ಅವಮಾನ ಮಾಡಿದ ಬಿಜೆಪಿ ಪಾರ್ಟಿಗೆ ಮತ್ತೆ ಹೋಗಿದಾರೆ ಅಂದ್ರೆ ಏನು ಹೇಳೋದು?: ಶೆಟ್ಟರ್ ಕುರಿತು ಸಿದ್ದರಾಮಯ್ಯ ಫಸ್ಟ್​ ರಿಯಾಕ್ಷನ್

ಟಿಕೆಟ್ ಕೊಡದೇ ಅವಮಾನ ಮಾಡಿದ್ದಾರೆ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. ಹಿರಿಯ ನಾಯಕರು ಎಂದು ಹುಬ್ಬಳ್ಳಿ ಕ್ಷೇತ್ರದಿಂದ ಟಿಕೆಟ್ ನೀಡಿದ್ದೆವು. ಆದರೆ ಈಗ ಅದೇ ಪಕ್ಷಕ್ಕೆ ಹೋಗಿದ್ದಾರೆ ಎಂದರೆ ಏನು ಹೇಳೊಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು, ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಎಂದು ನಾವು ಟಿಕೆಟ್ ಕೊಟ್ಟಿದ್ದೇವೆ. ಸೋತ ನಂತರವು ಪರಿಷತ್ ಸದಸ್ಯತ್ವ ನೀಡಿ ಗೌತವದಿಂದ ನಡೆಸಿಕೊಂಡಿದ್ದೇವೆ. ಯಾಕೆ ಪಕ್ಷಬಿಟ್ಟು ಹೋಗಿದ್ದಾರೆ ಅವರೇ ಹೇಳಬೇಕು ಎಂದು ಹೇಳಿದ್ದಾರೆ.

ಅಧಿಕೃತ ಮಾಹಿತಿ ಬಂದ ನಂತರ ಹಾಗೂ ಶೆಟ್ಟರ್ ಹೇಳಿಕೆ ನಂತರ ಈ ಕುರಿತು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

More articles

Latest article

Most read