Saturday, December 7, 2024

ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಪಕ್ಷದ ಅನಿವಾರ್ಯತೆ ಇತ್ತು ಅನ್ನಿಸುತ್ತದೆ : ಶಾಸಕ ಮಹೇಶ ಟೆಂಗಿನಕಾಯಿ

Most read

ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತ್ರವಲ್ಲ ಯಾರೂ ಕೂಡ ಅನಿವಾರ್ಯವಲ್ಲ. ಶೆಟ್ಟರನ್ನು ಬಿಜೆಪಿಗೆ ಕರೆತರುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದ ಶಾಸಕ ಮಹೇಶ ಟೆಂಗಿನಕಾಯಿ ಈಗ ಉಲ್ಟಾ ಹೊಡೆದಿದ್ದಾರೆ.

ಹೌದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು,  ಬಿಜೆಪಿ ಪಕ್ಷಕ್ಕೆ ಅನಿವಾರ್ಯತೆ ಅನ್ನೊದು ಇಲ್ಲ. ನಮಗಂತು ಶೆಟ್ಟರ್ ಸೇರ್ಪಡೆ ಅನಿವಾರ್ಯತೆ ಇರಲಿಲ್ಲ ಆದರೆ ಶೆಟ್ಟರ್ಗೆ ಪಕ್ಷದ ಅನಿವಾರ್ಯತೆ ಇತ್ತು ಅನ್ನಿಸುತ್ತದೆ ಅದಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಸೇರ್ಪಡೆ ಮಾಡಿಕೊಂಡಿದ್ದಾರೆ.  ಪಕ್ಷ ತೀರ್ಮಾಕ್ಕೆ ಸ್ವಾಗತಿಸುತ್ತೇನೆ. ಬಿಜೆಪಿ ಪಕ್ಷ ಹುಬ್ಬಳ್ಳಿ-ಧಾರವಾಡದಲ್ಲಿ ತುಂಬ ಬಲಿಷ್ಠವಾಗಿದೆ. ನಮಗೆ ಎದುರಾಳಿಗಳಿಲ್ಲ. ಶೆಟ್ಟಿರ್ ಅವರಿಂದ ಏನು ಬದಲಾವಣೆ ಆಗಿಲ್ಲ ಎಂದು ಹೇಳಿದ್ದಾರೆ.

More articles

Latest article