ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟ ಶಿವರಾಜಕುಮಾರ್

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಶಸ್ತ್ರಚಿಕಿತ್ಸೆಗಾಗಿ ಇಂದು ಅಮೆರಿಕಾಗೆ ತೆರಳುತ್ತಿದ್ದಾರೆ. ಇಂದು ರಾತ್ರಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಲಿದ್ದಾರೆ. ಡಿಸೆಂಬರ್‌ 24 ರಂದು ಅವರಿಗೆ ಸರ್ಜರಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಅವರ ಕುಟುಂಬದ ಸದಸ್ಯರು, ಸ್ಯಾಂಡಲ್‌ ವುಡ್‌ ನ ನಟ ನಟಿಯರು ಮತ್ತು ರಾಜಕಾರಣಿಗಳು ಶುಭ ಹಾರೈಸಿದ್ದಾರೆ.

ಚಿತ್ರನಟರಾದ ಸುದೀಪ್, ಬಿ.ಸಿ. ಪಾಟೀಲ್, ಸಚಿವ ಮತ್ತು ಸಂಬಂಧಿ ಮಧು ಬಂಗಾರಪ್ಪ ಮೊದಲಾದವರು ಶಿವಣ್ಣ ಅವರ ಮನೆಗೆ ಭೇಟಿ ನೀಡಿ ತ್ವರಿತವಾಗಿ ಗುಣ ಮುಖರಾಗುವಂತೆ ಹಾರೈಸಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಪತ್ನಿ ಗೀತಾ ಅವರು ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದರು.

ಶಿವಣ್ಣ ಅವರ ನಟನೆಯ ‘ಭೈರತಿ ರಣಗಲ್’ ಸೂಪರ್ ಹಿಟ್ ಅಗಿದೆ. ಈ ಚಿತ್ರವನ್ನು ಶಿವರಾಜ್ ಕುಮಾರ್ ಅವರೇ ನಿರ್ಮಿಸಿರುವುದು ಮತ್ತೊಂದು ವಿಶೇಷ. ತಾವು ಅಮೆರಿಕದಲ್ಲೇ ಉಪೇಂದ್ರ ಅವರ ಯುಐ ಸಿನಿಮಾ ನೋಡುವುದಾಗಿಯೂ ಶಿವಣ್ಣ ಹೇಳಿಕೊಂಡಿದ್ದಾರೆ.

More articles

Latest article

Most read