Saturday, July 27, 2024

ಗ್ಯಾರಂಟಿಯಿಂದ ದಿವಾಳಿ ಆಗುತ್ತದೆ ಎಂದ ಮೋದಿಯೇ ಗ್ಯಾರಂಟಿ ಭರವಸೆ ನೀಡುತ್ತಿದ್ದಾರೆ, ಏನಂತಿರಾ ಈಗ? : ರಾಜ್ಯ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಚಾಟಿ‌ 

Most read

ರಾಜಸ್ಥಾನದಲ್ಲಿ ಮೋದಿ ಅವರು ಗ್ಯಾರಂಟಿಯಿಂದ ದಿವಾಳಿ ಆಗುತ್ತದೆ ಎಂದು ಹೇಳಿದರು. ಆದರೆ ಈಗ ಮೋದಿ ಅವರೇ ಗ್ಯಾರಂಟಿ ಭರವಸೆ ನೀಡುತ್ತಿದ್ದಾರೆ,‌ ರಾಜ್ಯದ ನಾಯಕರು ಮೋದಿ‌ ಗ್ಯಾರಂಟಿ ಮೋದಿ ಗ್ಯಾರಂಟಿ ಅಂತಿದ್ದಾರೆ. ಈಗ ದಿವಾಳಿ ಆಗಲ್ವ? ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಚಾಟಿ ಬಿಸಿದ್ದಾರೆ.

ವಿಧಾನಸೌಧದ ನಡೆದ 100 ಅಶ್ವಮೇಧ ಕ್ಲಾಸಿಕ್ ಬಸ್ ಲೋಕಾರ್ಪಣೆ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ನಾವು ಚುನಾವಣೆ (Election) ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಉಚಿತ ಬಸ್ ಪ್ರಯಾಣ ಘೋಷಣೆ ‌ಮಾಡಿದ್ದೆವು. ಜೂನ್ 11 ಕ್ಕೆ ಇದೇ ಜಾಗದಲ್ಲಿ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿ ಮಾಡಿದೆವು. ಅಲ್ಲಿಂದ ಇಲ್ಲಿಯವರೆಗೆ 146 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ.  ಎಲ್ಲಾ ‌ಜಾತಿ, ಧರ್ಮದ, ಪಕ್ಷದ ಬಡವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇವೆ. 1.17 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಕೊಡುವ ಯೋಜನೆ ಹಿಂದೆ ಯಾರಿಗಾದ್ರು ಇತ್ತಾ?  ಹಿಂದೆ ಯಾವುದಾದರೂ ಸರ್ಕಾರ ಈ ಕೆಲಸ ಮಾಡಿತ್ತಾ?  ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಮೊದಲು ಗ್ಯಾರಂಟಿ ಜಾರಿ ಮಾಡಲು ಆಗುವುದಿಲ್ಲ ಎಂದರು. ಜಾರಿ ಮಾಡಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದರು. ಜಾರಿ ಮಾಡಿದ ಮೇಲೆ ಚುನಾವಣೆ ಆದ ಮೇಲೆ ನಿಲ್ಲಿಸುತ್ತಾರೆ ಎಂದು ಹೇಳುತ್ತಾರೆ. ರಾಜಸ್ಥಾನದಲ್ಲಿ ಮೋದಿ ಅವರು ಗ್ಯಾರಂಟಿಯಿಂದ ದಿವಾಳಿ ಆಗುತ್ತದೆ ಎಂದು ಹೇಳಿದರು. ಆದರೆ ಈಗ ಮೋದಿ ಅವರೇ ಗ್ಯಾರಂಟಿಗಳ ಭರವಸೆ ನಿಡುತ್ತಿದ್ದಾರೆ,‌ ಬಿಜೆಪಿ ನಾಯಕರು ಈಗ ಮೋದಿ ಗ್ಯಾರಂಟಿ, ಮೋದಿ‌ ಗ್ಯಾರಂಟಿ  ಎಂದು ಕುಣಿಯುತ್ತಿದ್ದಾರೆ. 10 ವರ್ಷ ಯಾಕೆ ಮೋದಿ ಅವರೇ ಗ್ಯಾರಂಟಿ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಸ್ ಫ್ರೀ ಕೊಡಿ. 2 ಸಾವಿರ ಹಣ ಕೊಡಿ. 5 ಕೆಜಿ ಅಕ್ಕಿಗೆ 170 ರೂಪಾಯಿ ಹಣ ಕೊಡುತ್ತಿದ್ದೇವೆ. ನೀವು ಯಾಕೆ ನೀಡುವುದಿಲ್ಲ? ನಿರುದ್ಯೋಗಗಳಿಗೆ 3 ಸಾವಿರ ರೂ., 1500 ರೂ. ಕೊಡುತ್ತೇವೆ. ನೀವು ನಿಮ್ಮ ಆಡಳಿತದ ರಾಜ್ಯದಲ್ಲಿ ಇವೆಲ್ಲ ಗ್ಯಾರಂಟಿ ಯೋಜನೆ ಕೊಡಿ ಮೋದಿ ಅವರೇ ಎಂದು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ಬಿಜೆಪಿಯವರು ಎರಡು ಕೋಟಿ ಉದ್ಯೋಗ ಕೊಟ್ಟಿದ್ದಾರಾ? ಅಚ್ಚೇ ದಿನ್ ಆಯೇಗಾ ಅಂದ್ರು ಬಂತಾ? ಪೆಟ್ರೋಲ್, ಡಿಸೇಲ್, ಗ್ಯಾಸ್, ಗೊಬ್ಬರ ಬೆಲೆ ಕಡಿಮೆ ಆಯ್ತಾ? ರೈತರ ಆದಾಯ ದುಪ್ಪಟ್ಟು ಆಯ್ತಾ? ಈಗ ಮೋದಿ‌ ಗ್ಯಾರಂಟಿ.. ಮೋದಿ ಗ್ಯಾರಂಟಿ ಅಂತಾರಲ್ಲ ಸರಿಯಾ? ಎಂದು ಟೀಕಿಸಿದ್ದಾರೆ.

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮೋಸ!

ಕೇಂದ್ರ ಸರ್ಕಾರ ಅದರ ಮಾನದಂಡದಂತೆ ಕೂಡ ಕರ್ನಾಟಕಕ್ಕೆ ಹಣವನ್ನು ನೀಡುತ್ತಿಲ್ಲ. ಈ ಹಿನ್ನೆಲೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ದೆಹಲಿಯ ಜಂತರ್​ ಮಂತರ್‌ನಲ್ಲಿ ಇಡೀ ಕರ್ನಾಟಕ ಸರ್ಕಾರ ಧರಣಿ ನಡೆಸಲಿದೆ ಎಂದು ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

14ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ 42 ರಷ್ಟು ಹಣ ನೀಡಬೇಕಿದೆ. 15ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ 41ರಷ್ಟು ಹಣ ನೀಡಬೇಕು. ನರೇಂದ್ರ ಮೋದಿ ಅವರು, ಪ್ರಧಾನಿ ಆದ ಬಳಿಕ ಈ ಆಯೋಗ ರಚನೆ ಆಗಿತ್ತು ಎಂದೂ ಇದೇ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕದಿಂದ 4 ಲಕ್ಷ 30 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ. ಈ ಮೂಲಕ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. 100 ರೂ. ತೆರಿಗೆ ಕಟ್ಟಿದರೆ ನಮಗೆ ಶೇ 12-13ರಷ್ಟು ವಾಪಸ್ ಬರುತ್ತಿದೆ. ಆದರೆ, ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಾರೆ ಅಂತಾ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ರು. ಒಟ್ನಲ್ಲಿ ಈ ಎಲ್ಲಾ ಕಾರಣಗಳಿಂದ ಈಗ ಫೆಬ್ರವರಿ 7ಕ್ಕೆ ಬೆಳಗ್ಗೆ 11 ಗಂಟೆಯಿಂದ ಪ್ರತಿಭಟನೆ ನಡೆಸಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ. ಹಾಗೆಯೇ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಕೇಂದ್ರ ಸರ್ಕಾರ & ಕರ್ನಾಟಕ ನಡುವಿನ ತಿಕ್ಕಾಟಕ್ಕೆ ಯಾವಾಗ ಬ್ರೇಕ್ ಬೀಳುತ್ತೆ ಅಂತಾ ಕಾದು ನೋಡಬೇಕಿದೆ.

ರಾಜ್ಯಕ್ಕೆ ನಷ್ಟವಾಗಿದ್ದು ಎಷ್ಟು?

  • GST ಅನುಷ್ಠಾನದ ಕೊರತೆ – ₹59,274 ಕೋಟಿ
  • 15ನೇ ಹಣಕಾಸು ಆಯೋಗ ತೆರಿಗೆ ಪಾಲು – ₹62,098 ಕೋಟಿ
  • ಸೆಸ್ ಮತ್ತು ಸರ್ಚಾರ್ಜ್‌ – ₹55,000 ಕೋಟಿ
  • 15ನೇ ಹಣಕಾಸು ಆಯೋಗ ವಿಶೇಷ ಅನುದಾನದ ವಂಚನೆ – ₹11,495 ಕೋಟಿ
  • ಒಟ್ಟು ನಷ್ಟ- 187867 ಕೋಟಿ ರೂಪಾಯಿ

More articles

Latest article