನುದಾನವನ್ನು ಪಡೆಯುತ್ತಾರೆ. ಇದೇ ನವೆಂಬರ್ 30 ರಿಂದ ಡಿಸೆಂಬರ್ 15ರವರೆಗೆ ನಡೆಯಲಿರುವ ಬೆಂಗಳೂರು ಹಬ್ಬದಲ್ಲಿ ನಡೆಯಲಿರುವ ಕಾರ್ಯಾಗಾರಗಳಲ್ಲಿಯೂ ಸಹ ಆಯ್ಕೆಯಾದ ಐಡಿಯಾಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ಪಡೆಯುತ್ತಾರೆ. ಹಬ್ಬದ ಅಂತಿಮದಲ್ಲಿ ಆಯ್ಕೆಗಳನ್ನು ಬಹಿರಂಗಪಡಿಸಲಾಗುತ್ತದೆ, ಅಲ್ಲಿ ಅಗ್ರ ಐದು ವಿಜೇತರು ತಲಾ ರೂ. 10 ಲಕ್ಷಗಳ ಅನುದಾನವನ್ನು ಸ್ವೀಕರಿಸುತ್ತಾರೆ.

More articles

Latest article