Sunday, September 8, 2024

FSL ವರದಿಯಲ್ಲಿ ಘೋಷಣೆ ಕೂಗಿದ್ದು ಸಾಬೀತಾದರೆ, ಕಠಿಣ ಕ್ರಮ: ಮುಖ್ಯಮಂತ್ರಿ  ಸಿದ್ದರಾಮಯ್ಯ

Most read

ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Elections) ಗೆಲುವು ಕಂಡ ಬಳಿಕ ಕಾಂಗ್ರೆಸ್‌ ನಾಯಕರ (Congress Leaders) ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ (Vidhana Soudha) ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಘೋಷಣೆ ಕುಗಿದ್ದಾರ ಎನ್ನೋದು ಮೊದಲು ತನಿಖೆ ಯಾಗಬೇಕು. ಈಗಾಗಲೇ FSL ತನಿಖೆಗೆ ಕೊಟ್ಟಿದ್ದೇವೆ. ಘೋಷಣೆ ಕೂಗಿದ್ದೇ ಆದರೆ ಕ್ರಮ ತೆಗೆದುಕೊಳ್ತೇವೆ. ಯಾರೇ ಆಗಿರಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ತೇವೆ, ದೇಶದ್ರೋಹಿಗಳನ್ನ (Traitor) ಮಟ್ಟ ಹಾಕಬೇಕಿದೆ ಎಂದು ತಿಳಿಸಿದ್ದಾರೆ.

 ಅವರು ವಿಧಾನಸೌಧದಲ್ಲಿ ಇಂದು ಮಾಧ್ಯಮದರೊಂದಿಗೆ ಮಾತನಾಡಿ,  ರಾಷ್ಟ್ರದ  ವಿರುದ್ಧ ಘೋಷಣೆ ಕೂಗಿರುವುದು ಸಾಭೀತಾದರೆ ಯಾರೇ ಆಗಲಿ  ಕಠಿಣ ಕ್ರಮ ವಹಿಸಲಾಗುವುದು ಎಂದರು. ವಿಧಾನಸೌಧದಲ್ಲಿ ಈ ಘಟನೆ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ  ಕೂಗುವವರಿಗೆ ಇಲ್ಲಿಯಾದರೇನು, ಎಲ್ಲಾದರೇನು ? ನಿಜ ಆಗಿದ್ದರೆ ಕಠಿಣ ಕ್ರಮ ಆಗುತ್ತದೆ ಎಂದರು.

More articles

Latest article