ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ಗೆ ಭರ್ಜರಿ ಜಯ, ಬಿಜೆಪಿಗೆ ಮುಖಭಂಗ

Most read

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಯ ಮತದಾನ ಬೆಳಿಗ್ಗೆ ನಡೆದಿದ್ದು, ಈಗ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಭದ್ರಕೋಟೆಯಲ್ಲಿ ಹಾಗೂ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಒಟ್ಟು 13 ಕ್ಷೇತ್ರಗಳ ಪೈಕಿ ಒಂದು ಬಿಜೆಪಿ ಮತ್ತು ಒಂದು ರಾಷ್ಟ್ರ ಭಕ್ತರ ಬಳಗ ಗೆದ್ದಿದೆ. ಉಳಿದ 11ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 

ಬಿಜೆಪಿಯಿಂದ ಶಿಕಾರಿಪುರದ ಡಿ.ಎಲ್.ಬಸವರಾಜ್​ ಮಾತ್ರ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್​ ಬಿಜೆಪಿ ಪೈಪೋಟಿ ಮಧ್ಯ ಸ್ಪರ್ಧೆ ಮಾಡಿದ್ದ ಕೆ ಎಸ್.ಈಶ್ವರಪ್ಪನವರ ರಾಷ್ಟ್ರಭಕ್ತ ಬಳಗದ ಮಹಾಲಿಂಗಶಾಸ್ತ್ರಿ ಅವರು ಗೆಲುವು ಸಾಧಿಸಿದ್ದಾರೆ. 

ಶಿವಮೊಗ್ಗ ಉಪ ವಿಭಾಗ ಇತರೆ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಶಿಮುಲ್‌ ಮಾಜಿ ಅಧ್ಯಕ್ಷ ಜಗದೀಶ್ವರ್‌ (ಕಾಂಗ್ರೆಸ್‌) ಮತ್ತು ಮಹಾಲಿಂಗಯ್ಯ ಶಾಸ್ತ್ರಿ (ರಾಷ್ಟ್ರ ಭಕ್ತರ ಬಳಗ) ಎದುರಿಗೆ ಮೈತ್ರಿಕೂಟದಿಂದ ಹಾಲಿ ನಿರ್ದೇಶಕ ಜೆ.ಪಿ. ಯೋಗೇಶ್‌, ಶಿಮುಲ್‌ ಹಾಲಿ ನಿರ್ದೇಶಕ ಡಿ.ಆನಂದ್‌ (ಇಬ್ಬರೂ ಜೆಡಿಎಸ್‌), ಶಿಮುಲ್‌ನ ಮತ್ತೊಬ್ಬ ಹಾಲಿ ನಿರ್ದೇಶಕ ಎಚ್‌.ಬಿ. ದಿನೇಶ್‌ ಬುಳ್ಳಾಪುರ (ಬಿಜೆಪಿ) ಕಣದಲ್ಲಿದ್ದರು.

ಭದ್ರಾವತಿ ತಾಲೂಕು ಪ್ಯಾಕ್ಸ್‌ನಲ್ಲಿ ಕಾಂಗ್ರೆಸ್‌ ಮುಖಂಡರಾದ ಹಾಲಿ ಉಪಾಧ್ಯಕ್ಷ ಎಚ್‌.ಎಲ್‌. ಷಡಾಕ್ಷರಿ ಮತ್ತು ಸಿ. ಹನುಮಂತು ಕಣದಲ್ಲಿದ್ದರೆ, ಸೊರಬ ತಾಲೂಕು ಪ್ಯಾಕ್ಸ್‌ನಲ್ಲಿ ಮೂವರು ಸ್ಪರ್ಧೆಯಲ್ಲಿದ್ದಾರೆ. ಉಳಿದ ಹತ್ತು ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಸೇರಿದಂತೆ ಹಾಲಿ 10 ನಿರ್ದೇಶಕರು, ಶಿಮುಲ್‌ನ ಆರು ಹಾಲಿ ನಿರ್ದೇಶಕರು ಕಣದಲ್ಲಿದ್ದರು.

ಗೆದ್ದವರು ವಿವರ

ಪ್ಯಾಕ್ಸ್ಗಳು-6 ಗೆದ್ದವರು
ಶಿವಮೊಗ್ಗಕೆ.ಪಿ. ದುಗ್ಗಪ್ಪಗೌಡ (ಕಾಂಗ್ರೆಸ್)
ಭದ್ರಾವತಿಸಿ. ಹನುಮಂತು‌ (ಕಾಂಗ್ರೆಸ್)
ತೀರ್ಥಹಳ್ಳಿಬಸವಾನಿ ವಿಜಯದೇವ್‌ (ಕಾಂಗ್ರೆಸ್)
ಸಾಗರಗೋಪಾಲಕೃಷ್ಣ ಬೇಳೂರು (ಕಾಂಗ್ರೆಸ್)
ಶಿಕಾರಿಪುರಚಂದ್ರಶೇಖರಗೌಡ (ಕಾಂಗ್ರೆಸ್)
ಸೊರಬಕೆ.ಪಿ. ರುದ್ರಗೌಡ (ಕಾಂಗ್ರೆಸ್)

ಕೃಷಿ ಉತ್ಪನ್ನ ಮಾರಾಟ -2

ಶಿವಮೊಗ್ಗ ಉಪವಿಭಾಗಆರ್‌.ಎಂ.ಮಂಜುನಾಥ ಗೌಡ
ಸಾಗರ ಉಪವಿಭಾಗಜಿ.ಎನ್‌. ಸುಧೀರ್‌  (ಕಾಂಗ್ರೆಸ್)

ಪಟ್ಟಣ ಸಹಕಾರ ಬ್ಯಾಂಕ್‌ಗಳು-2

ಶಿವಮೊಗ್ಗ ಉಪವಿಭಾಗಮರಿಯಪ್ಪ
ಸಾಗರ ಉಪವಿಭಾಗಡಿ.ಎಲ್ ಬಸವರಾಜ (ಬಿಜೆಪಿ)

ಇತರೆ ಸಹಕಾರ ಸಂಘಗಳು-2

ಶಿವಮೊಗ್ಗ ಉಪವಿಭಾಗಮಹಾಲಿಂಗಶಾಸ್ತ್ರಿ (ರಾಷ್ಟ್ರಭಕ್ತ ಬಳಗದ)
ಸಾಗರ ಉಪವಿಭಾಗಟಿ. ಶಿವಶಂಕರಪ್ಪ (ಕಾಂಗ್ರೆಸ್)

 

 

 

More articles

Latest article