Saturday, December 7, 2024

ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತಾಡಿದ್ರೆ ಸರಿ ಇರಲ್ಲ ಮಗನೇ : ಅನಂತ್‌ಕುಮಾರ್ ಹೆಗಡೆ ವಿರುದ್ಧ ಸಚಿವ ತಂಗಡಗಿ ಕಿಡಿ

Most read

ಉತ್ತರ ಕನ್ನಡದ ಕುಮಟಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಅವರು, ಇದೇ ರೀತಿ ಮಾತನಾಡಿದರೆ ‘ಮಗನೇ’ ಅಲ್ಲಿಗೆ ಬಂದು ಉತ್ತರ ಹೇಳುತ್ತೀನಿ ಎಂದು ಏಕವಚನದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕಾರಟಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ”ಅನಂತಕುಮಾರ ಈಗ ವೈಲೆಂಟ್ ಆಗಿದ್ದೇನೆ ಎನ್ನುತ್ತಾರೆ. ನಿಮ್ಮ ವೈಲೆಂಟ್ ನಮಗೆ ಗೊತ್ತಿಲ್ಲೇನು. ಚುನಾವಣೆ ಬಂದಾಗ ದೇವರು, ಮಂತ್ರಾಕ್ಷತೆ ನೆನಪಾಗುತ್ತೆ. ನಿಮಗೆ ಜನರ ಹಸಿವಿನ ಬಗ್ಗೆ ಏನು ಗೊತ್ತಿದೆ. ಮುಂದೆ ನಮ್ಮ ನಾಯಕರ ಬಗ್ಗೆ ಮಾತನಾಡಿದರೆ, ಹುಷಾರ್‌” ಎಂದು ಎಚ್ಚರಿಕೆ ನೀಡಿದರು.

ನಾವು ಉತ್ತರ ಕರ್ನಾಟಕದವರು, ನಮ್ಮ ಶೈಲಿಯ ಮಾತು ನಿಮಗೆ ಗೊತ್ತಿದೆ. ನೀನು ಸಿದ್ದರಾಮಯ್ಯ ಸಾಹೇಬರ ಕಾಲಿನ ಧೂಳಿನ‌ ಸಮನಲ್ಲ, ಸಿದ್ದರಾಮಯ್ಯ ಅವರಷ್ಟು ರಾಜಕೀಯ ಅನುಭವದಷ್ಟು ವಯಸ್ಸಾಗಿಲ್ಲ. ನಾವು ಈ ಮಾತು ಹೇಳಬಾರದು. ಆದರೆ ಅನಿವಾರ್ಯವಾಗಿ ಈ ಪದ ಪ್ರಯೋಗ ಮಾಡಿದ್ದೇನೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕಾ ಗಾಂಧಿ ಕೊಪ್ಪಳದಿಂದ ಸ್ಪರ್ಧಿಸಿದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷದಿಂದ ಸಮೀಕ್ಷೆಗಳು ನಡೆದಿರುತ್ತವೆ. ಸಮೀಕ್ಷೆಯ ನಂತರ ವರಿಷ್ಠರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಬಂದರೆ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದರು.

More articles

Latest article