ದಸರಾ ಸಂಭ್ರಮ: ಸಿಎಂ ಸಿದ್ದರಾಮಯ್ಯ 3 ದಿನಗಳ ಕಾಲ ಮೈಸೂರು ಪ್ರವಾಸ

ಮೈಸೂರು ದಸರಾ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ. 11, 12 ಮತ್ತು 13 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಅ.12 ರಂದು ಬೆಳಗ್ಗೆ 9 ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 1.41ರಿಂದ 2.10 ಗಂಟೆಯವರೆಗೆ ಅರಮನೆ ಆವರಣದ ಬಲರಾಮ ದ್ವಾರದಲ್ಲಿಆವರಣದಲ್ಲಿ ಆಯೋಜಿಸಲಾಗಿರುವ ನಂದಿಧ್ವಜ ಪೂಜೆಯಲ್ಲಿ ಪಾಲ್ಗೊಂಡು ಸಂಜೆ 4 ರಿಂದ 4.30ರವರೆಗೆ ಅರಮನೆ ಒಳಾವರಣದಲ್ಲಿ ಏರ್ಪಡಿಸಲಾಗಿರುವ ವಿಜಯದಶಮಿ ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ.

ರಾತ್ರಿ 7 ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಆಯೋಜಿಸಿರುವ ಪಂಜಿನ ಕವಾಯತು( ಟಾರ್ಚ್ ಲೈಟ್‌ ಪರೇಡ್‌) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅ. 13 ರಂದು ಬೆಳಿಗ್ಗೆ 11 ಕ್ಕೆ ಕಡಕೋಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಳಗ್ಗೆ 11.30 ಗಂಟೆಗೆ ಮೈಸೂರಿನಿಂದ ತೆರಳಲಿದ್ದಾರೆ.

ಚಾಮುಂಡೇಶ್ವರಿ ವಿಗ್ರಹ ಹೊತ್ತ ಚಿನ್ನದಂಬಾರಿಗೆ ಸಂಜೆ 4 ರಿಂದ 4.30ರ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

More articles

Latest article

Most read