Thursday, May 23, 2024

ಬಿಜೆಪಿಗೆ ಜಗದೀಶ್ ಶೆಟ್ಟರ್ ಮರು ಸೇರ್ಪಡೆ : ಗರಂ ಆದ ಡಿಕೆಶಿ

Most read

ಜಗದೀಶ್ ಶೆಟ್ಟರ್ ಅವರನ್ನು ಯಾವುದೋ ಒತ್ತಡದಲ್ಲಿ ಕರೆದುಕೊಂಡು ಹೋಗಿದ್ದಾರೆ ಅನಿಸುತ್ತಿದೆ. ನಿನ್ನೆ ನಾನು ಕರೆ ಮಾಡಿದಾಗ ಹೋಗಲ್ಲ ಎಂದಿದ್ದರು. ಈಗ ಫ್ಯಾಕ್ಸ್ ನಲ್ಲಿ ರಾಜೀನಾಮೆ ಕೊಡುತ್ತೇನೆ ಅಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಻ವರು, ‘ನಾವು ಜಗದೀಶ್ ಶೆಟ್ಟರ್ ಅವರಿಗೆ ಸೀನಿಯರ್ ಲೀಡರ್ ಎಂದು ಸ್ಥಾನಮಾನ ಕೊಟ್ಟಿದ್ದೆವು. ಜಗದೀಶ್ ಶೆಟ್ಟರ್ ಹಿರಿಯ ನಾಯಕರು ಅವರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಶೆಟ್ಟರ್ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ಬಿಜೆಪಿಗೆ ಹೋಗಿದ್ದಾರೆಂದು ಇನ್ನು ತಿಳಿದು ಬಂದಿಲ್ಲ. ಒತ್ತಡಕ್ಕೆ ಹೋಗಿದ್ದಾರೋ ಅಥವಾ ಅಮಿಷಕ್ಕೆ ಹೋಗಿದ್ದಾರೋ ಗೊತ್ತಿಲ್ಲ. ಶೆಟ್ಟರ್ ಕಾರಣ ಹೇಳಿದ ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೊಂಡ ಸಂದರ್ಭದಲ್ಲಿ ದ್ರೋಹ ಮಾಡೋದಿಲ್ಲ ಅಂತ ಹೇಳಿದ್ರು. ಬಿಜೆಪಿ ಟಿಕೆಟ್ ನೀಡದಿದ್ದಾಗ ದೇಶದ ಹಿತ ಎಲ್ಲಿತ್ತು? ಮತ್ತು ಕಾಂಗ್ರೆಸ್ ಸೇರಿದಾಗ ದೇಶದ ಹಿತ ಗೊತ್ತಿರಲಿಲ್ವಾ? ಎಂದು ಡಿಸಿಎಂ ಡಿಕೆಶಿ ಪ್ರಶ್ನೆಮಾಡಿದ್ದಾರೆ.

More articles

Latest article