ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ, ಪೆನ್ಡ್ರೈವ್ ಸಮೇತ ಅಕ್ರಮದ ಕುರಿತು ಇಂದು(ಮೇ.14) ಬೆಂಗಳೂರಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಖುದ್ದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ದೂರು ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಬಿಜೆಪಿಯಿಂದ ತಾತ್ಕಾಲಿಕವಾಗಿ ಹೊರ ಹಾಕಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್ ಅವರನ್ನು ಆರು ವರ್ಷ ಹೊರ ಹಾಕಿದ್ದರು. ಯಡಿಯೂರಪ್ಪ ಹೋಗಿ ಕಾಲು ಹಿಡಿದು ಮತ್ತೆ ಕರೆತಂದರು. ನಾನು ಈ ಅಮಾನತನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನಾನು ಚುನಾವಣೆ ಗೆಲ್ಲುತ್ತೇನೆ, ಮೋದಿ ಪರ ಕೈ ಎತ್ತುತ್ತೇನೆ ಎಂದು ಹೇಳಿದರು.