Tuesday, September 17, 2024

ಮಲೆನಾಡಿಗರ ತೀವ್ರ ವಿರೋಧದ ನಡುವೆಯೂ ಎಂಪಿಎಂಗೆ ಭೂಮಿ ಲೀಸ್ ನೀಡಿದ ಸರ್ಕಾರ – ನಮ್ಮೂರಿಗೆ ಅಕೇಶಿಯ ಮರ ಬೇಡ ಸಂಘಟನೆ ಆಕ್ರೋಶ

Most read

ಎಂಪಿಎಂಗೆ ಲೀಸ್ ನೀಡಿದ್ದ 20 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ಈ ಕೂಡಲೇ ವಾಪಸ್​​ ಪಡೆದು ಅರಣ್ಯ ಇಲಾಖೆಗೆ ನೀಡಬೇಕು. ಯಾವುದೇ ಕಾರಣಕ್ಕೂ ಮೈಸೂರು ಪೇಪರ್‌ ಮಿಲ್ಸ್‌ (ಎಂಪಿಎಂ)ಗೆ ಮತ್ತೆ ಲೀಸ್ಗೆ ಕೊಡಬಾರದು ಎಂದು ‘ನಮ್ಮೂರಿಗೆ ಅಕೇಶಿಯ ಮರ ಬೇಡ’ ಸಂಘಟನೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಶ್ರೀಪಾಲ್, ರಾಮಕೃಷ್ಣ ಹೆಗಡೆಯವರ ಕಲದಲ್ಲಿ 20,0000.5 ಹೆಕ್ಟೇರ್ ಭೂಮಿಯನ್ನ ಮೈಸೂರು ಪೇಪರ್‌ ಮಿಲ್ಸ್‌ (ಎಂಪಿಎಂ)ಗೆ ಸುಮಾರು 40 ವರ್ಷ ಲೀಸ್ ನೀಡಲಾಗಿತ್ತು. 2020 ನವೆಂಬರ್‌ 20ಕ್ಕೆ ಈ ಲೀಸ್ ಮುಕ್ತಾಯಗೊಂಡಿದೆ. ಆದರೆ 20,005.42 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಎಂಪಿಎಂಗೆ ಸರ್ಕಾರ ಲೀಸ್‌ಗೆ ನೀಡುವ ಮೂಲಕ ಅವಧಿ ವಿಸ್ತರಿಸಿದೆ. ಇದು ಈಗ ಸಂಘಟನೆ ಕೆಂಗಣ್ಣಿಗೆ ಗುರಿಯಾಗಿದೆ.

ಮಲೆನಾಡಿಗರ ತೀವ್ರ ವಿರೋಧದ ನಡುವೆಯೂ ಸರಕಾರ ಮೈಸೂರು ಪೇಪರ್‌ ಮಿಲ್ಸ್‌ (ಎಂಪಿಎಂ)ಗೆ 20,005.42 ಹೆಕ್ಟೇರ್‌ ಅರಣ್ಯಭೂಮಿ ಮತ್ತು 2611.43 ಹೆಕ್ಟೇರ್‌ ಅರಣ್ಯೇತರ ಭೂಮಿಯನ್ನು ಮತ್ತೆ ಲೀಸ್ ಅವಧಿ ವಿಸ್ತರಿಸಿರುವುದು ಸರಿಯಾದ ನಡೆಯಲ್ಲ ಎಂದು ಹೇಳಿದ್ದಾರೆ.

2020ರಂದು ಎಂಪಿಎಂ 40 ವರ್ಷಗಳ ಕಾಲ ಲೀಸ್ಗೆ ಕೊಡಿ ಎಂದು ಕೇಳಿದಾಗ ಕೇಂದ್ರ ಸರ್ಕಾರ ನಿರಾಕರಿಸಿತ್ತು. ಅಂದಿನ ಡಿಸಿ ಡಾ.ಸೆಲ್ವಮಣಿ ಅವರು ಅಕೇಶಿಯ ಬೆಳೆಯಲು ಬಿಟ್ಟಿರಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಲೆನಾಡಿನ ಪರಿಸ್ಥಿತಿ ಬಗ್ಗೆ ಪತ್ರ ಬರೆದು ಮನವಿ ನೀಡಲಾಗಿದೆ. ಆದರೆ ಈಶ್ವರ್ ಖಂಡ್ರೆ ಮತ್ತು ಅವರ ಪುತ್ರ ಸಾಗರ್ ಖಂಡ್ರೆ ಸಂಸದರಾಗಿ ಆಯ್ಕೆಯಾಗಿ ಮತ್ತೆ ಕೇಂದ್ರ ಸರ್ಕಾರದ ಸಚಿವರಿಗೆ 20 ಸಾವಿರ ಹೆಕ್ಟೇರ್ ಭೂಮಿಯನ್ನು ಎಂಪಿಎಂಗೆ ಮುಂದುವರೆಸಿ ಎಂದು ಕೇಳಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಮೈಸೂರಿನ ಕಾರ್ಖಾನೆ ಮುಚ್ಚಲಾಗಿದೆ. ಅದೀಗ ಅಕೇಶಿಯ ಭೂಮಿ ಅರಣ್ಯಕ್ಕೆ ಬರಬೇಕು. ಆಗುಂಬೆಯಲ್ಲೂ ಅಕೇಶಿಯ ಮರಗಳು ಇವೆ. ಒಂದು ಇಂಚು ಭೂಮಿಯನ್ನ ಕಾರ್ಖಾನೆಗೆ ನೀಡಲು ನಮ್ಮೂರಿಗೆ ಅಕೇಶಿಯ ಬೇಡ ಸಂಘಟನೆ ಆಗ್ರಹಿಸಲಿದೆ.

40 ವರ್ಷದ ಲೀಸ್‌ ಅವಧಿ ಮುಗಿದ ನಂತರ, ಕಾರ್ಖಾನೆಯನ್ನು ಖಾಸಗಿಗೆ ವಹಿಸಿದರೂ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂಬ ಷರತ್ತು ಮೀರಿ ಮತ್ತೆ ಅವಧಿ ವಿಸ್ತರಿಸಿರುವುದರ ಹಿಂದೆ ಕೆಲವರ ಸ್ವ ಹಿತಾಸಕ್ತಿ ಅಡಗಿದೆ ಎಂದು ಆರೋಪಿಸಿದೆ.

ಅಕೇಶಿಯದಂತಹ ಏಕಜಾತಿ ಮರಗಳಿಂದ ಮಲೆನಾಡಿನ ಮೇಲೆ ಆಗುತ್ತಿರುವ ದುಷ್ಪರಿಣಾಮದ ಅರಿವಿದ್ದರೂ ಸರಕಾರ ಕೈಗೊಂಡಿರುವ ನಿರ್ಧಾರ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

More articles

Latest article