ಧರ್ಮಸ್ಥಳ ಹೂತಿಟ್ಟ ಹೆಣಗಳ ತನಿಖೆ : ಉತ್ಖನನಕ್ಕೆ SIT ತಾತ್ಕಾಲಿಕ ಬ್ರೇಕ್, ಹೊಸ ಜಾಡು ಹಿಡಿಯಲಿದೆ ತನಿಖೆ

Most read

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಶೋಧ ಕಾರ್ಯಾಚರಣೆ ನಡೆಸಿದ SIT strategic ಬ್ರೇಕ್ ತೆಗೆದುಕೊಳ್ಳಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಒಂದು ಹೆಚ್ಚುವರಿ ಸೈಟ್ ಸೇರಿದಂತೆ ಸಾಕ್ಷಿ ದೂರುದಾರ ಗುರುತಿಸಿದ 13 ಪಾಯಿಂಟ್ ಗಳಲ್ಲಿ ಉತ್ಖನನ ಕಾರ್ಯ ನಡೆದಿದ್ದು, ಇನ್ನೊಂದು ಪಾಯಿಂಟ್ ಬಾಕಿ ಇದೆ.

ಉತ್ಖನನ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಿರುವ SIT ಪ್ರಕರಣದ ತನಿಖೆಯನ್ನು ಬೇರೊಂದು ದಿಕ್ಕಲ್ಲಿ ಮುಂದುವರಿಸಲಿದೆ ಎಂದು ಉನ್ನತ ಮೂಲಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಸಂಬಂಧ ಅತ್ಯಮೂಲ್ಯ ಸುಳಿವೊಂದು ಲಭ್ಯವಾಗಿದೆ ಎಂದು ತಿಳಿದುಬಂದಿದ್ದು, ಆ ಜಾಡು ಹಿಡಿದು ತನಿಖೆ ಮುಂದುವರೆಯಲಿದೆ.

ಈ ನಡುವೆ ಧರ್ಮಸ್ಥಳದಲ್ಲಿ ಕೆಲಸ ಮಾಡಿದ ಮೂವತ್ತು ಸೂಪರ್ವೈಸರ್ ಗಳ ವಿಚಾರಣೆಗೆ ಎಸ್ ಐ ಟಿ ಸಿದ್ಧತೆ ನಡೆಸಿದೆ ಎಂದು ಗೊತ್ತಾಗಿದ್ದು,
ಗ್ರಾಮ ಪಂಚಾಯ್ತಿ ಈಗಿನ ಸದಸ್ಯರು, ಹಿಂದಿನ ಸದಸ್ಯರುಗಳನ್ನೂ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದ ʼಅನಾಮಿಕ ವ್ಯಕ್ತಿಯ ಕುರಿತು ಹಾಗೂ ಅಲ್ಲಿ ಶವಗಳನ್ನು ಹೂಳುತ್ತಿದ್ದ ಕುರಿತು ಇತ್ತೀಚೆಗೆ ಧರ್ಮಸ್ಥಳ ಗ್ರಾಮಪಂಚಾಯ್ತಿಯಿ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ SITಯ ಈ ನಡೆ ಕುತೂಹಲಕ್ಕೆ ಎಡೆ ಮಾಡಿದೆ.

ಹೊಸದಾಗಿ ಮುಂದೆ ಬರುತ್ತಿರುವ ಇನ್ನಷ್ಟು ಸಾಕ್ಷಿದಾರರ ವಿಚಾರಣೆ ನಡೆಸಲಿರುವ ಎಸ್ ಐ ಟಿ ಪ್ರಕರಣದ ಆಳಕ್ಕೆ ಇಳಿದು ತನಿಖೆ ನಡೆಸಲಿದೆ.

More articles

Latest article